Error message

  • Deprecated function: Methods with the same name as their class will not be constructors in a future version of PHP; views_display has a deprecated constructor in require_once() (line 3097 of /home/janashakthi/public_html/includes/bootstrap.inc).
  • Deprecated function: Methods with the same name as their class will not be constructors in a future version of PHP; views_many_to_one_helper has a deprecated constructor in require_once() (line 113 of /home/janashakthi/public_html/sites/all/modules/ctools/ctools.module).

ಕಾಶ್ಮೀರ ಕಣಿವೆ: ಮೂರು ನಾಗರಿಕರ ಸಾವಿನೊಂದಿಗೆ ಮತ್ತೆ ಅಶಾಂತಿಯ ವಾತಾವರಣ

ಸಂಪುಟ: 
11
ಸಂಚಿಕೆ: 
15
Sunday, 2 April 2017

ಕಾಶ್ಮೀರ ಕಣಿವೆಯ ಚದೂರ ಬುದ್ಗಾಮ್ ಎಂಬಲ್ಲಿ ಮತ್ತೆ ಮೂವರು ನಾಗರಿಕರು ಭದ್ರತಾ ಪಡೆಗಳ ಕಾರ್ಯಾಚರಣೆಯಲ್ಲಿ ಅಸು ನೀಗಿದ್ದಾರೆ, 18 ಮಂದಿ ಗಾಯಗೊಂಡಿದ್ದಾರೆ. ಇದರ ವಿರುದ್ಧ ಕಾಶ್ಮೀರ ಕಣಿವೆಯಾದ್ಯಂತ ಮಾರ್ಚ್ 29ರಂದು ಪ್ರತಿಭಟನೆ ವ್ಯಕ್ತವಾಗಿದೆ. ಇದರಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ ಎಂದು ವರದಿಯಾಗಿದೆ. ಕಾಶ್ಮೀರ ವಿಶ್ವವಿದ್ಯಾಲಯ, ಕೇಂದ್ರೀಯ ವಿಶ್ವವಿದ್ಯಾಲಯ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವದ್ಯಾಲಯದ ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದೂ ಹೇಳಲಾಗಿದೆ.

ಮತ್ತೆ ನಾಗರಿಕರ ಪ್ರಾಣಹಾನಿಯಾಗಿರುವ ಬಗ್ಗೆ ಜಮ್ಮು-ಕಾಶ್ಮೀರದ ಹಿರಿಯ ಸಿಪಿಐ(ಎಂ) ಮುಖಂಡರೂ, ಶಾಸಕರೂ ಆದ ಮಹಮ್ಮದ್ ಯೂಸುಫ್ ತರಿಗಾಮಿ ಆಘಾತ ಮತ್ತು ದುಃಖ ವ್ಯಕ್ತಪಡಿಸಿದ್ದಾರೆ. ಭದ್ರತಾ ಪಡೆಗಳು ಸಂಯಮದಿಮದ ವರ್ತಿಸಿದ್ದರೆ ಇದನ್ನು ತಪ್ಪಿಸಬಹುದಿತ್ತು ಎಂದು ಅವರು ಹೇಳಿದ್ದಾರೆ. 

ಕಾನೂನು ಜಾರಿಗೊಳಿಸುವ ಸಂಸ್ಥೆಗಳು ಹಿಂದಿನ ಇಂತಹ ಅನುಭವಗಳಿಂದ ಪಾಟ ಕಲಿಯಲು ನಿರಾಕರಿಸುತ್ತಿವೆ, ಇದು ಪರಿಸ್ಥಿತಿಯನ್ನು ಇನ್ನಷ್ಟು ಉದ್ವಿಗ್ನಗೊಳಿಸುವುದು ಖಂಡಿತ. ಇಂತಹ ಬೇಜವಾಬ್ದಾರಿತನವನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

“ದುರದೃಷ್ಟವಶಾತ್ ನಾಗರಿಕರು ಮತ್ತು ಉಗ್ರಗಾಮಿಗಳ ನಡುವೆ ವ್ಯತ್ಯಾಸವನ್ನು ಮಾಡಲಾಗುತ್ತಿಲ್ಲ.” ಎಂದು ಖೇದ ವ್ಯಕ್ತಪಡಿಸಿರುವ ಅವರು ಭದ್ರತಾ ಪಡೆಗಳು ಎರ್ರಾಬಿರ್ರಿಯಾಗಿ ವರ್ತಿಸುವುದನ್ನು ತಕ್ಷಣವೇ ನಿಲ್ಲಿಸಬೇಕು ಎಂದಿದ್ದಾರೆ.

ಹಿರಿಯ ಪತ್ರಕರ್ತ ಪ್ರೇಮ್ ಶಂಕರ್ ಝಾ ಅವರು ಕಾಶ್ಮೀರ ಮಹಾವಿತ್ತಿನತ್ತ ಸಾಗುತ್ತಿದೆ ಎಂದು ಖೇದದಿಂದ ಹೇಳಿದ್ದಾರೆ. ಬುದ್ಗಾಮ್‍ನಲ್ಲಿ ಸಂಭವಿಸಿರುವ ಈ ಘಟನೆಯ ಬಗ್ಗೆ ಬರೆಯುತ್ತ ಇದುವರೆಗೆ ಈ ಸಂಘರ್ಷದಿಂದ ದೂರ ಇದ್ದ ಕಾಶ್ಮೀರ ಕಣಿವೆಯ ಗ್ರಾಮಸ್ಥರು ಈಗ ಭದ್ರತಾ ಪಡೆಗಳು ಸುತ್ತುವರೆಯುವ ಉಗ್ರಗಾಮಿಗಳನ್ನು ಉಳಿಸಲು ಸಾಯಲಿಕ್ಕೂ ಸಿದ್ಧರಾಗಿದ್ದಾರೆ. ಈ ಬೇಸಿಗೆ ಕಳೆಯುವದರ ಒಳಗೆ ದೇಶ ಕಾಶ್ಮೀರದಲ್ಲಿ ಒಂದು ಯುದ್ಧವನ್ನು ಎದುರಿಸಬೇಕಾಗಿ ಬರಬಹುದು. ಇದಕ್ಕೆ ಕಾರಣ ಚಳಿಗಾಲದಲ್ಲಿ ದೊರೆತ ತುಸು ವಿರಾಮವನ್ನು ಕಳೆದ ಬೇಸಿಗೆಯಲ್ಲಿ ಭುಗಿಲೆದ್ದ ಆಕ್ರೋಶವನ್ನು ತಣಿಸಲು ಮತ್ತು ಶಾಂತಿಯತ್ತ ಒಯ್ಯಬಹುದಾಗಿದ್ದ ಒಂದು ರಾಜಕೀಯ ಸಂವಾದವನ್ನು ಪುನರಾರಂಭಿಸಲು ಬಳಸುವ ಬದಲು ಭದ್ರತಾ ಪಡೆಗಳು ಮತ್ತು ಕಾಶ್ಮೀರ ಪೋಲೀಸರು ಇಡೀ ಚಳಿಗಾಲವನ್ನು ಉಗ್ರಗಾಮಿಗಳನ್ನು ಬೇಟೆಯಾಡವಲ್ಲಿ ಮತ್ತು ‘ಅಗತ್ಯ’ವೆನಿಸಿದಾಗ ಕೊಲ್ಲುವಲ್ಲಿಯೇ ಕಳೆದಿದ್ದಾರೆ ಎನ್ನುತ್ತಾರೆ ಅವರು.