ಬೆಂಗಳೂರು ಹಾಸನ ನೂತನ ರೈಲು ಪ್ರಾರಂಭಕ್ಕೆ ಸಿಪಿಐ(ಎಂ) ಸ್ವಾಗತ

ಸಂಪುಟ: 
11
ಸಂಚಿಕೆ: 
14
Sunday, 2 April 2017

ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಹಾಸನ ಬೆಂಗಳೂರು ನೇರ ರೈಲು ಮಾರ್ಗ ಪೂರ್ಣಗೊಂಡು ಹೊಸ ರೈಲು ಸಂಚಾರಕ್ಕೆ ಚಾಲನೆ ಸಿಕ್ಕಿರುವುದು ಹಾಸನ ಜಿಲ್ಲೆಯ ಜನತೆಗೆ ಸಂತಸ ತಂದಿದೆ. ಈ ಮೂಲಕ ಈ ರೈಲು ಪ್ರಯಾಣ ಜಿಲ್ಲೆಯ ಜನತೆಯ ಬದುಕಿನ ಮೇಲೆ ಮತ್ತು ಜಿಲ್ಲೆಯ ಆರ್ಥಿಕ ಚಟುವಟಿಕೆ ಹಾಗು ಪ್ರವಾಸೋಧ್ಯಮದ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದೆ. ನೂತನ ರೈಲು ಮಾರ್ಗದ ಅನುಷ್ಟಾನಕ್ಕೆ ಸಹಕರಿಸಿದ ಕೇಂದ್ರ, ರಾಜ್ಯ ಸರ್ಕಾರಗಳನ್ನು ಅಭಿನಂದಿಸುತ್ತಲೇ ಈ ಯೋಜನೆಯ ಜಾರಿಗಾಗಿ ಹಲವು ವರ್ಷಗಳಿಂದ ನಿರಂತರವಾಗಿ ಹೋರಾಟಗಳನ್ನು ನಡೆಸಿದ ಜಿಲ್ಲೆಯ ಸಂಘ ಸಂಸ್ಥೆಗಳಿಗೂ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ) ಹಾಸನ ಜಿಲ್ಲಾ ಸಮಿತಿ ಅಭಿನಂದನೆಗಳನ್ನು ಸಲ್ಲಿಸುತ್ತದೆ.

ಹಾಸನ ರೈಲ್ವೇ ನಿಲ್ದಾಣದಲ್ಲಿ ಮೊದಲ ದಿನವೇ ಪ್ರಯಾಣಿಕರ ಸಂಖ್ಯೆ ಎತೇಚವಾಗಿದ್ದು ಟಿಕೇಟ್ ಪಡೆಯಲು ಜನರ ನೂಕು ನುಗ್ಗಲು ಆರಂಬವಾಗಿತ್ತು ಆದ್ದರಿಂದ ರೈಲ್ವೇ ಇಲಾಖೆಯ ಸಂಭಂದಪಟ್ಟ ಅಧಿಕಾರಿಗಳು ಕೂಡಲೇ ಈ ಅವ್ಯವಸ್ಥೆಯನ್ನು ಸರಿಪಡಿಸಿ ಜನರಿಗೆ ಅನುಕೂಲವಾಗುವಂತೆ ಟಿಕೇಟ್ ಕೌಂಟರ್‍ಗಳ ಸಂಖ್ಯೆಯನ್ನು ಹೆಚ್ಚಿಸಬೇಕು. ಮತ್ತು ಪ್ರಸ್ತುತ ಯಶವಂತಪುರದಿಂದ ಹೊರಟು ಯಶವಂತಪುರಕ್ಕೆ ಕೊನೆಗೊಳ್ಳುವ ಇಂಟರ್‍ಸಿಟಿ ಎಕ್ಸ್‍ಪ್ರೆಸ್ ರೈಲನ್ನು ಬೆಂಗಳೂರು ಸಿಟಿ ರೈಲ್ವೇ ನಿಲ್ದಾಣದವರೆಗೂ ವಿಸ್ತರಿಸಬೇಕೆಂದು ಸಿಪಿಐ(ಎಂ) ಒತ್ತಾಯಿಸುತ್ತದೆ.

ಹಾಸನದಲ್ಲಿ ಹೊಸ ಬಸ್ ನಿಲ್ದಾಣ ಆರಂಬವಾದಾಗಿನಿಂದ ಅಲ್ಲಿಗೆ ರೈಲ್ವೇ ಮೇಲ್ಸೇತುವೆಗಾಗಿ ಹೋರಾಟಗಳು ನಡೆಯುತ್ತಲೇ ಇವೆ. ಪ್ರಸ್ತುತ ಹೊಸ ರೈಲು ಮಾರ್ಗ ಆರಂಬವಾಗಿರುವುದರಿಂದ ಈ ರಸ್ತೆಯಲ್ಲಿ ಮತ್ತಷ್ಟು ವಾಹನ ದಟ್ಟಣೆಯಾಗಲಿದ್ದು ಇದನ್ನು ಸರಿಪಡಿಸಲು ಕೂಡಲೇ ರೈಲ್ವೇ ಮೇಲ್ಸೇತುವೆ ಕಾಮಗಾರಿಯನ್ನು ಆರಂಬಿಸಬೇಕೆಂದು ಸಿಪಿಐ(ಎಂ) ಹಾಸನ ಜಿಲ್ಲಾ ಸಮಿತಿ ಒತ್ತಾಯಿತ್ತದೆ.