ತಮಿಳುನಾಡು: ಜಮೀನು ಪಟ್ಟಾಕ್ಕಾಗಿ ದಲಿತರ ಹೋರಾಟಕ್ಕೆ ಗೆಲುವು

ಸಂಪುಟ: 
11
ಸಂಚಿಕೆ: 
15
Sunday, 2 April 2017

ತಮಿಳುನಾಡು ಅಸ್ಟೃಶ್ಯತಾ ನಿವಾರಣಾ ರಂಗ(ಟಿಎನ್‍ಯುಇಎಫ್) ನೇತೃತ್ವದಲ್ಲಿ ಧರ್ಮಪುರಿ ಜಿಲ್ಲೆಯ ಪೆನ್ಗರಂ ನಲ್ಲಿ 345 ದಲಿತ ಕುಟುಂಬಗಳು ತಮ್ಮ ಜೀವನಾಧಾರಕ್ಕೆ ಭೂಮಿ ಪಡೆಯುವ ಹೋರಾಟವನ್ನು ನಡೆಸಿದ್ದರು. ಈ ಹೋರಾಟ ಯಶಸ್ವಿಯಾಗಿದೆ. 

ಕಳೆದ ವಾರ ಆರ್‍ಡಿಒ ತಮ್ಮ ಸಿಬ್ಬಂದಿಯೊಂದಿಗೆ ಈ ಹಳ್ಳಿಗೆ ಬಂದು 8.77 ಎಕ್ರೆ ಜಮೀನನ್ನು ಗುರುತಿಸಿದ್ದಾರೆ. ರೆವಿನ್ಯೂ ಇಲಾಖೆಯ ಅಧಿಕಾರಿಗಳು ಮತ್ತು ಟಿಎನ್‍ಯುಇಎಫ್ ಸದಸ್ಯರಿರುವ 11 ಸದಸ್ಯರ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿ ಒಂದು ತಿಂಗಳೊಳಗೆ ಪಟ್ಟಾಗಳನ್ನು ತಯಾರಿಸುತ್ತದೆ. ಈ ಸಭೆಯಲ್ಲಿ ಮಾತಾಡುತ್ತ ಟಿಎನ್‍ಯುಇಎಫ್ ರಾಜ್ಯ ಕಾರ್ಯದರ್ಶಿ ಸ್ಯಾಮುವೆಲ್ ರಾಜ್ “ಭೂಮಿ ನಮ್ಮ ಹಕ್ಕು. ಭೂಮಿಗಾಗಿ ಹೋರಾಟ ಮುಂದು ವರೆಯುತ್ತದೆ” ಎಂದರು.