ಮಧ್ಯಪ್ರದೇಶದಲ್ಲಿ ರೈತರ ಮೇಲೆ ಗೋಲೀಬಾರ್ -ಜೂನ್ 9ರಂದು ದೇಶವ್ಯಾಪಿ ಸೌಹಾರ್ದ ಕಾಯಾಚರಣೆಗೆ ಎಐಕೆಎಸ್ ಕರೆ

ಸಂಪುಟ: 
11
ಸಂಚಿಕೆ: 
25
Sunday, 11 June 2017

ರೈತ-ವಿರೋಧಿ ಬಿಜೆಪಿ ಸರಕಾರದ ಮೂರನೇ ವಾಷಿಕೋತ್ಸವಕ್ಕೆ ಐಕ್ಯ ರೈತ ಹೋರಾಟಗಳ ಕೊಡುಗೆ!

ಮಧ್ಯಪ್ರದೇಶದ ಮಂದಸೌರ್‌ನಲ್ಲಿ ರೈತರ ಮೇಲೆ ಗೋಲೀಬಾರ್ ವಿರುದ್ಧ ದೇಶಾದ್ಯಂತ ಭಾರೀ ಖಂಡನೆಗಳು ಬಂದಿವೆ, ಪ್ರತಿಭಟನೆಗಳು ನಡೆದಿವೆ. ದೇಶದ ರಾಜಧಾನಿಯಲ್ಲಿ ಮಧ್ಯಪ್ರದೇಶ ಭವನದ ಎದುರು ಜಸಿವರಾಜ್ ಸಿಂಗ್ ಸರಕಾರದ ವಿರುದ್ಧ ಜೂನ್ ೭ರಂದು ಪ್ರತಿಭಟನೆ ನಡೆಯಿತು. ಅಖಿಲ ಭಾರತ ಕಿಸಾನ್ ಸಭಾ, ಭೂಮಿ ಅಧಿಕಾರ್ ಆಂದೋಲನ್, ದಿಲ್ಲಿ ಸಾಲಿಡಾರಿಟಿ ಗ್ರುಪ್, ಜೆಎನ್‌ಯು ವಿದ್ಯಾರ್ಥಿ ಸಂಘ, ಜನವಾದಿ ಮಹಿಳಾ ಸಮಿತಿ, ದಲಿತ ಶೋಷಣ ಮುಕ್ತಿ ಮಂಚ್, ಅನ್ಹದ್ ಮತ್ತಿತರ ಸಂಘಟನೆಗಳ ಪ್ರತಿನಿಧಿಗಳು ಮತಪ್ರದರ್ಶನ ನಡೆಸಿದರು.

ಎಐಕೆಎಸ್ ಪ್ರಧಾನ ಕಾರ್ಯದರ್ಶಿ ಹನ್ನನ್ ಮೊಲಲ್, ಜಂಟಿ ಕಾರ್ಯದರ್ಶಿ ವಿಜೂ ಕೃಷ್ಣನ್, ಹಣಕಾಸು ಕಾರ್ಯದರ್ಶಿ ಪಿ.ಕೃಷ್ಣಪ್ರಸಾದ್, ಜೆಎನ್‌ಯು ವಿದ್ಯಾರ್ಥಿಸಂಗದ ಅ ಧ್ಯಕ್ಷ ಮೊಹಿತ್ ಪಾಂಡೆ, ಡಿಎಸ್‌ಜಿಯ ಶಾಂತಿ ಸ್ನಿಗ್ಧಾ ಮೊಹಂತಿ ಇವರಿದ್ದ ನಿಯೋಗವೊಮದು ಮಧ್ಯಪ್ರದೇಶ ಭವನದ ಮುಖ್ಯಸ್ಥರನ್ನು ಭೇಟಿ ಮಾಡಿ ಒಂದು ಪ್ರತಿಭಟನಾ ಪತ್ರವನ್ನು ಸಲ್ಲಿಸಿದರು.

ಮಧ್ಯಪ್ರದೇಶದಲ್ಲಿ ಎಲ್ಲೆಡೆ ಬಿಜೆಪಿ ಕಾರ್ಯಕರ್ತರ ಗೂಂಡಾಗಿರಿಯನ್ನು ಲೆಕ್ಕಿಸದೆ ಪ್ರತಿಭಟನೆಗಳು, ಮುಖ್ಯಮಂತ್ರಿಗಳ ಪ್ರತಿಕೃತಿ ದಹನ ಕಾರ್ಯಕ್ರಮಗಳು ನಡೆದವು.