ಸಾಹಿತಿ ಯೋಗೇಶ್ ಮಾಸ್ಟರ್ ಮೇಲಿನ ಮತೀಯವಾದಿಗಳ ದಾಳಿ ಖಂಡಿಸಿ ಪ್ರತಿಭಟನೆ

ಸಂಪುಟ: 
11
ಸಂಚಿಕೆ: 
13
Sunday, 19 March 2017

ಸಾಹಿತಿ ಯೋಗೇಶ್ ಮಾಸ್ಟರ್ ಮೇಲಿನ ಮತೀಯವಾದಿಗಳ ದಾಳಿ ಖಂಡಿಸಿ SFI,AIDSO,AISF,AISA,KVS,DYFI,JMS,DHS, ಸಮುದಾಯ ಕರ್ನಾಟಕ, ದಲಿತ ಸಂಘಟನೆ ಸೇರಿದಂತೆ ಅನೇಕ ಪ್ರಗತಿಪರ ಸಂಘಟನೆಗಳು ಟೌನ್ ಹಾಲ್ ಮುಂಭಾಗದ ಬಳಿ ಪ್ರತಿಭಟನೆ ನಡೆಸಿದರು.

ಪ್ರಗತಿಪರ ಸಾಹಿತಿ ಸಿದ್ಧನಗೌಡ ಪಾಟೀಲ್ ಮಾತನಾಡುತ್ತಾ "ಪೊಲೀಸರು ಕಿಡಿಗೇಡಿಗಳನ್ನು ಬೆಳಿಗ್ಗೆ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಬಂದಿತರನ್ನು ಕೇಳಿದಾಗ " ಯೋಗೇಶ್ ಅವರು ಹಿಂದು ದೇವರುಗಳ ಬಗ್ಗೆ ಬರೀತಾರೆ. ಹಿಂದೂ ದೇವರುಗಳ ವಿರುದ್ಧ ಬರೆದರೆ ನಾನು ಸುಮ್ಮನೇ ಇರಲ್ಲಾ ಎಂದು ಹೇಳಿದ್ದಾರೆ. ಇನ್ನು ಕರ್ನಾಟಕ ರಾಜ್ಯದಲ್ಲಿ ಮುಂದಿನ ಚುನಾವಣೆಯಲ್ಲಿ ಕೋಮುವಾದಿ ಸರ್ಕಾರ ಬಂದರೆ ಕಾರ್ಯಕ್ರಮ ನಡೆಸಲು ಸಹ ನಮಗೆ ಒಪ್ಪಿಗೆ ಖಂಡಿತಾ ಸಿಗಲ್ಲಾ. ನಾವು ಇಲ್ಲಿರುವ ಸಂಗಾತಿಗಳನ್ನು ನಾನು ಕೇಳಿಕೊಳ್ಳುತ್ತೇನೆ ನಾವು ಕೇವಲ ಖಂಡನಾ ಸಭೆಯನ್ನು ಮಾಡಿದ್ರೆ ಸಾಕಾಗಲ್ಲಾ. ಮುಂದಿನ ದಿನಗಳಲ್ಲಿ ರಾಜ್ಯ ಮಟ್ಟದ ಖಂಡನಾ ಸಮಾವೇಶ ಮಾಡಬೇಕಾದ ಅಗತ್ಯತೆ ಇದೆ. ನಮ್ಮ ಬೆಂಬಲಿಗರನ್ನು ನಾವು ತಲುಪಬೇಕಾಗುತ್ತದೆ. ಅವರ ಭಾಷೆಯಲ್ಲೇ ನಾವು ಉತ್ತರ ನೀಡಬೇಕಾಗುತ್ತದೆ. ಮತಾಂದ ಶಕ್ತಿಗಳನ್ನು ಒಗ್ಗಟ್ಟಿನಿಂದ ಯದರುಸೋಣ. ಮತಾಂದ ಶಕ್ತಿಗಳು ದೊಡ್ಡ ಮಟ್ಟದಲ್ಲಿ ಒಗ್ಗಟ್ಟಿದ್ದಾರೆ. ನಾವು ಪ್ರತಿಕ್ರಿಯೆ ನೀಡುವುದಕ್ಕೆ ಮಾತ್ರ ಸೀಮಿತ ರಾಗದೆ ಕ್ರಿಯೆಗೆ ಇಳಿಯೋಣ. ರಾಜ್ಯ ಮಟ್ಟದ ದೊಡ್ಡ ಮಟ್ಟದ ಸಮಾವೇಶಗಳನ್ನ ನಡೆಸೋಣ ಅಂತಾ ಹೇಳ್ತಾ. ಯೋಗೇಶ್ ಮಾಸ್ಟರ್ ಅವರೊಂದಿಗೆ ನಾವಿದ್ದೇವೆ ಎಂದರು.

ಸಮಾಜ ವಿಜ್ಞಾನಿ GN ನಾಗರಾಜ್ ಮಾತನಾಡುತ್ತಾ

"ಇದು ಹಿಂದು ಧರ್ಮದ ಮೇಲೆ ನಡೆದಿರುವ ದಾಳಿ ಇದು. ಉಪನುಷ್ಯತ್ತಿನ ಮೇಲೆ ನಡೆದಿರುವ ದಾಳಿ ಇದು. ಮಾನವ ಸಮಾಜದ ಹುಟ್ಟಿನಿಂದಾಗಿರುವ ಈ ಸಾಂಸ್ಕ್ರತಿಕ ತೆ ಮೇಲೆ ನಡೆದಿರುವ ದಾಳಿ ಇದು. ಹಿಂದು ಎನ್ನುವ ಪದಕ್ಕೆ ದ್ರೋಹ ಬಗೆದಿದ್ದಾರೆ. ಅವರು ಹಿಂದೂ ಪ್ರೇಮಿಗಳಲ್ಲ ಅವರು ಹಿಂದು ಧರ್ಮದ ದ್ರೋಹಿಗಳು. ಹಿಂದೂ ಧರ್ಮದ ಬಗ್ಗೆ ಬಸವಣ್ಣ, ಫುಲೆ, ಅಂಬೇಡ್ಕರ್ ಹಾಗೂ ಇನ್ನಿತರ ಮಹಾನ್ ನಾಯಕರುಗಳು ಹಿಂದೂ ಧರ್ಮದ ಮೇಲೆ ಚರ್ಚೆ ನಡೆಸಿದ್ದಾರೆ ಹಾಗೂ ಇವರು ನಂಬಿರುವ ಹಿಂದೂ ಧರ್ಮದ ಬಗ್ಗೆ ಸಾವಿರಾರು ಪ್ರಶ್ನೆಗಳನ್ನು ಮಾಡಿದ್ದಾರೆ. ಬಹುಶಃ ಅವರೆನಾದ್ರು ಬೇಕಿದ್ದರೆ ಅವರ ಮೇಲೂ ದಾಳಿಗಳನ್ನ ಮಾಡ್ತಾ ಇದ್ರು ಅನಿಸುತ್ತೆ. ಮಂಗಳೂರಿನಲ್ಲೂ ಸಹ ಪಿಣರಾಯಿ ವಿಜಯನ್ ಅವರನ್ನು ಮಂಗಳೂರಿಗೆ ಕಾಲಿಡಿ ನೋಡೋಣ ಎಂದು ಹೆದರಿಸುವ ತಂತ್ರ ಹಾಕಿದ್ರು ಅದನ್ನ ನಾವು ಎದುರಿಸಿದ್ದಿವಿ. ಇವೆಲ್ಲಾ ಮುಂದಿನ ರಾಜಕೀಯಕ್ಕಾಗಿ ಮಾಡ್ತಾ ಇರುವ ತಂತ್ರಗಳು. ಕರ್ನಾಟಕದ ಮೂಲೆ ಮೂಲೆಯಲ್ಲಿರುವ ಸಾಂಸ್ಕೃತಿಕತೆಯನ್ನು ವಿರೋಧಿಸುವ ಕೆಲಸ ಕೋಮುವಾದಿಗಳು ನಡೆಸುತ್ತಿದ್ದಾರೆ. ಹಾಗಾಗಿ ರಾಜ್ಯದ ಯಾವುದೇ ಮೂಲೆಯಲ್ಲಿ ನಮ್ಮ ಸಂಗಾತಿಗಳ ಮೇಲೆ ದಾಳಿ ನಡೆದರೆ ನಾವೆಲ್ಲರೂ ಕೂಡಾ ಪ್ರತಿಕ್ರಿಯೆ ನೀಡೋಣ ಎಂದು ಹೇಳುತ್ತಾ ಕೋಮುವಾದಿ ಶಕ್ತಿಗಳನ್ನ ಹಿಮ್ಮೆಟ್ಟಿಸೋಣ."

ಮತೀಯವಾದಿಗಳ ದಾಳಿಗೊಳಗಾದ ಯೋಗೇಶ್ ಮಾಸ್ಟರ್ ಮಾತನಾಡಿ "ನಿನ್ನಯ ದಾಳಿ ನೆಪ ಮಾತ್ರ. ಹಾಗೇನೇ ನಾನು ಕೂಡಾ ಒಂದು ನೆಪ. ಮಾನವತಾವಾದಿಗಳ ಗುಂಪಿನಲ್ಲಿ ನಾನು ಗುರುತು ಮಾಡಿಕೊಳ್ಳುವುದರಲ್ಲಿ ಹೆಮ್ಮೆ ಆಗುತ್ತಿದೆ. ಹಾಗೆಯೇ ನನ್ನ ಮೇಲೆ ದಾಳಿ ಮಾಡಿದ ಆ ಅಮಾಯಕ ಹುಡಗರನ್ನ ನೋಡಿ ನೋವಾಗುತ್ತಿದೆ. ನನ್ನ ಮೇಲೆ ದಾಳಿ ನಡೆಸುವುದಕ್ಕೆ ಪ್ರೇರೇಪಣೆ ಮಾಡಿದವರನ್ನು ನೋಡಿ ಅಸಹ್ಯವಾಗುತ್ತಿದೆ. ಆ ಅಮಾಯಕ ಹುಡುಗರ ತಲೆಯೊಳಗೆ ಹುಸಿ ಹಿಂದುತ್ವದ ಭಾವನೆಗಳನ್ನು ತುಂಬಿರುವ ಸಂಘ ಪರಿವಾರದವರ ತಂತ್ರಗಳನ್ನು ಖಂಡಿಸಬೇಕಾಗಿದೆ. ನನ್ನ ಮೇಲೆ ದಾಳಿಯನ್ನು ರಾಜ್ಯಾದ್ಯಾಂತ ಖಂಡಿಸಿದ್ದಾರೆ. ಅವರಿಗೆಲ್ಲ ಅಭಿನಂದನೆಗಳು.

ಪ್ರತಿಭಟನೆಯಲ್ಲಿ ಗೌರಿ ಲಂಕೇಶ್, RG ಹಳ್ಳಿ ನಾಗರಾಜ, ನಗರಗೇರೆ ರಮೇಶ್, ಟಿ.ಸುರೇಂದ್ರರಾವ್, KS ವಿಮಲಾ, ಚಿಕ್ಕರಾಜು, ವೇಗಾನಂದ, ರೇಣುಕಾ ಕಹಾರ, ಮಲ್ಲಿಗೆ, ವಡ್ಡಗೇರೆ ನಾಗರಾಜ, ಎನ್,ನಾಗರಾಜ್, ರಾಮಕೃಷ್ಣ, ಶ್ರೀನಿವಾಸ, ಮುತ್ತುರಾಜ್ ಸೇರಿದಂತೆ ಅನೇಕರಿದ್ದರು.

ಪ್ರಾಸ್ಥಾವಿಕವಾಗಿ SFI ರಾಜ್ಯ ಕಾರ್ಯದರ್ಶಿ ಗುರುರಾಜ್ ದೇಸಾಯಿ, ಕೇಂದ್ರ ಸಮಿತಿ ಸದಸ್ಯ ಬಸವರಾಜ ಪೂಜಾರ ಕಾರ್ಯಕ್ರಮವನ್ನು ನಿರ್ವಹಿ ಸಿದರು. AIDSO ಅಜಯ್ ಕಾಮತ್ ವಂದಿಸಿದರು. KVS ಗೆಳೆಯರು ಕ್ರಾಂತಿಗೀತೆ ಹಾಡಿದರು.

"ನನ್ನ ಮೇಲೆ ದಾಳಿ ಮಾಡಿದ ಆ ಅಮಾಯಕ ಹುಡಗರನ್ನ ನೋಡಿ ನೋವಾಗುತ್ತಿದೆ. ನನ್ನ ಮೇಲೆ ದಾಳಿ ನಡೆಸುವುದಕ್ಕೆ ಪ್ರೇರೇಪಣೆ ಮಾಡಿದವರನ್ನು ನೋಡಿ ಅಸಹ್ಯವಾಗುತ್ತಿದೆ. ಆ ಅಮಾಯಕ ಹುಡುಗರ ತಲೆಯೊಳಗೆ ಹುಸಿ ಹಿಂದುತ್ವದ ಭಾವನೆಗಳನ್ನು ತುಂಬಿರುವ ಸಂಘ ಪರಿವಾರದವರ ತಂತ್ರಗಳನ್ನು ಖಂಡಿಸಬೇಕಾಗಿದೆ". - ಯೋಗೇಶ್ ಮಾಸ್ಟರ್