ನಾರದ ತನಿಖೆ: “ಟಿಎಂಸಿ-ಬಿಜೆಪಿ ರಾಜಕೀಯ ಶಾಮೀಲು ದಾರಿ ತಪ್ಪಿಸಬಾರದು”

ಸಂಪುಟ: 
11
ಸಂಚಿಕೆ: 
15
Sunday, 2 April 2017

ಮಾರ್ಚ್ 29ರಂದು ಕೊಲ್ಕತಾದಲ್ಲಿ ಒಂದು ಬೃಹತ್ ಪ್ರತಿಭಟನಾ ಮೆರವಣಿಗೆ ಮತ್ತು ಸಭೆ ನಡೆಯಿತು. ಕೊನೆಗೂ ಹೈಕೋರ್ಟ್ ಆದೇಶದಂತೆ ಆರಂಭವಾಗಿರುವ ಸಿಬಿಐ ತನಿಖೆಯನ್ನು ಟಿಎಂಸಿ-ಬಿಜೆಪಿ ರಾಜಕೀಯ ಶಾಮೀಲು ದಾರಿ ತಪ್ಪಿಸಬಾರದು ಎಂದು ಎಡರಂಗ ಏರ್ಪಡಿಸಿದ್ದ ಈ ಸಭೆಯಲ್ಲಿ ಮಾತಾಡುತ್ತ ರಾಜ್ಯ ಸಿಪಿಐ(ಎಂ) ಕಾರ್ಯದರ್ಶಿ ಸೂರ್ಯಕಾಂತ್ ಮಿಶ್ರ ಆಗ್ರಹಿಸಿದ್ದಾರೆ. ನಾರದ ಕುಟುಕು ಕಾರ್ಯಾಚರಣೆಯಲ್ಲಿ ಆಪಾದಿತರಾಗಿರುವ ಎಲ್ಲರೂ ರಾಜೀನಾಮೆ ನೀಡಬೇಕೆಂದು ಈ ರಾಲಿಯಲ್ಲಿ ಆಗ್ರಹಿಸಲಾಯಿತು. 

ಲೋಕಸಭೆಯ ನೈತಿಕ ಸಮಿತಿ ಬಿಜೆಪಿಯ ನೇತೃತ್ವದಲ್ಲಿದ್ದರೂ ಇದುವರೆಗೂ ನಾರದ ಹಗರಣದ ಬಗ್ಗೆ ಒಂದೇ ಒಂದು ಸಭೆ ನಡೆದಿಲ್ಲ ಎಂಬುದು ಗಮನಾರ್ಹ.