ಕಾವಲುಗಿರಿ ಪಡೆಗಳನ್ನು ತ್ವರಿತವಾಗಿ ಶಿಕ್ಷಿಸಬೇಕು ಮತ್ತು ‘ಹಿಂದೂ ಚೌಕಿ’ಗಳನ್ನು ತೆಗೆಯಬೇಕು

Monday, 10 April 2017

‘ಗೋರಕ್ಷಕ’ರ ದಾಳಿಗೆ ಹಾಲು ಉತ್ಪಾದಕ ರೈತರ ಮೇಲೆ ದಾಳಿ ನಡೆದ ಸ್ಥಳಕ್ಕೆ ಭೇಟಿ ನೀಡಿದ ಸಿಪಿಐ(ಎಂ) ನಿಯೋಗದ ಆಗ್ರಹ

ಎಪ್ರಿಲ್ 8 ರಂದು ಸಿಪಿಐ(ಎಂ) ನಿಯೋಗವೊಂದು ರಾಜಸ್ತಾನದ ಬೆಹ್ರೊರ್‍ಗೆ ಭೇಟಿ ನಿಡಿತು ಇದು ಎಪ್ರಿಲ್ 1 ರಂದು ಗೋರಕ್ಷಕರು ಎಂದು ಹೇಳಿಕೊಳ್ಳುವ ಮಂದಿ ಹಾಲು ಉತ್ಪಾದನೆಯಲ್ಲಿ ತೊಡಗಿದ್ದ ಹರ್ಯಾಣದ ಕೆಲವು ರೈತರ ಮೇಲೆ ಭೀಕರ ದಾಳಿ ಮಾಡಿದ ಸ್ಥಳ. ಅವರಲ್ಲಿ ಒಬ್ಬರಾದ ಪಹ್ಲೂಖಾನ್ ಸಾವುಂಟಾಗಿದೆ.

ನಿಯೋಗ ಮೊದಲು ಆ ಸ್ಥಳದ ಪೋಲೀಸ್ ಠಾಣೆಗೆ ಹೋಗಿ ಅಲ್ಲಿನ ಡಿಎಸ್‍ಪಿ ಪರ್ಮಾಲ್ ಅವರನ್ನು ಭೇಟಿ ಮಾಡಿತು. ಇವರುತ ನಿಖಾ ಅಧಿಕಾರಿಯಾಗಿದ್ದಾರೆ. 1 ನೇ ತಾರೀಕಿನಂದು ಪಹ್ಲೂಖಾನ್ ಪ್ರಾಣ ಕಳಕೊಂಡ ಆ ಘಟನೆ ನಡೆಯುವ ಮೊದಲು ಹಸುಗಳಿದ್ದ ನಾಲ್ಕು ವ್ಯಾನ್‍ಗಳನ್ನು ಪೋಲಿಸ್ ಠಾಣೆಗೆ ತರಲಾಯಿತು ಮತ್ತು ಎಲ್ಲರನ್ನು ಬಂಧಿಸಲಾಯಿತು ಎಂದು ಅವರು ಹೇಳಿದರು. ಅವರಿನ್ನೂ ಕಸ್ಟಡಿಯಲ್ಲಿದ್ದಾರೆ. ಆನಂತರ ಇನ್ನೆರಡು ವ್ಯಾನ್‍ಗಳನ್ನು ಜೈಪುರ-ದಿಲ್ಲಿ ಹೆದ್ದಾರಿಯಲ್ಲಿ ಒಂದು ಜನಜಂಗುಳಿ ತಡೆದು ನಿಲ್ಲಿಸಿತು ಮತ್ತು ಅದರಲ್ಲಿ ಇದ್ದವರನ್ನು ಭಯಂಕರವಾಗಿ ಥಳಿಸಿತು. ಪೋಲೀಸರು ನಿಜವಾಗಿ ಜನಜಂಗುಳಿಯನ್ನು ಓಡಿಸಲು ಬಲಪ್ರಯೋಗ ನಡೆಸಿತು ಮತ್ತು ಗಾಯಗೊಂಡವರನ್ನು ಆಸ್ಪತ್ರೆಗೆ ಸೇರಿಸಿತು ಎಂದು ಡಿಎಸ್‍ಪಿ ಹೇಳಿದರು. ಪಹ್ಲೂಖಾನ್ ಬಿಟ್ಟು ಇತರರೆಲ್ಲರೂ ಮರುದಿನ ಆಸ್ಪತ್ರೆಯಿಂದ ಹೋದರು. ಆತ ಎಪ್ರಿಲ್ 3 ರಂದು ನಿಧನರಾದರು.

ಎಪ್ರಿಲ್ 1 ರಂದು ವ್ಯಾನ್‍ನಲ್ಲಿ ಇದ್ದ ಎಲ್ಲರ ಮೇಲೂ ಮತ್ತು ಹಲ್ಲೆ ಮಾಡಿದವರ ಮೇಲೂ ಎಫ್‍ಐಆರ್ ದಾಖಲಿಸಲಾಯಿತು. ಹಲ್ಲೆ ಮಾಡಿದವರಲ್ಲಿ ಯಾರೂ ಬಂಧಿತರಾಗಿಲ್ಲ. ಪಹ್ಲೂಖಾನ್ ಸಾವಿನ ನಂತರ ಹಲ್ಲೆ ಮಾಡಿದ ಜನಜಂಗುಳಿಯ ವಿರುದ್ಧ ಸೆಕ್ಷನ್ 302 ನ್ನು ಎಫ್‍ಐಆರ್‍ಗೆ ಸೇರಿಸಲಾಯಿತು. “ಇತರ”ರೊಂದಿಗೆ ಆರು ಜನರ ಹೆಸರು ಸೇರಿಸಲಾಯಿತು. ಅವರಲ್ಲಿ ಯಾರನ್ನೂ ಬಂಧಿಸಿಲ್ಲ. ಇತರರಲ್ಲಿ 3 ಮಂದಿಯನ್ನು ಬಂಧಿಸಲಾಗಿದೆ, ಮತ್ತು ಒಬ್ಬನನ್ನು ನಿಯೋಗದ ಮುಂದೆಯೇ ಠಾಣೆಗೆ ತರಲಾಯಿತು. ಬಂಧಿತರಾದ ಅಥವ ಹಲ್ಲೆಗೊಳಗಾದ ಯಾರ ಬಳಿಯೂ ಆ ಪ್ರಾಣಿಗಳನ್ನು ಕಾನೂನು ಬದ್ಧವಾಗಿ ಖರೀದಿಸಲಾಗಿದೆ ಮತ್ತು ಅದನ್ನು ಕಾನೂನು ಬದ್ಧವಾಗಿ ಸಾಗಿಸಲಾಗುತ್ತಿತ್ತು ಎಂಬ ಬಗ್ಗೆ ಯಾವುದೇ ದಸ್ತಾವೇಜು ಇರಲಿಲ್ಲ ಎಂದು ಡಿಎಸ್‍ಪಿ ಹೇಳಿದರು. ಆದರೆ ಇದು ಒಂದು ಸುಳ್ಳು ಹೇಳಿಕೆ ಎಂದು ಸಾಬೀತಾಗಿದೆ. ಏಕೆಂದರೆ ರಸೀದಿಗಳ ಫೋಟೋಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ ಎಂದು ನಿಯೋಗ ಹೇಳಿದೆ.

ಹಲ್ಲೆಗೊಳಗಾದವರ ಜೇಬುಗಳಲ್ಲಿ ಒಟ್ಟು 25,000 ರೂ. ಸಿಕ್ಕಿತು, ಅದು ಅವರ ಇತರ ಪೇಪರುಗಳೊಂದಿಗೆ ಆಸ್ಪತ್ರೆ ಆಡಳಿತದ ಬಳಿ ಸುರಕ್ಷಿತವಾಗಿ ಇಡಲ್ಪಟ್ಟಿದೆ ಎಂದೂ ತನಿಖಾಧಿಕಾರಿ ಹೇಳಿದರು.

ನಂತರ ಸಿಪಿಐ(ಎಂ) ನಿಯೋಗ ಜಿಲ್ಲಾಕಲೆಕ್ಟರ್  ಮುಕ್ತಾನಂದ ಅಗ್ರವಾಲ್ ಅವರನ್ನು ಅಲವರ್‍ನಲ್ಲಿ ಭೇಟಿ ಮಾಡಿತು. ನಿಯೋಗ ಅವರೊಂದಿಗೆ ಘಟನೆಯ ಬಗ್ಗೆ ಚರ್ಚಿಸಿದಾಗ ಅವರು ನಡೆದದ್ದೆಲ್ಲ ಬಹಳ ತಪ್ಪು ಎಂದು ಒಪ್ಪಿಕೊಂಡರು. ಹಲ್ಲೆಗೊಳಗಾದವರ ಬಳಿ ಹಸುಗಳ ಕುರಿತಾದ ರಸೀದಿಗಳಿದ್ದವು ಎಂದೂ ಅವರು ಹೇಳಿದರು.

ಸಿಪಿಐ(ಎಂ) ನಿಯೋಗ ಈ ಕೆಳಗಿನ ಆಗ್ರಹಗಳನ್ನು ಮುಂದಿಟ್ಟಿದೆ:

  1. ಕಾವಲುಗಿರಿ ನಡೆಸುವ ಗುಂಪುಗಳ ವಿರುದ್ಧ ಬಲವಾದ ಮತ್ತು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು, “ಹಿಂದೂ ಚೌಕಿ”ಗಳು ಎಂಬುದನ್ನು ರಚಿಸುತ್ತಿದ್ದರೆ ಅವನ್ನು ತೆಗೆಯಬೇಕು. ಕಾವಲುಗಿರಿ ಕೃತ್ಯದಲ್ಲಿ ತೊಡಗಿರುವವರನ್ನು ಮತ್ತು ಬೆಂಬಲಿಸುವವರನ್ನು ಶಿಕ್ಷಿಸಬೇಕು.
  2. ಜಿಲ್ಲಾ ಆಡಳಿತ ಜೈಪುರ ಮಹಾನಗರಪಾಲಿಕೆ ಸಂಘಟಿಸಿದ ಜೈಪುರ ಹಾಟ್‍ವಾಡದಲ್ಲಿ ಪಶುಗಳನ್ನು ಖರೀದಿಸಿದ ಎಲ್ಲ ವಿವರಗಳನ್ನು ಪಡೆಯಬೇಕು. ಈ ರಸೀದಿಗಳಲ್ಲಿ ಹಲ್ಲೆಗೊಳಗಾದವರ ಹೆಸರುಗಳಲ್ಲದೆ ಅವರ ವಿಳಾಸಗಳೂ ಇರುತ್ತವೆ. ಹಾಗಿದ್ದಲ್ಲಿ ಮಹಾನಗರಪಾಲಿಕೆ ಅಧಿಕಾರಿಗಳು ರಾಜ್ಯದ ಹೊರಗಿನವರಿಗೆ ಹಸುಗಳನ್ನು ಏಕೆ ಮಾರಿತು ಎಂದು ವಿವರಣೆ ಕೊಡಬೇಕಾಗುತ್ತದೆ. ಇದು ಅಗತ್ಯವೇಕೆಂದರೆ, ಇನ್ನೊಂದು ರಾಜ್ಯಕ್ಕೆ ಅಗತ್ಯ ಅನುಮತಿ ಇಲ್ಲದೆ ಪಶುಗಳನ್ನು ಸಾಗಿಸುವುದು ಕಾನೂನು ಬಾಹಿರ ಎಂದು ಪೋಲಿಸರು ಒತ್ತಿ ಹೇಳುತ್ತಿದ್ದಾರೆ. ಮಾರಾಟದ ಮೊದಲು ಮಹಾನಗರಪಾಲಿಕೆ ಅಗತ್ಯ ಅನುಮತಿ ಒದಗಿಸಬೇಕಾಗಿತ್ತು.
  3. ಹಲ್ಲೆಗೊಳಗಾದವರ ಬಳಿಯಿದ್ದುದೆಲ್ಲವೂ ಆಸ್ಪತ್ರೆಯಲ್ಲಿವೆ, ಅವನ್ನು ಜಿಲ್ಲಾ ಆಡಳಿತ ಅವರಿಗೆ ಹಿಂದಿರುಗಿಸಬೇಕು.
  4. ಹಿಂಸಾಚಾರ ಮತ್ತು ಕೊಲೆಯ ಆಪಾದನೆ ಇರುವವರೆಲ್ಲರನ್ನೂ ಬಂಧಿಸಬೇಕು ಮತ್ತು ಈ ಕೇಸನ್ನು ತ್ವರಿತವಾಗಿ ಇತ್ಯರ್ಥ ಮಾಡಬೇಕು.
  5. ಪಹ್ಲೂಖಾನ್ ಕುಟುಂಬಕ್ಕೆ ಪರಿಹಾರ ನೀಡಬೇಕು ಮತ್ತು ಅವರ ಮರುವಸತಿಗೆ ನೆರವಾಗಬೇಕು. ಗಾಯಗೊಂಡ ಇತರರಿಗೆ ಪರಿಹಾರ ಒದಗಿಸಬೇಕು ಮತ್ತು ಅವರ ಹಸುಗಳನ್ನು ಅವರಿಗೆ ಹಿಂದಿರುಗಿಸಬೇಕು. ಮತ್ತು ಅವರನ್ನು ಬಿಡುಗಡೆ ಮಾಡಬೇಕು.

ಸಿಪಿಐ(ಎಂ)ನ ಈ ನಿಯೋಗದಲ್ಲಿ ಪೊಲಿಟ್‍ಬ್ಯುರೊ ಸದಸ್ಯೆ ಸುಭಾಷಿಣಿ ಅಲಿ, ಪಶ್ಚಿಮ ಬಂಗಾಲದ ಲೋಕಸಭಾ ಸದಸ್ಯ ಬದ್ರುದ್ದುಜಖಾನ್, ತ್ರಿಪುರಾದ ಲೋಕಸಭಾ ಸದಸ್ಯ ಶಂಕರ ಪ್ರಸಾದ್‍ದತ್ತ, ಸಿಪಿಐ(ಎಂ) ರಾಜಸ್ತಾನ ಕಾರ್ಯದರ್ಶಿ ಆಮ್ರರಾಮ್ ಮತ್ತು ಸಿಪಿಐ(ಎಂ) ರಾಜ್ಯ ಮುಖಂಡರಾದ ಸುಮಿತ್ರ ಚೋಪ್ರ, ರಯಿಸ ಹಾಗೂ ಗುರುಚರಣ್‍ಸಿಂಗ್ ಮೋರ್ ಇದ್ದರು.