ದಿಲ್ಲಿಯಲ್ಲಿ ತಮಿಳುನಾಡು ರೈತರ ಧರಣಿ ಕೃಷಿ ಬಿಕ್ಕಟ್ಟಿನ ಬಗ್ಗೆ ಸರಕಾರದ ನಿರ್ಲಕ್ಷ್ಯ -ಎಐಕೆಎಸ್ ಟೀಕೆ

ಸಂಪುಟ: 
11
ಸಂಚಿಕೆ: 
14
Sunday, 26 March 2017

ಮಾರ್ಚ್ 14ರಿಂದ ತಮಿಳುನಾಡಿನ ರೈತರ ಪ್ರತಿನಿಧಿಗಳು ದಿಲ್ಲಿಯ ಜಂತರ್ ಮಂತರ್‍ನಲ್ಲಿ ಧರಣಿ ನಡೆಸುತ್ತಿದ್ದಾರೆ. ಸಾಲಮನ್ನಾ ಇವರ ಬೇಡಿಕೆಗಳಲ್ಲಿ ಒಂದು. 

ಅಖಿಲ ಭಾರತ ಕಿಸಾನ್ ಸಭಾದ ಜಂಟಿ ಕಾರ್ಯದರ್ಶಿ ಎನ್ ಕೆ ಶುಕ್ಲ ಮತ್ತು ಖಜಾಂಚಿ ಪಿ.ಕೃಷ್ಣಪ್ರಸಾದ್ ಮಾರ್ಚ್ 22 ರಂದು ಧರಣಿನಿರತ ರನ್ನು ಭೇಟಿ ಮಾಡಿದರು. ರೈತಮುಖಂಡ ಪಿ.ಅಯ್ಯಕಣ್ಣು ಅವರೊಂದಿಗೆ ಮಾತುಕತೆ ನಡೆಸಿದರು.

ಪ್ರಧಾನ ಮಂತ್ರಿಗಳು ತಕ್ಷಣವೇ ಸಾಲಮನ್ನಾ ಸೇರಿದಂತೆ ರೈತರ ನ್ಯಾಯಯುತ ಬೇಡಿಕೆಗಳ ಬಗ್ಗೆ ತಕ್ಷಣ ನಿರ್ಧಾರ ಕೈಗೊಳ್ಳಬೆಕೆಂದು ಎಐಕೆಎಸ್ ಆಗ್ರಹಿಸಿದೆ. 

ರೈತರ ಪರಿಸ್ಥಿತಿಗಳನ್ನು ಹದಗೆಡಿಸುತ್ತಿರುವ ನವ-ಉದಾರವಾದಿ ಧೋರಣೆಗಳನ್ನು ಅನುಸರಿಸುತ್ತಿರುವ ನಿರ್ಲಕ್ಷ್ಯದ ವಿರುದ್ಧ ದೇಶಾದ್ಯಂತ ಜಂಟಿ ಹೋರಾಟಗಳನ್ನು ನಡೆಸಬೇಕಾಗಿದೆ ಎಂದು ಎಐಕೆಎಸ್ ಮುಖಂಡರು ಹೇಳಿದ್ದಾರೆ.