``ನಮ್ಮ ಕ್ಯಾಂಟೀನ್'' ಇಸ್ಕಾನ್ ಗೆ?

ಸಂಪುಟ: 
11
ಸಂಚಿಕೆ: 
14
date: 
Sunday, 26 March 2017

ಜೂನ್ 1 ರಿಂದ ಆರಂಭವಾಗಬೇಕಿರುವ ``ನಮ್ಮ ಕ್ಯಾಂಟೀನ್'' ಇಸ್ಕಾನ್ ಗೆ ನಡೆಸಲು ಕೊಡಲಿದೆಯಂತೆ. ಈಗಾಗಲೇ ಈ ಬಗ್ಗೆ ಮಾತುಕತೆ ನಡೆಯುತ್ತಿದೆ. ಕೆಲವು ಶರತ್ತುಗಳಿಗೆ ಸರಕಾರ ಒಪ್ಪಿದರೆ ಇಸ್ಕಾನ್ ``ನಮ್ಮ ಕ್ಯಾಂಟೀನ್'' ನಡೆಸಲು ಒಪ್ಪಿಕೊಂಡಿದೆಯಂತೆ. ಬಿಸಿಯೂಟದ ಖಾಸಗೀಕರಣದ ಸ್ಕೆಚ್ ನಲ್ಲಿ ಭಾಗವಹಿಸಿರುವ ಇಸ್ಕಾನ್ ಗೆ ತಲೆ ಹಾಕಿರುವುದು ಆಶ್ಚರ್ಯಕರವೇನಲ್ಲ. ಬಿಸಿಯೂಟದ ಸರಕಾರಿ ಅನುದಾನವನ್ನೂ ಗುಳುಂ ಮಾಡಿ, ಬಡ ಶಾಲಾ ಮಕ್ಕಳಿಗೆ ಉಚಿತ ಊಟ ಹಾಕುತ್ತೇವೆಂದು ವಿದೇಶಗಳಿಂದ ಹಣ ಸಂಗ್ರಹಿಸುವಂತೆ, ಇಸ್ಕಾನ್ ``ನಮ್ಮ ಕ್ಯಾಂಟೀನ್'' ಗೂ ಬಡಜನರಿಗೆ ಕಡಿಮೆ ಖರ್ಚಿನಲ್ಲಿ ಆಹಾರ ಕೊಡುತ್ತೇವೆಂದು ಸ್ಕೆಚ್ ಹಾಕಿದ್ದರೆ ಆಶ್ಚರ್ಯವಿಲ್ಲ.  ಸಿದ್ಧರಾಮಯ್ಯ ಸರಕಾರ ``ನಮ್ಮ ಕ್ಯಾಂಟೀನ್'' ಇಸ್ಕಾನ್ ಗೆ ಯಾಕೆ, ಬಿಜೆಪಿ ಕೇಂದ್ರ ಮಂತ್ರಿ ಅನಂತ್ ಕುಮಾರ್ ಅವರ ``ಅದಮ್ಯ ಫೌಂಡೇಶನ್'' ಗೆ  ವಹಿಸಿ ಕೊಟ್ಟರೂ ಆಶ್ಚರ್ಯ ಪಡಬೇಕಾಗಿಲ್ಲ !