Error message

  • Deprecated function: Methods with the same name as their class will not be constructors in a future version of PHP; views_display has a deprecated constructor in require_once() (line 3097 of /home/janashakthi/public_html/includes/bootstrap.inc).
  • Deprecated function: Methods with the same name as their class will not be constructors in a future version of PHP; views_many_to_one_helper has a deprecated constructor in require_once() (line 113 of /home/janashakthi/public_html/sites/all/modules/ctools/ctools.module).

ದೊಡ್ಡ ಕಾರ್ಪೊರೇಟ್ ಸುಸ್ತಿದಾರರ ವಿರುದ್ಧ ಕ್ರಮ ಕೈಗೊಳ್ಳಲಾರದ ದಿನಗಳು!

ಸಂಪುಟ: 
11
ಸಂಚಿಕೆ: 
15
Sunday, 2 April 2017

ರಿಝರ್ವ್ ಬ್ಯಾಂಕ್ 1080 ಮರುಪಾವತಿ ಸಾಮಥ್ರ್ಯ ಇದ್ದರೂ ಬೇಕೆಂದೇ ಸಾಲ ಮರುಪಾವತಿ ಮಾಡದ ಬ್ಯಾಂಕ್ ಖಾತೆದಾರರ ವಿರುದ್ಧ ಕ್ರಿಮಿನಲ್ ಕೇಸುಗಳನ್ನು ಹಾಕಿ ಎಂದು ಬ್ಯಾಂಕುಗಳಿಗೆ ನಿರ್ದೇಶನ ನೀಡಿದ್ದರೂ ಇದುವರೆಗೂ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಮಾಹಿತಿ ಹಕ್ಕು(ಆರ್‍ಟಿಐ) ಪ್ರಶ್ನೆಗೆ ದೊರೆತಿರುವ ಉತ್ತರದಿಂದ ಬಯಲಾಗಿದೆ. 25ಲಕ್ಷ ರೂ.ಗಿಂತ ಹೆಚ್ಚಿನ ಮೊತ್ತದ ಸುಸ್ತಿ ಸಾಲಗಾರರ ಮಾಹಿತಿಯನ್ನು ಬ್ಯಾಂಕುಗಳು ಮತ್ತು ಇತರ ಹಣಕಾಸು ಸಂಸ್ಥೆಗಳು ನೀಡಿವೆ. ಇಂತಹ ಸಾಲಗಳ ಒಟ್ಟು ಮೊತ್ತ ಸಪ್ಟಂಬರ್ 2016ರ ವೇಳೆಗೆ 7673.6 ಕೋಟಿ ರೂ. ಎಂದು ಆರ್‍ಟಿಐ ಉತ್ತರದಲ್ಲಿ ತಿಳಿಸಲಾಗಿದೆ. 

ಈಗಿರುವ ಶಾಸನಗಳ ಅಡಿಯಲ್ಲೂ ಈ ಉದ್ಯಮಿಗಳ ಮೇಲೆ ಭಾರತೀಯ ದಂಡ ಸಂಹಿತೆ(ಐಪಿಸಿ)ಯ ಸೆಕ್ಷನ್ 403 ಮತ್ತು 415 ರಡಿಯಲ್ಲಿ ಕ್ರಿಮಿನಲ್ ಕ್ರಮಗಳನ್ನು ಕೈಗೊಳ್ಳುವ ಅವಕಾಶಗಳಿವೆ. ಇವರೆಲ್ಲ ಬ್ಯಾಂಕುಗಳನ್ನು ವಂಚಿಸಲೆಂದೇ ಸಾಲ ಪಡೆದವರು. ಆದ್ದರಿಮದ ಇವರ ವಿರುದ್ಧ ಕ್ರಿಮಿನಲ್ ಕ್ರಮ ಗಳನ್ನು ಕೈಗೊಳ್ಳಬೇಕು ಎಂದು ರಿಝರ್ವ್ ಬ್ಯಾಂಕ್ ಆದೇಶಿಸಿತ್ತು. ಆದರೂ ಯಾವುದೇ ಕ್ರಮಗಳನ್ನು ಇದುವರೆಗೆ ಕೈಗೊಳ್ಳಲಾಗಿಲ್ಲ ಎಂದು ವರದಿಯಾಗಿದೆ. ಬಹುಶಃ ಇದಕ್ಕೆ ಕಾರಣ ಇವರೆಲ್ಲ ರಾಜಕೀಯ ಪ್ರಭಾವ ಹೊಂದಿರುವವರು. 

ಡಿಸೆಂಬರ್ 2016 ರ ವೇಳೆಗೆ 41 ಬ್ಯಾಂಕುಗಳ ಒಟ್ಟು ‘ಕೆಟ್ಟ ಸಾಲ’ಗಳ ಮೊತ್ತ 7ಲಕ್ಷ ಕೋಟಿ ರೂ.ಗಳು ರಿಝರ್ವ್ ಬ್ಯಾಂಕಿನ ಹಣಕಾಸು ಸ್ಥಿರತೆ ವರದಿಯ ಪ್ರಕಾರ ಸಪ್ಟಂಬರ್ 2015ರಲ್ಲಿ 5.1ಶೇ. ಇದ್ದ ‘ಕೆಟ್ಟ ಸಾಲ’ಗಳ ಪ್ರಮಾಣ ಸಪ್ಟಂಬರ್ 2016ರ ವೇಳೆಗೆ 9.1ಶೇ. ಕ್ಕೇ ನೆಗೆದಿದೆ. 

ಇನ್ನೊಂದು ವರದಿಯ ಪ್ರಕಾರ ಡಿಸೆಂಬರ್ 2014 ರಿಮನದ ಡಿಸೆಂಬರ್ 2016ರ 24 ತಿಂಗಳಲ್ಲಿ ಈ ಎನ್‍ಪಿಎ ಗಳ ಮೊತ್ತ 3.3 ಲಕ್ಷ ಕೋಟಿಯಂದ 7.3ಲಕ್ಷ ಕೋಟಿಗೆ ಏರಿದೆ. (ಚಿತ್ರ ನೋಡಿ).ಇವೆಲ್ಲ ಅಚ್ಛೇ ದಿನ್‍ಗಳಲ್ಲಿ ಇನ್ನಷ್ಟು ಉತ್ತೇಜನೆ ಪಡೆದಿರುವ ಚಮಚಾ ಬಂಡವಾಳಶಾಹಿ ವಾತಾವರಣದ ಫಲಾನುಭವಿಗಳು ಎಂಬುದು ಸ್ಪಷ್ಟ. ದೊಡ್ಡ-ದೊಡ್ಡ ಮಾತುಗಳನ್ನಾಡುವ ಕೇಂದ್ರ ಸರಕಾರಕ್ಕೆ ಈ ಕಾರ್ಪರೇಟ್ ಸುಸ್ತಿದಾರರು ಲೂಟಿ ಮಾಡಿರುವ ಸಾರ್ವಜನಿಕ ಹಣವನ್ನು ವಸೂಲಿ ಮಾಡುವ ಶಕ್ತಿ ಇಲ್ಲವೇ, ಅಥವ ಮನಸ್ಸಿಲ್ಲವೇ ಎಂಬ ಪ್ರಶ್ನೆ ನಾಗರಿಕರಲ್ಲಿ ಏಳುವುದು ಸಹಜ.