ಚೆಗೆವಾರ ಜನ್ಮ ದಿನ

14 ಜೂನ್ 1928

ಜಗತ್ತಿನಾದ್ಯಂತ ಯುವ ಜನರ ಆರಾಧ್ಯಮೂರ್ತಿ, ಈಗಲೂ ತೀವ್ರ ಹೋರಾಟದ ಸನ್ನಿವೇಶಗಳಲ್ಲಿ ಎಲ್ಲರೂ ನೆನಪಿಸಿಕೊಳ್ಳುವ ಹೆಸರು. ಕ್ಯೂಬಾದ ಕ್ರಾಂತಿಗೆ ಫಿಡೆಲ್‌ಕಾಸ್ಟ್ರೊರವರ ಜೊತೆಗೂಡಿ ನೇತೃತ್ವ ನೀಡಿದ ಚೆ, ಲ್ಯಾಟಿನ್ ಅಮೆರಿಕಾದಲ್ಲಿ ಕ್ರಾಂತಿಯ ಸಂದೇಶವನ್ನು ಹರಡುವ ಪ್ರಕ್ರಿಯೆಯಲ್ಲಿ ಬೊಲಿವಿಯಾದ ಗೊಂಡಾರಣ್ಯದಲ್ಲಿ ಅಕ್ಟೋಬರ್ ೯, ೧೯೬೭ ರಂದು ಅಮೆರಿಕನ್ ಸಾಮ್ರಾಜ್ಯಶಾಹಿಯ ಬಂಟರಗುಂಡಿಗೆ ಎದೆಕೊಟ್ಟರು. ಚೆ ಹುತಾತ್ಮರಾದಾಗ ಅವರ ವಯಸ್ಸು ೩೯ ವರ್ಷ. ’ವ್ಯಕ್ತಿಗಳನ್ನು ತುಳಿದು ಹಾಕುವುದರಿಂದ ಯಾರೂ ಅವರ ವಿಚಾರಗಳನ್ನು ಕೊಲ್ಲಲಾರರು’ ಎಂದಿದ್ದರು. ನಮ್ಮ ಉಪಖಂಡದಲ್ಲಿ ಈಗಲೂ ಯುವಜನರ ಆರಾಧ್ಯಮೂರ್ತಿಯಾಗಿರುವ ಭಗತ್ ಸಿಂಗ್. ಅಮೆರಿಕನ್ ಸಾಮ್ರಾಜ್ಯಶಾಹಿಯ ಬಂಟರು ಬಂದೂಕು ಹಿಡಿದು ಸುತ್ತುವರೆದಿದ್ದಾಗ ಚೆ ’ನೀವು ನನ್ನನ್ನು ಕೊಲ್ಲಲು ಬಂದಿದ್ದೀರೆಂದು ನನಗೆ ಗೊತ್ತು. ಹೇಡಿಗಳೇ, ಗುಂಡು ಹಾರಿಸಿ, ನೀವು ಏನಿದ್ದರೂ ಒಬ್ಬ ಮನುಷ್ಯನನ್ನು ಮಾತ್ರ ಕೊಲ್ಲಲು ಸಾಧ್ಯ.’ ಎಂದಿದ್ದರು. ಅವರಿಬ್ಬರು ಹೇಳಿದಂತೆ, ಅವರ ಕನಸುಗಳನ್ನು, ವಿಚಾರಗಳನ್ನು ಅಳಿಸಲು ಮಾನವತೆಯ ಶತ್ರುಗಳಿಗೆ ಆಗಿಲ್ಲ ಎಂಬುದಕ್ಕೆ ಅವರು ಹುತಾತ್ಮರಾದ ನಂತರದ ಇತಿಹಾಸವೇ ಸಾಕ್ಷಿ.

Image: