ನಾಗ ಶಾಂತಿ ಒಪ್ಪಂದದ ಪೂರ್ಣ ಪಾಟವನ್ನು ಪ್ರಧಾನಿಗಳು ಬಿಡುಗಡೆ ಮಾಡುತ್ತಿಲ್ಲವೇಕೆ? - ಸೀತಾರಾಮ್ ಯೆಚುರಿ

ಸಂಪುಟ: 
11
ಸಂಚಿಕೆ: 
15
Sunday, 2 April 2017

ಆಗಸ್ಟ್ 3,2015 ರಂದು ಸಹಿ ಹಾಕಿರುವ ಒಪ್ಪಂದದಪ್ರಕಾರ ‘ಬೃಹತ್ ನಾಗಲಿಂ’ ಈಗಿನ ನಾಗಾಲ್ಯಾಂಡಿನ ಜೊತೆಗೆ ಅಸ್ಸಾಂ, ಮಣಿಪುರ ಮತ್ತು ಅರುಣಾಚಲ ಪ್ರದೇಶದಲ್ಲಿ ನಾಗ ಜನಗಳು ವಾಸಿಸುತ್ತಿರುವ ಪ್ರದೇಶಗಳೂ ಸೇರಿರುತ್ತವೆ ಎಂದು ಎನ್‍ಎಸ್‍ಸಿಎನ್(ಐಎಂ) ಮುಖಂಡ ಥುಯಿಂಗಲೆಂಗ್ ಮುಯ್‍ವಹ್ ಈ ವಾರ ಹೇಳಿದ್ದಾರೆ. ಕೇಂದ್ರ ಸರಕಾರ ಈತನೊಂದಿಗೆ ಸಹಿ ಮಾಡಿ ‘ಚೌಕಟ್ಟು ಒಪ್ಪಂದ’ದಲ್ಲಿ ಈ ಅಂಶ ಇದೆ ಎಂದು ಆತ ಹೇಳಿದ್ದಾರೆ. 

ಇದಕ್ಕೆ ಪ್ರತಿಕ್ರಿಯಿಸುತ್ತ “ಇದು ದೋಷಪೂರಿತ ವರದಿ. ಭಾರತ ಸರಕಾರದಿಂದ ಇಂತಹ ಒಪ್ಪಂದ ಅಥವ ನಿರ್ಣಯ ಇಲ್ಲ” ಎಂದು ಕೇಂದ್ರ ಸರಕಾರದ ಗೃಹ ಮಂತ್ರಾಲಯದ ವಕ್ತಾರರು ಹೇಳಿದ್ದಾರೆ.

ಅದರೆ ಇದುವರೆಗೂ ಕೇಂದ್ರ ಸರಕಾರ ಈ ಒಪ್ಪಂದವನ್ನು ಗುಟ್ಟಾಗಿಯೇ ಇಟ್ಟಿದೆ. ಪ್ರಧಾನ ಮಂತ್ರಿಗಳು ಈ ಒಪ್ಪಂದವನ್ನು ಬಹಿರಂಗ ಪಡಿಸುತ್ತಿಲ್ಲವೇಕೆ  ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚುರಿ ಪ್ರಶ್ನಿಸಿದ್ದಾರೆ.