ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಬಂಧನ: ಡಿಎಸ್‍ಎಂಎಂ ಖಂಡನೆ

ಸಂಪುಟ: 
11
ಸಂಚಿಕೆ: 
26
Sunday, 18 June 2017

ಉತ್ತರಪ್ರದೇಶದ ಭೀಮ್ ಆರ್ಮಿ ಎಂಬ ಸಂಘಟನೆಯ ಮುಖ್ಯಸ್ಥರಾದ ಚಂದ್ರಶೇಖರ್ ಅವರನ್ನು ಜೂನ್ 8 ರಂದು ಹಿಮಾಚಲ ಪ್ರದೇಶದಲ್ಲಿ ಉತ್ತರಪ್ರದೇಶದ ವಿಶೇಷ ಕಾರ್ಯಪಡೆ(ಎಸ್‍ಐಟಿ) ಬಂಧಿಸಿದೆ ಎಂದು ವರದಿಯಾಗಿದೆ. ಇದನ್ನು ದಲಿತ ಶೋಷಣ ಮುಕ್ತಿ ಮಂಚ್(ಡಿಎಸ್‍ಎಂಎಂ) ಖಂಡಿಸಿದೆ. ಇದಕ್ಕೆ ಮೊದಲು ಜೂನ್ 5ರಂದು ಶಬ್ಬೀರ್‍ಪುರದ ಪಂಚಾಯï್ತ ಪ್ರಧಾನರಾದ ಶಿವಕುಮಾರ್ ಅವರನ್ನು ಬಂಧಿಸಲಾಗಿತ್ತು. ವಾಸ್ತವವಾಗಿ ಮೇಲ್ಜಾತಿ ಗಲಭೆಕೋರರು ಇವರ ಮನೆಯನ್ನು ಸುಟ್ಟಿದ್ದಾರೆ, ಅವರ 23 ವರ್ಷದ ಮಗನ ಮೇಲೆ ಮಾರಣಾಂತಿಕ ದಾಳಿ ನಡೆಸಲಾಗಿದ್ದು ಅದರಿಂದ ಉಂಟಾದ ಹಲವು ಗಾಯಗಳಿಂದಾಗಿ ನಾಲ್ಕು ಸರ್ಜರಿಗಳಗೆ ಒಳಗಾಗಬೇಕಾಗಿದೆ. ಇನ್ನೂಇತರ ಹಲವಾರು ದಲಿತರನ್ನು ಬಂಧಿಸಲಾಗಿದೆ. ಆದರೆ ಸಹರಾಪುರ್ ಮತ್ತು ಶಬ್ಬೀರ್‍ಪುರದಲ್ಲಿ ದಲಿತರ ಮೇಲೆ ದಾಳಿ, ಹಿಂಸಾಚಾರ ನಡೆಸಿದವರನ್ನು ಇನ್ನೂ ಮುಟ್ಟಿಲ್ಲ ಎಂದು ಡಿಎಸ್‍ಎಂಎಂ ಖೇದ ವ್ಯಕ್ತಪಡಿಸಿದೆ.
 

ದಲಿತರ ಮೇಲೆ ದಾಳಿಗಳು ಮತ್ತು ಹಿಂಸಾಚಾರಕ್ಕೆ ಕಾರಣರಾವರನ್ನೆಲ್ಲ ಬಂಧಿಸಬೇಕು ಮತ್ತು ಅವರನ್ನೆಲ್ಲ ಪರಿಶಿಷ್ಟ ಜಾತಿ/ ಬುಡಕಟ್ಟು ಅತ್ಯಾಚಾರ ತಡೆ ಕಾಯ್ದೆಯ ಅಡಿಯಲ್ಲಿ ಮತ್ತು ಇತರ ಸಂಬಂಧಪಟ್ಟ ಸೆಕ್ಷನ್‍ಗಳ ಅಡಿಯಲ್ಲಿ ವಿಚಾರಣೆಗೆ ಗುರಿಪಡಿಸಬೇಕು, ದಾಳಿಗಳಿಗೆ ಒಳಗಾಗಿ ತೊಂದರೆ ಅನುಭವಿಸಿದವರಿಗೆ ಸಾಕಷ್ಟು ಪರಿಹಾರ ಒದಗಿಸಬೇಕು ಎಂದು ಡಿಎಸ್‍ಎಂಎಂ ಆಗ್ರಹಿಸಿದೆ.