ಕೇಸರಿ ಪಡೆಗಳ ಬೆದರಿಕೆ ತಂತಕ್ಕೆ ಜಗ್ಗುವುದಿಲ್ಲ

ಸಂಪುಟ: 
11
ಸಂಚಿಕೆ: 
25
Sunday, 11 June 2017

ಪೊಲಿಟ್‍ಬ್ಯುರೊ ಸಭೆಯ ನಂತರ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚುರಿಯವರು ನಡೆಸಲಿದ್ದ ಪತ್ರಿಕಾ ಸಮ್ಮೇಳನವನ್ನು ಛಿದ್ರಗೊಳಿಸಲು ಆರೆಸ್ಸೆಸ್‍ಗೆ ಸೇರಿದ ಸಂಘಟನೆಯ ಇಬ್ಬರು ಪ್ರಯತ್ನಿಸಿರುವುದನ್ನು ಸಿಪಿಐ(ಎಂ) ಪೊಲಿಟ್‍ಬ್ಯುರೊ ಬಲವಾಗಿ ಖಂಡಿಸಿದೆ.

ತಾವು ಪತ್ರಕರ್ತರೆಂದು ಹೇಳಿಕೊಳ್ಳುತ್ತ ಸಭಾಂಗಣವನ್ನು ಪ್ರವೇಶಿಸಿದ ಇವರು ಸಿಪಿಐ(ಎಂ) ವಿರೋಧಿ ಘೋಷಣೆಗಳನ್ನು ಕೂಗಲಾರಂಭಿಸಿದರು. ಅಲ್ಲಿದ್ದ ಸಿಪಿಐ(ಎಂ) ಕಾರ್ಯಕರ್ತರು ತಕ್ಷಣ ಅವರನ್ನು ಹಿಡಿದುಕೊಂಡು ಅಲ್ಲಿ ಇದ್ದ ಪೋಲೀಸರಿಗೆ ಒಪ್ಪಿಸಿದರು.

ಇದು ಪ್ರತಿಪಕ್ಷಗಳನ್ನು ಬೆದರಿಸಿ ತಲೆಬಾಗುವಂ,ತೆ ಮಾಡುವ ಆರೆಸ್ಸೆಸ್‍ನ ವಿಧಾನ. ಇಂತಹ ತಂತ್ರಗಳು ಯಶಸ್ವಿಯಾಗಲು ಬಿಡುವುದಿಲ್ಲ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಹೇಳಿದೆ.