ಕುರ್ಸ್ಕ್ ಗಣಿ ಶೋಧ ಮತ್ತು ಲೆನಿನ್

ಸಂಪುಟ: 
11
ಸಂಚಿಕೆ: 
14
date: 
Sunday, 26 March 2017
Image: 

(ಮೂಲ: ಡಾ. ಎಸ್.ಚಟಿರ್ಜಿ, ಅನುವಾದ: ಎನ್.ಪ್ರಭಾ)

ಕ್ರಾಂತಿ ನಂತರದ ಸೋವಿಯೆಟ್ ಸರಕಾರ ಮೂರು ವಿಷಯಗಳಿಗೆ - ಭೂಹಂಚಿಕೆಯ ಪ್ರಶ್ನೆ, ವಿಜ್ಞಾನ, ಲಿಂಗಸಮಾನತೆ- ಆದ್ಯತೆ ನೀಡಿತು. ವಿಜ್ಞಾನದ ಬಗ್ಗೆ ಆದ್ಯತೆಯ ಬಗ್ಗೆ ಕೇಂದ್ರ ನಾಯಕತ್ವದಲ್ಲೇ ಇನ್ನೂ ಸ್ಪಷ್ಟತೆ ಇಲ್ಲದಿರುವಾಗ, ಒಂದು ವೈಜ್ಞಾನಿಕ ಸಂಶೋಧನೆ (ಕುರ್ಸ್ಕ್ ಕಾಂತೀಯ ಅಸಂಗತತೆ) ಬಗ್ಗೆ ಲೆನಿನ್ ತೋರಿದ ಅತೀವ ಕಾಳಜಿ ಭಾರೀ ಪ್ರಮಾಣದ ಖನಿಜದ ಮಾಹಿತಿ ಕೊಟ್ಟ ಸೋವಿಯೆಟ್ ಅವಧಿಯ ಸ್ವಾರಸ್ಯಕರ ಅಧ್ಯಾಯ ಇಲ್ಲಿದೆ. ರಶ್ಯನ್ ಕ್ರಾಂತಿಯ ಶತಮಾನೋತ್ಸವ ಸ್ಫ್ಫೂರ್ತಿದಾಯಕ ಸ್ಮರಣೆಯ ಭಾಗ ಇದು.

ಝಾರ್ ದೊರೆಗಳಿಂದ ಮುಕ್ತಿಗೊಂಡ ರಷ್ಯಾದ ಸಾಮ್ರಾಜ್ಯದ ಹಲವು ಭಾಗಗಳು ಅಕ್ಟೋಬರ್ 25ರ 1917 ರಲ್ಲಿ ರೈತರು ಮತ್ತು ಕಾರ್ಮಿಕರು ಸರ್ಕಾರ ರಚಿಸುವ ಮೂಲಕ ಹೊಸ ಮಾದರಿಯ ಆಡಳಿತ ಅಸ್ತಿತ್ವಕ್ಕೆ ಬಂತು. (ನೂತನ ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ ಇದು ನವೆಂಬರ್ 07) ಈ ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ 3 ವಿಷಯಗಳಿಗೆ ಪ್ರಧಾನ ಆದ್ಯತೆಯನ್ನು ನೀಡಿತು. ಅವುಗಳೆಂದರೆ - ಭೂಹಂಚಿಕೆಯ ಪ್ರಶ್ನೆ, ವಿಜ್ಞಾನ, ಲಿಂಗಸಮಾನತೆ.  ಇವು ಸರ್ಕಾರ ಅಸ್ತಿತ್ವಕ್ಕೆ ಬಂದ ಶೀಘ್ರದಲ್ಲೇ ಆದೇಶವಾಗಿ ಹೊರಬಂದವು. 

“ವಿಜ್ಞಾನದ ಆಯಕಟ್ಟಿನ ಯುದ್ಧ”

1917ರ ಅಕ್ಟೋಬರ್ 27ರಂದು ಶಾಂತಿಸ್ಥಾಪನೆಗಾಗಿ ಈ ಸರ್ಕಾರ ಒಂದು ಘೋಷಣೆ ಹೊರಡಿಸಿತು. ಜರ್ಮನಿ, ಆಟೋಮಾನ್ ಟರ್ಕಿ, ಆಸ್ಟ್ರೋ-ಹಂಗೇರಿಯನ್ ಸರ್ಕಾರಗಳು ಸ್ವಾಯತ್ತ ಸರ್ಕಾರಗಳನ್ನು ರಚಿಸಿಕೊಳ್ಳಬೇಕು ಮತ್ತು ಶಾಂತಿ ಸ್ಥಾಪನೆಗೆ ಮುಂದಾಗಬೇಕು, ಎಂದು ಆ ಘೋಷಣೆ ಹೇಳಿತು.   ಸರ್ಕಾರ ರಚನೆಯಾಗುವ ಈ ಹಂತದಲ್ಲಿ ನಮಗೆ ನಿಮ್ಮ ಭೂಮಿ ಬೇಕಿಲ್ಲ ಜೊತೆಗೆ ನಾವು ನಿಮಗೆ ಯಾವುದೇ ಪರಿಹಾರಗಳನ್ನೂ ನೀಡುವುದಿಲ್ಲ ಹಾಗೂ ಪಡೆಯುವುದಿಲ್ಲ - ಆ ದೇಶಗಳಿಗೆ ಇದು ರಷ್ಯಾದ ನೂತನ ಸರ್ಕಾರದ ಅಂದಿನ ಘೋಷಣೆಯ ಮುಖ್ಯ ಪ್ತಸ್ತಾಪವಾಗಿತ್ತು. ಆದರೆ ಆ ನಂತರ, ಮೇಲೆ ಹೆಸರಿಸಿದ ಸರ್ಕಾರಗಳು ಹೊಸದಾಗಿ ಉದಯಿಸಿದ್ದ ರಷ್ಯಾ ಸರ್ಕಾರಕ್ಕೆ ಹಲವು ಸ್ವರೂಪದ ಕಿರುಕುಳಗನ್ನು ನೀಡಲು ಪ್ರಾರಂಭಿಸಿದವು. ಅಂತಿಮವಾಗಿ ಟ್ರಾಟ್‍ಸ್ಕಿಯವರಿಂದ ಮಾರ್ಚ್ 3ರ 1918 ರಂದು ಶಾಂತಿ ಒಪ್ಪಂದಕ್ಕೆ ಸಹಿ ಬಿದ್ದಿತ್ತ್ತು. ಇದು ಲೆನಿನ್ ರವರ ಸ್ಪಷ್ಟ ಆದೇಶದ ಮೇರೆಗೆ ಜರುಗಿದ ಒಪ್ಪಂದವೇ ಆಗಿತ್ತು. ಬ್ರೆಸ್ಟ್ ಲಿಟಾಫ್ಸ್ಕ್‍ನಲ್ಲಿ (ಉಕ್ರೈನ್ ನಲ್ಲಿಲ್ಲಿರುವ ಸ್ಥಳ). ಈ ಒಪ್ಪಂದದಲ್ಲಿ ಭಾಗವಹಿಸಿದ್ದ ರಷ್ಯಾ, ಉಕ್ರೈನ್, ಪೋಲೆಂಡ್, ಫಿನ್‍ಲ್ಯಾಂಡ್, ಬೈಲೊರಶ್ಯಾ, ಎಸ್ತೋನಿಯಾ, ಲ್ಯಾಟ್ವಿಯಾ ಮತ್ತು ಲಿತುವಾನಿಯ ದೇಶಗಳು ಝಾರ್‍ಗಳ ಅಧೀನದಿಂದ ಹೊರಬಂದು ಈ ಒಪ್ಪಂದಕ್ಕೆ ಸಹಿ ಮಾಡಿದವು. ಈ ಒಪ್ಪದ್ದಂತೆ ಈ ದೇಶಗಳಿಗೆ ಸ್ವಾಯತ್ತತೆಯನ್ನು ಘೋಷಿಸಲಾಯಿತು. 

1917ರ ಬೇಸಿಗೆಯ ನಂತರ ರಷ್ಯನ್ ಜನರ ಇಚ್ಚೆಯು ಯುಧ್ಧವು ಮುಕ್ತಾಯಗೊಂಡು ಸೈನಿಕರು ಮನೆಗಳಿಗೆ ಹಿಂತಿರುಗಬೇಕೆಂದಿತ್ತು. ಸೈನಿಕರನ್ನು ಲೆನಿನ್‍ರವರು ಸಮವಸ್ತ್ರದಲ್ಲಿರುವ ರೈತರು ಎಂದು ಕರೆದರು. ಕೆರೆನ್ಸ್ಕಿ ಪ್ರಭುತ್ವವು ಇದನ್ನು ಒಪ್ಪದೆ ತ್ರಿಮೈತ್ರಿ ನಂತರವೂ ಎಷ್ಟು ಸಾಧ್ಯವೋ ಅಷ್ಟು ಭೂಕಬಳಿಕೆಯನ್ನು ಮುಂದುವರೆಸಿತು. ಹೀಗಾಗಿ ಗಡಿಪ್ರದೇಶವನ್ನು ಕಾಯುತ್ತಲೇ ಶಾಂತಿ ಸಂಧಾನಗಳನ್ನು ಮುಂದುವರೆಸಬೇಕಾಯಿತು. ಜನರು ಶಾಂತಿ ಬಯಸಿದರೂ ಯುಧ್ಧ ಕ್ಕೂ ಸಿಧ್ದರಿದ್ದರು. 

ಇದೇ ಸಂದರ್ಭದಲ್ಲಿ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳ ಒಕ್ಕೂಟವು ಲೆನಿನ್ ರವರನ್ನು ಭೇಟಿಯಾಗಿ ಸೈನ್ಯದಲ್ಲಿ ಸೇರಿಕೊಳ್ಳುವ ಇಚ್ಚೆಯನ್ನು ವ್ಯಕ್ತಪಡಿಸಿದರು. ವಿದ್ಯಾರ್ಥಿಗಳ ಮಾತುಗಳನ್ನು ಆಲಿಸಿದ ಲೆನಿನ್ “ವಿಜ್ಞಾನದ ಆಯಕಟ್ಟಿನ ಯುದ್ಧದಲ್ಲಿ ಸೇರಿಕೊಳ್ಳಿ”ಎಂದರು. ಲೆನಿನ್ ರವರ ಮಾತುಗಳಿಂದ ಆಶ್ಚರ್ಯಗೊಂಡ ವಿದ್ಯಾರ್ಥಿಗಳು ಲೆನಿನ್ ರವರ ಜೊತೆ ವಾಗ್ವಾದಕ್ಕಿಳಿದರು. ಈ ವಿದ್ಯಾರ್ಥಿಗಳಲ್ಲಿ ಕೆಲವರು ಅಂತಿಮವಾಗಿ ಕುರ್ಸ್ಕ್ (52ಡಿಗ್ರಿ ಉತ್ತರ, 35ಡಿಗ್ರಿ ಪೂರ್ವ) ಪ್ರಾಂತ್ಯದಲ್ಲಿನ ಭೂ ಕಾಂತೀಯ ಅಸಂಗತತೆ ಕುರಿತ ಸಂಶೋಧನೆಯಲ್ಲಿ ತೊಡಗಿದರು. ವಿಜ್ಞಾನದ ಹುಡುಕಾಟದ ಈ ಕುರಿತಂತೆ ಹೆಚ್ಚಿನದನ್ನು ತಿಳಿದುಕೊಳ್ಳೋಣ. 

ಕುರ್ಸ್ಕ್ ಕಾಂತೀಯ ಬಲದ ಅಸಂಗತತೆ

ನಮಗೆ ಗೊತ್ತಿರುವ ಹಾಗೆ ಭೂಮಿಯು ಒಂದು ದೈತ್ಯ ಮ್ಯಾಗ್ನೆಟ್. ಆದ್ದರಿಂದಲೆ ತಡೆಯಿಲ್ಲದೆ ತೂಗಾಡುವ ಮಾಗ್ನೆಟ್ ಉತ್ತರ-ದಕ್ಷಿಣ ದಿಕ್ಕನ್ನು ಸೂಚಿಸುವುದು. ಇದರಿಂದಲೇ ನಾವಿಕರು ಮ್ಯಾಗ್ನೆಟ್ ದಿಕ್ಸೂಚಿಯನ್ನು ಬಳಸುವ ಮೂಲಕ ತಾವು ಸೇರಬೇಕಾದ ಸ್ಥಳಗಳನ್ನು ತಲುಪುವರು. 

ಭೂಮಿಯ ಅಯಸ್ಕಾಂತೀಯ ಕ್ಷೇತ್ರಬಲವು ಸ್ಥಳದಿಂದ ಸ್ಥಳಕ್ಕೆ ವ್ಯತ್ಯಯವಾಗಿರುತ್ತದೆ. ಭೂಮಿಯ ಮೇಲಿನ ಆಯಸ್ಕಾಂತೀಯ ಬಲವು ದುರ್ಬಲವಾಗಿದೆ. ಇದರ ಮೌಲ್ಯ 0.25-0.65 ಗೌಸ್ ಗಳಷ್ಟಿದ್ದು ಗೌಸ್ ಎನ್ನುವುದು ಕಾಂತೀಯ ಕ್ಷೇತ್ರ ಬಲದ ಒಂದು ಮಾಪಕ. ಉದಾಹರಣೆಗೆ, ಮನೆಯಲ್ಲಿರುವ ರೆಫ್ರಿಜರೇಟರ್ ಮೋಟಾರಿನ ಕಾಂತೀಯ ಬಲವು ಭೂಮಿಯ ಅಯಸ್ಕಾಂತೀಯ ಬಲಕ್ಕಿಂತ 300-400 ಪಟ್ಟು ಹೆಚ್ಚಿರುತ್ತದೆ. 

ರಷ್ಯಾದ ದಕ್ಷಿಣ-ಪಶ್ಚಿಮ ಭಾಗದಲ್ಲಿ ಇರುವ ಸ್ಥಳ ಕುರ್ಸ್ಕ್. ಈ ಸ್ಥಳವು ಮಾಸ್ಕೋ ನಗರದ ದಕ್ಷಿಣಕ್ಕೆ ಸುಮಾರು ನಾನ್ನೂರು ಕಿಲೋಮೀಟರ್ ದೂರದಲ್ಲಿದೆ. 1773ರಲ್ಲಿ ಪರಿಶೋಧಕರ ಒಂದು ಗುಂಪು ಈ ಪ್ರದೇಶದಲ್ಲಿನ ಕಾಂತೀಯತೆಯ ಬಲದಲ್ಲಿನ ದೊಡ್ಡ ವ್ಯತ್ಯಾಸಗಳನ್ನು ಪತ್ತೆ ಹಚ್ಚಿದರು. ಈ ವ್ಯತ್ಯಾಸವು 0.2 ಗೌಸ್ ನಿಂದ 0.8 ಗೌಸ್ ಗಳಷ್ಟು ವ್ಯತ್ಯಯವನ್ನು ಸೂಚಿಸಿತು. ಅದೂ ಅಲ್ಲದೆ, ಇಷ್ಟು ದೊಡ್ಡ ವ್ಯತ್ಯಯವು 2-3 ಕಿಲೋ ಮೀಟರ್ ನಷ್ಟು ದೂರದಲ್ಲಿ ಕಾಣುವುದು. ನೂರು ವರ್ಷಗಳ ನಂತರ 1874-1898ನೇ ಇಸವಿಗಳಲ್ಲಿ ವಿಸೃತವಾದ ಪರಿಶೋಧನೆಯನ್ನು ಕೈಗೊಳ್ಳಲಾಯಿತು. ಇಷ್ಟು ದೊಡ್ಡ ಕಾಂತೀಯ ಬಲವು ಅದರ ಜೊತೆಗೂಡಿದ ವ್ಯತ್ಯಾಸವು ಒಂದು ವಿಸ್ತೀರ್ಣವಾದ ಪ್ರದೇಶದಲ್ಲಿ ಅಸ್ತಿತ್ವದಲ್ಲಿದೆಯೆಂಬುದು ಪರಿಶೋಧನೆಯಿಂದ ತಿಳಿದು ಬಂತು.

ಇದು ಲೆನಿನ್ ರವರ ಖ್ಯಾತ ಹೇಳಿಕೆಯಂತೆ “ಸಮಾಜವಾದ ಎಂಬುದು ವಿದ್ಯುತ್ ಮತ್ತು ಸೋವಿಯತ್ ರೀತಿಯ ವ್ಯವಸೆ”್ಥ. ವೈಜ್ಞಾನಿಕ ಮತ್ತು ತಂತ್ರಜ್ಞಾನದ ಬುನಾದಿಯನ್ನು ಕ್ರಾಂತಿಯ ನಂತರದ ರಷ್ಯಾದಲ್ಲಿ ಸ್ಥಾಪಿಸುವುದು ಸ್ವಾಭಾವಿಕ. ಇದು ಯಾವುದೇ ಸಮಾಜವಾದಿ ರಾಷ್ಟ್ರಗಳ ಪ್ರಮುಖ ಆದ್ಯತೆ. ಈ ಬುನಾದಿ 1917 ರಲ್ಲಿ ಇರಲೇ ಇಲ್ಲ. ಲೆನಿನ್ ಅವರ ಉತ್ಸುಕತೆಯಿಂದ ಒಂದು ಸಂಶೋಧನಾ ಗುಂಪನ್ನು ಐವನ್ ಗುಬ್ಕಿನ್ ಅವರ ನೇತೃತ್ವದಲ್ಲಿ 1920ನೇ ಇಸವಿಯಲ್ಲಿ ರೂಪಿಸಲಾಯಿತು. ಲೆನಿನ್ ಅವರ ವಿಜ್ಞಾನದೆಡೆಗಿನ ಅಪಾರ ಕಾಳಜಿ ಅವರ ಈ ಪತ್ರದಿಂದ (ಲೆನಿನ್ ಪತ್ರ-1) ತಿಳಿಯುತ್ತದೆ.

ಕಬ್ಬಿಣ ಗಣಿಯ ಮಾಹಿತಿ ಕೊಟ್ಟ ಕಾಂತೀಯ ಅಸಂಗತತೆ

ಲೆನಿನ್ ಅವರಿಗೆ ನಿಧಾನ ಗತಿಯ ಪ್ರಗತಿ ಎಂದರೆ ಅಸಹನೆ. ಬಹುಶಃ ಅದಕ್ಕೆ ಕಾರಣ ಕೇಂದ್ರ ಸಮಿತಿಯಲ್ಲಿ ಅನೇಕರಿಗೆ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ನೂತನ ಸರ್ಕಾರ ಹೇಗೆ ಸ್ಥಾಪಿಸಬೇಕೆಂಬ ಕಲ್ಪನೆ ಇರಲಲ್ಲ. ಲೆನಿನ್ ರವರಿಗೂ ಸಹ ಇದು ಹೊಸ ಪ್ರಯತ್ನ. ಅವರು ಇದರ ಅನೇಕ ವಿಷಯಗಳನ್ನು ನೂತನ ಕ್ರಾಂತಿಕಾರಿ ಸರ್ಕಾರದ ಶಿಕ್ಷಣ ಮಂತ್ರಿಯಾದ ಲೂನಾಚಾರಸ್ಕಿ ಅವರೊಂದಿಗೆ ಕ್ರಾಂತಿಗೂ ಮುನ್ನಾ ದಿನಗಳಲ್ಲಿಯೇ ಹಂಚಿಕೊಂಡಿದ್ದರು. ಆದರೆ, ಈ ವಿಷಯದ ಬಗ್ಗೆ ಚರ್ಚೆ ಮಾಡಲು ಆಗಷ್ಟೇ ಝಾರ್ ಹಿಡಿತದಿಂದ ಹೊರಬಂದಿದ್ದ ಕಾರಣದಿಂದ ಬಹಳಷ್ಟು ಜನ ಲಭ್ಯ ಇರಲಿಲ್ಲ. ಅದೂ ಅಲ್ಲದೆ ಲೆನಿನ್ ಅವರಿಗೆ ವಿದೇಶೀ ಅಧಿಕಾರಿಗಳು ಮತ್ತು ಶತ್ರುಗಳು ಇವರ ವೈಜ್ಞಾನಿಕ ಪ್ರಗತಿಯನ್ನು ನಾಶ ಮಾಡುವರೆಂಬ ಸಂದೇಹವಿತ್ತು. ಈ ಕುರ್ಸ್ಕ್ ಅಸಂಗತದ ಬಗ್ಗೆ ಅವರಿಗಿದ್ದ ಸಂಶಯ ಅಕ್ಷರಶಃ ನಿಜವಾಗಿತ್ತು. ಈ ವಿಷಯದ ಬಗ್ಗೆ 14 ವರ್ಷಗಳ ಕಾಲ (1884-1898) ಮಾಸ್ಕೋ ವಿಶ್ವ ವಿದ್ಯಾಲಯದ ಅರ್ನೆಸ್ಟ್ ಲೈಸ್ಟ್ ಅವರು ಸಂಶೋಧನೆ ನಡೆಸಿದ್ದರು. ಈ ಕ್ಲಿಷ್ಟಕರವಾದ ಸಂಶೋಧನೆಯ ಫಲಿತಾಂಶವೆಂದರೆ, ಈ ಅಸಂಗತತೆಗೆ ಮೂಲಕಾರಣ ಆ ಪ್ರದೇಶದ ಕಬ್ಬಿಣ ಖನಿಜದ ಖನಿಯಾಗಿತ್ತು ಎಂಬುದು. ದುರಂತವೆಂದರೆ ಲೈಸ್ಟ್ ಅವರ ಸಂಶೋಧನಾ ದತ್ತಾಂಶಗಳನ್ನು ಜರ್ಮನ್ ಗೂಢಚಾರಿಗಳು ಕದ್ದು, ರಷ್ಯನ್ನರ ವೈಜ್ಞಾನಿಕ ಪ್ರಗತಿ ಹೆಜ್ಜೆಗಳನ್ನು ತಡೆಗಟ್ಟಿ ಅವರ ದತ್ತಾಂಶಗಳನ್ನು ಮರಳಿ ರಷ್ಯನ್ನರಿಗೇ ತುಂಬಾ ದುಬಾರಿ ಮೊತ್ತಕ್ಕೆ ಮಾರಲು ಸಿದ್ಧರಿದ್ದರು.  

ಲೆನಿನ್ ಜರ್ಮನ್ ಅಧಿಕಾರಿಗಳ ಈ ಕೋರಿಕೆಯನ್ನು ನಿರಾಕರಿಸಿ, ಹಣಸಹಾಯ ಮಾಡಲು ತಡಮಾಡಿದ ತಮ್ಮ ಸಂಗಾತಿಗಳನ್ನೇ ತರಾಟೆಗೆ ತೆಗೆದುಕೊಂಡರು. ಈ ಕೆಳಗಿನ ಪತ್ರವು (ಲೆನಿನ್ ಪತ್ರ-2) ಇದರ ಬಗ್ಗೆ ಸ್ಪಷ್ಟವಾಗಿ ತಿಳಿಸುತ್ತದೆ. 

ಗುಬ್ಕಿನ್ ಅವರ ಪರಿಶೋಧನೆಯು 1920 ರಿಂದ 1925 ವರೆಗೆ ನಡೆದಿತ್ತು. 1931 ರ ಹೊತ್ತಿಗೆ ಈ ಅಪೂರ್ವ ಕಬ್ಬಿಣ ಖನಿಜದ ಅಸ್ತಿತ್ವ ದೃಢೀಕರಿಸಲ್ಪಟ್ಟು ಅಲ್ಲಿನ ಕಬ್ಬಿಣದ ಪ್ರಮಾಣ 60% ಕ್ಕಿಂತ ಹೆಚ್ಚಾಗಿತ್ತು. ಇದರ ವಿಸ್ತೀರ್ಣವು 120,000 ಚದರ ಕಿಲೋ ಮೀಟರ್ ನಷ್ಟಿದ್ದು - ಇದು ಕರ್ನಾಟಕದ ವಿಸ್ತೀರ್ಣಕ್ಕೆ ಹೋಲಿಸಿದರೆ ಮೂರನೆ ಎರಡರಷ್ಟಿದೆ. ಗುಬ್ಕಿನ್ ಅವರು ಸೋವಿಯತ್ ಸರ್ಕಾರದ ಅನೇಕ ಪ್ರಶಸ್ತಿಗಳನ್ನು ಪಡೆದು ಮಾಸ್ಕೋ ನಗರದಲ್ಲಿ 1937 ನೇ ಇಸವಿಯಲ್ಲಿ ಜರುಗಿದ ಅಂತರರಾಷ್ಟೀಯ ಭೂವಿಜ್ಞಾನದ ಸಮ್ಮೇಳನದ ಅ ಧ್ಯಕ್ಷರಾಗಿ ಜವಾಬ್ಧಾರಿ ನಿರ್ವಹಿಸಿದರು. ಖುರ್ಸ್ಕ್ ಗಣಿಯು 1952ನೇ ಇಸವಿಯಲ್ಲಿ ಕಾರ್ಯರೂಪ ತಾಳಿ ಅಲ್ಲಿನ ಕೆಲವು ಗಣಿಗಳಿಗೆ ಗುಬ್ಕಿನ್ ಅವರ ಹೆಸರನ್ನಿಡಲಾಯಿತು. ತೈಲ ಮತ್ತು ನೈಸರ್ಗಿಕ ಅನಿಲಗಳ ಬಗ್ಗೆ ಸಂಶೋಧಿಸುವ ವಿಶ್ವ ವಿದ್ಯಾಲಯಕ್ಕೆ ಗುಬ್ಕಿನ್ ಅವರ ಹೆಸರನ್ನಿಡಲಾಯಿತು. ಗುಬ್ಕಿನ್ ಕಾಲದಲ್ಲಿ ಈ ಪರಿಶೋಧನೆಗಳನ್ನು ಭೂಪರೀಕ್ಷೆ ಮೂಲಕ ನಡೆಸಲಾಗುತ್ತಿತ್ತು. ಈಗಿನ ಕಾಲದಲ್ಲಿ, ವೈಮಾನಿಕ ಮತ್ತು ಬಾಹ್ಯಾಕಾಶ ಪರಿಕರಗಳು ಇಂತಹ ಅಸಂಗತತೆಗಳನ್ನು ಕಂಡುಕೊಳ್ಳಬಲ್ಲವು.

ಲೆನಿನ್ ಪತ್ರ-1, ಮೇ 13, 1922: ಕಾಮ್ರೇಡ್ ಸ್ಮಾಲಿಯಾ ನಿನೋವ್. 

ದಯವಿಟ್ಟು ಈ ವಿಷಯವನ್ನು ತುರ್ತಾಗಿ ಪರಿಶೀಲಿಸಿ 

ಕುರ್ಸ್ಕ್ ಅಸಂಗತತೆಯ ಬಗ್ಗೆ ಸಂಶೋಧನೆಯನ್ನು ನಡೆಸುತ್ತಿದ್ದ ಶೈಕ್ಷಣಿಕ ತಜ್ಞರಾದ ಲಜಾರೇವ್ ಗೆ ಹಣದ ಬೆಂಬಲವನ್ನು ನಿರಾಕರಿಸಿದ್ದರ ಬಗ್ಗೆ ಮತ್ತು ಅವರು ಏನು ಬಯಸಿದ್ದರು, ಎಷ್ಟು ಸಂದಾಯವಾಗಿದೆ ಎಂಬುದನ್ನು ತಿಳಿಸುವಂತೆ     

 - ಲೆನಿನ್

ಲೆನಿನ್ ಪತ್ರ-2“ಸಂಗಾತಿ ರೈಕೋವ್”, ಪ್ರತಿ: ಸಂಗಾತಿ ಸ್ವೈರೂಪ, ಸಿ.ಪಿ.ಸಿ ಆಡಳಿತ ಮಂಡಳಿ.

ಕುರ್ಸ್ಕ್ ಅಸಂಗತತೆಯ ಬಗ್ಗೆ ನಮ್ಮ ಪ್ರಮುಖ ವೈಜ್ಞಾನಿಕ ಸಂಶೋಧನೆಯ ಪ್ರಗತಿಯನ್ನು ತಿಳಿಸಲು ನಿಮ್ಮ ಗಮನ ಸೆಳೆಯಲು ಬಯಸುತ್ತೇನೆ. ಸಂಗಾತಿ ಕ್ರೆಜಿ ಝನ್ ಹೌಸ್ಕಿ ಮತ್ತು ಇತರೆ ಇಂಜಿನಿಯರ್‍ಗಳ ಅಭಿಪ್ರಾಯದಂತೆ ನಮ್ಮಲ್ಲಿ ಪ್ರಮುಖವಾದ ಕಬ್ಬಿಣ ಅದಿರಿನ ಖನಿಯಿದೆ ಎಂದು ಪುರಾವೆಯಾಗಿದೆ. ಸಂಗಾತಿ ಮಾರ್ಟ್ರೈನ್ಸ್ ಸಹ ಇದು ಈಗಾಗಲೆ ಪುರಾವೆಯಾಗಿದೆ ಎಂದು ನಂಬುತ್ತಾರೆ. ಇನ್ನು ಮೂರು ವಾರಗಳ ಸಮಯದಲ್ಲಿ ಅವರು ಅಲ್ಲಿಗೆ ಹೋಗಲು ಸಿದ್ಧರಿರುತ್ತಾರೆ. ನಾವೀಗ ನಿರ್ಧರಿಸಬೇಕಾದದ್ದು ಅವರೊಂದಿಗೆ ನಮ್ಮ ರಷ್ಯಾದ ಪರಿಸ್ಥಿತಿಯನ್ನು ಬಲ್ಲ ಪರಿಣಿತ ಇಂಜಿನಿಯರುಗಳನ್ನು ಯೋಜನಾ ಆಯೋಗದ ವತಿಯಿಂದ ಕಳಿಸುವುದೇ ಎನ್ನುವುದು. ಈ ಸಂಶೋಧನಾ ಫಲಿತಾಂಶದಲ್ಲಿ ಯಾವುದೇ ಉತ್ಪ್ರೇಕ್ಷೆ ಇದೆಯೇ, ಇಲ್ಲವೆ ಎಂಬುದನ್ನು ಈ ಪರಿಣಿತರು ಹೇಳಬಲ್ಲವರಾಗಿರಬೇಕು. 

ನನ್ನ ಅನಿಸಿಕೆಯ ಪ್ರಕಾರ ಈ ಯಾವ ವಿಷಯವನ್ನು ಮಾದ್ಯಮಕ್ಕೆ ತಿಳಿಸಬಾರದು. ಇಲ್ಲದಿದ್ದರೆ ಮಧ್ಯೆ ಪ್ರವೇಶಿಸುವವರ ಯೋಜನೆಗಳು ತೀವ್ರ ಸ್ವರೂಪವನ್ನು ತಾಳಬಹುದೆಂಬ ಸಂಶಯವಿದೆ. ಇದೇ ಕಾರಣಕ್ಕೆ ಮಾರ್ಟ್ರೈನ್ಸ್ ರವರ ವರದಿಯನ್ನು ಸಿ.ಪಿ.ಸಿ ಅಥವಾ ಸಿ.ಐ.ಡಿ ಗೆ ಪ್ರಕಟಿಸದೆ ಉಪನಿರ್ದೇಶಕರು ಮತ್ತು ಕೆಲವು ಸಿ.ಸಿ. ಸದಸ್ಯರಿಗೆ ಮಾತ್ರ ತಿಳಿಸಬೇಕು. 

ಮಾರ್ಟ್ರೈನ್ಸ್ ವರದಿ ಮತ್ತು ಅವರ ಜೊತೆಯಿರುವ ಎಸ್.ಪಿ.ಸಿ ಪರಿಣಿತರು ಈ ವಿಷಯವನ್ನು ಧೃಢಪಡಿಸಿದಲ್ಲ್ಲಿ, ನಾವು ಆದಷ್ಟು ಬೇಗ ಈ ಕಾರ್ಯವನ್ನು ಶೀಘ್ರಗತಿಯಲ್ಲಿ ಮುನ್ನಡೆಸಿ ಯಾವುದೇ ಕಾರಣಕ್ಕು ಈ ಚಿನ್ನದ ಅವಕಾಶವನ್ನು ಕಳೆದುಕೊಳ್ಳದೆ, ಪ್ರತಗಿಪರಿಶೀಲನೆ ನಡೆಸಿ, ಅದಕ್ಕೆ ಅಗತ್ಯವಾದ ಸಾಮಗ್ರಿಗಳನ್ನು ಅತಿವೇಗದಲ್ಲಿ ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳಬೇಕು (ಉದಾಹರಣೆಗೆ ವಜ್ರ ಕೊರೆಯುವಂತಹ ಸಾಮಗ್ರಿಗಳು) ನನ್ನ ಭಯವೆಂದರೆ ನನ್ನ ಈ ಸಂಶೋಧನೆಯು ನಮ್ಮ ಶಕ್ತಿಗೆ ಸವಾಲಾಗಬಾರದು. ಸತ್ಯವೇನೆಂದರೆ, ಕ್ರೆಝಿಜೆನ್ ಹೌಸ್ಕಿ ಮತ್ತು ಮಾರ್ಟ್ರೈನ್ಸ್ ಅವರ ನಂಬಿಕೆಯ ಪ್ರಕಾರ ನಮ್ಮಲ್ಲಿ ಪ್ರಪಂಚದಲ್ಲಿ ಎಲ್ಲೂ ಕಾಣದ ಖನಿಜ ಸಂಪತ್ತಿದೆ ಮತ್ತು ಇದು ಖನಿಜ ವಿಜ್ಞಾನ (Geological Science) ದಲ್ಲಿ ಕ್ರಾಂತಿಯನ್ನು ಸೃಷ್ಟಿಸಲು ಸಶಕ್ತವಾಗಿದೆ. 

- ಲೆನಿನ್