Error message

  • Deprecated function: Methods with the same name as their class will not be constructors in a future version of PHP; views_display has a deprecated constructor in require_once() (line 3097 of /home/janashakthi/public_html/includes/bootstrap.inc).
  • Deprecated function: Methods with the same name as their class will not be constructors in a future version of PHP; views_many_to_one_helper has a deprecated constructor in require_once() (line 113 of /home/janashakthi/public_html/sites/all/modules/ctools/ctools.module).

ಜೂಜಾಟದ ಜಗಳ : ಕಠಿಣಕ್ರಮಕ್ಕೆ ಒತ್ತಾಯ : ಶಾಂತಿ ಕಾಪಾಡಲು ಸಿಪಿಐ(ಎಂ) ಮನವಿ

ಸಂಪುಟ: 
11
ಸಂಚಿಕೆ: 
15
Sunday, 2 April 2017

ಜೂಜಾಟದಲ್ಲಿ ಆರಂಭವಾದ ಜಗಳವು-ಗುಂಪು ಘರ್ಷಣೆಗೆ ತಿರುಗಿದ್ದು ಖಂಡನಾರ್ಹವಾದುದು, ಪೊಲೀಸ್ ಇಲಾಖೆ ಯುಗಾದಿ ಹಬ್ಬದ ಜೂಜಾಟಕ್ಕೆ ಕಡಿವಾಣ ಹಾಕಬೇಕು ಎಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ) ಸಿಪಿಐ(ಎಂ) ಒತ್ತಾಯಿಸುತ್ತದೆ.

ಈ ಗುಂಪು ಘರ್ಷಣೆಯಲ್ಲಿ ಕುರಿಪಾಳ್ಯದ ಕಾಲೋನಿಗೆ ಗುಂಪೊಂದು ನುಗ್ಗಿ ಮಕ್ಕಳು-ಮಹಿಳೆಯರನ್ನು ಬೆದರಿಸಿ ಕಲ್ಲುತೂರಾಟ ನಡೆಸಿ ದಾಂಧಲೆ ನಡೆಸಿರುವ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಸಿಪಿಐ(ಎಂ) ನಗರ ಸಮಿತಿ ಈ ದಾಂದಲೆ ನಡೆಸಿರುವ ಎಲ್ಲರ ಮೇಲೂ ತೀವ್ರ ಕಾನೂನು ಕ್ರಮ ಕೈಗೊಳ್ಳುವಂಥೆ ಸಿಪಿಐ(ಎಂ) ಒತ್ತಾಯಿಸುತ್ತದೆ.

ಈ ಘಟನೆಯನ್ನು ಬಳಸಿಕೊಂಡು ಊರಿನ ನೆಮ್ಮದಿ ಹಾಳುಮಾಡಲು ಹೊರಟಿರುವ ಕೆಲವು ಶಕ್ತಿಗಳ ಬಗ್ಗೆ  ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಸಿಪಿಐ(ಎಂ) ವಿನಂತಿಸುತ್ತದೆ ಯಾವುದೇ ವದಂತಿಗಳಿಗೆ ಕಿವಿಗೊಡದೆ ಶಾಂತಿ ಸೌರ್ಹದತೆ ಕಾಪಾಡಿಕೊಳ್ಳುವಂತೆ ಒತ್ತಾಯಿಸಿರುವ ಸಿಪಿಐ(ಎಂ) ಈ ಬಾಗದ ಎಲ್ಲಾ ಸಮುದಾಯದ ಮುಖಂಡರನ್ನು ಕರೆದು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಶಾಂತಿ ಸಭೆಯೊಂದನ್ನು ನಡೆಸುವಂಥೆ ಕೋರಿದೆ. 

ಈ ಘಟನೆ ನೆಪದಲ್ಲಿ ಪೊಲೀಸರು ಅಮಾಯಕರನ್ನು ಬಂದಿಸಿ ತೊಂ ದರೆ ನೀಡದಂತೆ ಸಹ ಸಿಪಿಐ(ಎಂ) ಒತ್ತಾಯಿಸುತ್ತದೆ.