ಗುಜರಾತ್ ವಿಧಾನಸಭಾ ಚುನಾವಣೆಯ ಅಜೆಂಡಾ ಸಿದ್ಧವಾಗುತ್ತಿದೆ

ಸಂಪುಟ: 
11
ಸಂಚಿಕೆ: 
15
Sunday, 2 April 2017

ಗುಜರಾತಿನಲ್ಲಿ ಈ ಡಿಸೆಂಬರ್‍ನಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಬೇಕಾಗಿದೆ. ಅದಕ್ಕೆ ಸಿದ್ಧರಾಗಿ ಎಂದು ಪ್ರಧಾನ ಮಂತ್ರಿಗಳು ತಮ್ಮ ಪಕ್ಷದವರಿಗೆ ಕರೆ ನಿಡಿದ್ದಾರೆ. ಆ ಸಿದ್ಧತೆಯಾಗಿಯೋ ಎಂಬಂತೆ  ಆಗಲೇ ಅಲ್ಲಿ ಕೋಮುವಾದಿ ವಾತಾವರಣ ಸೃಷ್ಟಿಯಾಗುತ್ತಿರುವಂತೆ ಕಾಣುತ್ತದೆ. ಇದರ ಮೊದಲ ಸೂಚನೆಗಳೆಂಬಂತೆ ಉತ್ತರ ಗುಜರಾತಿನ ಒಂದು ಹಳ್ಳಿಯಲ್ಲಿ ಕೋಮು ಗಲಭೆಯಲ್ಲಿ ಒಬ್ಬನ ಬಲಿಯಾಗಿದೆ. ಇತ್ತ ರಾಜಧಾನಿಯ ಪ್ರಮುಖ ನಗರ ಕೇಂದ್ರದಲ್ಲಿ ಒಂದು ‘ವಿರಾಟ್ ಹಿಂದು ಸಮ್ಮೇಳನ’ ನಡೆದು 12 ಅಂಶಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಅದರ ಹೆಸರೇ ‘ಮೊದಲು ಹಿಂದು’.

ಪಟಾನ್ ಜಿಲ್ಲೆಯ ವಡವಳಿ ಎಂಬುದು ಸಾಕಷ್ಟು ಸಂಖ್ಯೆಯಲ್ಲಿ ಅಲ್ಪಸಂಖ್ಯಾತ ಸಮುದಾಯದವರು ವಾಸಸಿತ್ತಿರುವ ಹಳ್ಳಿ. 10ನೇ ತರಗತಿ ಬೋರ್ಡ್ ಪರೀಕ್ಷೆ ಮುಗಿಸಿ ಮನೆಗಳಿಗೆ ಹಿಂದಿರುಗುತ್ತಿದ್ದ ವಿದ್ಯಾರ್ಥಿಗಳ ನಡುವೆ ಒಂದು ಸಣ್ಣ ಜಗಳ ನಡೆಯಿತು. ನೋಡನೋಡುತ್ತಿರುವಷ್ರಲ್ಲಿ ಇದು ಕೋಮುಗಲಭೆಯ ರೂಪ  ಪಡೆದು ಸುತ್ತಮುತ್ತಲ ಹಳ್ಳಿಗಳಿಗೂ ಹರಡಿತು. ಒಬ್ಬ ವ್ಯಕ್ತಿ ಸಾವನ್ನಪ್ಪಿದ. ಆತ ಅಲ್ಪಸಂಖ್ಯಾತ ಸಮುದಾಯದ ಹಿರಿ ವಯಸ್ಸಿನ ವ್ಯಕ್ತಿ. 50 ಮನೆಗಳಿಗೆ ಬೆಂಕಿ ಬಿತ್ತು. 10 ಮಂದಿಗೆ ತೀವ್ರ ಗಾಯಗಳಾದವು. ರಾಜ್ಯ ಮೀಸಲು ಪಡೆಯನ್ನು ತಂದು ನಿಲ್ಲಿಸಿ ಪರಿಸ್ಥಿತಿಯನ್ನು ಹತೊಟಿಗೆ ತರಬೇಕಾಗಿ ಬಂತು. ಇನ್ನಷ್ಟು ಕೋಮು ಹಿಂಸಾಚಾರದ ಭಯದಿಂದ ಜನ  ಪಕ್ಕದ ಹಳ್ಳಿಗೆ ಓಡಿ ಹೋಗಿ ಅಲ್ಲಿಯ ಮೆಡಿಕಲ್ ಕಾಲೇಜೊಂದರಲ್ಲಿ ಆಶ್ರಯ ಪಡೆಯಬೇಕಾಯಿತು. ಅವರೆಲ್ಲರೂ ಅಲ್ಪಸಂಖ್ಯಾತ ಸಮುದಾಯದ ವರಾಗಿದ್ದದ್ದು ಕಾಕತಾಳೀಯ ಆಗಿರಲಿಲ್ಲ.

ಆದರೂ ಇದಾದ 24 ಗಂಟೆಗಳೊಳಗೆ ಅಹಮಾದಾಬಾದಿನಲ್ಲಿ ನಡೆದ ‘ವಿರಾಟ್ ಹಿಂದೂ ಸಮ್ಮೇಳನ’ದಲ್ಲಿ  ವಿಹೆಚ್‍ಪಿಯ ‘ಅಂತರ್ರಾಷ್ಟ್ರೀಯ ಅಧ್ಯಕ್ಷ’g  ಡಾ.ಪ್ರವೀಣ್ ತೊಗಾಡಿಯ ಎಮದಿನಂತೆ ಹಿಂದುಗಳು ಬಾರತದಲ್ಲಿ ಬಹುಸಂಖ್ಯಾತರಾಗಿದ್ದರೂ ಜಂಟಿಯಾಗಿ ಅನ್ಯಾಯ ಮತ್ತು ಅಭದ್ರತೆಯನ್ನು ಎದುರಿಸುತ್ತಿದ್ದಾರೆ ಎಂದು ಗುಡುಗಿದರು. ಈ ಸಮ್ಮೇಳನವನ್ನು ಏರ್ಪಡಿಸಿದ್ದು  ವಿಹೆಚ್‍ಪಿ, ಭಜರಂಗ ದಳ ಮತ್ತು ದುರ್ಗಾವಾಹಿನಿ. 

ಈ ಸಮ್ಮೇಳನದಲ್ಲಿ ತೊಗಾಡಿಯ  ಬಿಡುಗಡೆ ಮಾಡಿದ 12 ಅಂಶಗಳ ‘ಮೊದಲು ಹಿಂದುಗಳು’ ಎಂಬ ಚಾರ್ಟರ್ ಹಿಂದುಗಳನ್ನು ತಮ್ಮದೇ ದೇಶದಲ್ಲಿ ಎರಡನೇ ದರ್ಜೆಯ ನಾಗರಿಕರ ಮಟ್ಟಕ್ಕೆ ಇಳಿಸಲಾಗಿದೆ, ಮುಸ್ಲಿಂ  ಶೈಕ್ಷಣಿಕ ಸಂಸ್ಥೆಗಳಿಗೆ ಅನುದಾನ, ಹಜ್ ಸಬ್ಸಿಡಿ ಮೂಮತಾದ ಅಲ್ಪಸಂಖ್ಯಾತರನ್ನು ‘ತುಷ್ಟೀಕರಿಸುವ’ ಕ್ರಮಗಳನ್ನೆಲ್ಲ ನಿಲ್ಲಿಸಬೇಕು ಎಂದು ಆಗ್ರಹಿಸಲಾಗಿದೆ. “ ಹಿಂದುಗಳಿಮದ ಖರೀದಿಸಿ, ಹಿಂದುಗಳನ್ನು ಕೆಲಸಕ್ಕೆ ತಗೊಳ್ಳಿ’ ಎಂಬುದು ಇದರ ಮತ್ತೊಂದು ಘೋಷಣೆ. ಇದು 2002ರಲ್ಲಿ ವಿಹೆಚ್‍ಪಿಯ ವ್ಯಾಪಾರ ಮತ್ತು ಉದ್ಯೋಗಾವಕಾಶಗಳಲ್ಲಿ ಮುಸ್ಲಿಮರ ಆರ್ಥಿಕ ಬಹಿಷ್ಕಾರದ ಕರೆಯ ಮರು ಆವೃತ್ತಿಯಂತಿದೆ. ತಮಾಷೆಯ ಸಂಗತಿಯೆಂದರೆ ಮುಸ್ಲಿಂ ‘ತುಷ್ಟೀಕರಣ’ವನ್ನು ಹೀಗಳೆಯುವ ಈ 12 ಅಂಶಗಳಲ್ಲಿ ಅಸ್ಪøಶ್ಯತೆಯನ್ನು ನಿವಾರಿಸಬೇಕು ಎಂಬ ಬೇಡಿಕೆ! ಬಾಂಗ್ಲಾದೇಶೀಗಳನ್ನು ,ರೊಹಿಂಗ್ಯ ಮುಸ್ಲಿಮರನ್ನು ಹಿಂದಕ್ಕೆ ಕಳಿಸಬೇಕು, ಗೋಹತ್ಯೆ ನಿಷೇಧ ಇತ್ಯಾದಿ ಈ ಚಾರ್ಟರ್‍ನ ಬೇಡಿಕೆಗಳಲ್ಲಿ ಹೊಸದೇನೂ ಇಲ್ಲದಿದ್ದರೂ  ವಿಧಾನಸಭಾ ಚುನಾವಣೆಗಳಿಗೆ ಸಿದ್ಧರಾಗಿ ಎಂಬ ಕರೆಯ ಬೆನ್ನಲ್ಲೇ ನಡೆದಿರುವುದು ಬಹಳ ಮಹತ್ವದ್ದಾಗಿದೆ. ತೊಗಾಡಿಯ ಗುಜರಾತಿನ ಯೋಗಿ ಆದಿತ್ಯನಾಥರೇ ಎಂದೂ ಕೆಲವರು ಕೇಳಲಾರಂಭಿಸಿದ್ದಾರಂತೆ!