ಮಣಿಪುರ ವಿಧಾನಸಭಾ ಚುನಾವಣೆಗ¼ಲ್ಲಿ ಎಡ ಪ್ರಜಾಪ್ರಭುತ್ವ ರಂಗ

ಸಂಪುಟ: 
11
ಸಂಚಿಕೆ: 
11
Sunday, 5 March 2017

ಮಣಿಪುರ ವಿಧಾನ ಸಭಾ ಚುನಾವಣೆಗಳಲ್ಲಿ ಏಳು ಪಕ್ಷಗಳು, ಸಿಪಿಐ(ಎಂ), ಸಿಪಿಐ, ಜೆಡಿ(ಯು), ಎನ್‍ಸಿಪಿ, ಎಎಪಿ, ಪಿಡಿಎ ಮತ್ತು ಎಂಎನ್‍ಡಿಎಫ್ ಎಡ ಪ್ರಜಾಪ್ರಭುತ್ವ ರಂಗವನ್ನು ರಚಿಸಿಕೊಂಡಿದ್ದು 33 ಸ್ತಾನಗಳಲ್ಲಿ ಸ್ಪರ್ಧಿಸುತ್ತಿವೆ, 21 ಕ್ಷೇತ್ರಗಳಲ್ಲಿ ಎನ್‍ಪಿಪಿ ಗೆ ಬೆಂಬಲ ನೀಡುತ್ತಿವೆ.

ಈ ರಂಗ ಭ್ರಷ್ಟ ಕಾಂಗ್ರೆಸ್ ಸೋಲಿಸಿ ಮತ್ತು ಕೋಮುವಾದಿ ಬಿಜೆಪಿಯನ್ನು ಮೂಲೆಗೆ ತಳ್ಳಿ, ಒಂದು ಪರ್ಯಾಯ ಸರಕಾರವನ್ನು ಆರಿಸಿ ಎಂದು ಮಣಿಪುರದ ಮತದಾರರಿಗೆ  ಕರೆ ನೀಡಿದೆ.

ಈ ರಂಗದ ಪರವಾಗಿ ಸಿಪಿಐ(ಎಂ) ಸಂಸತ್ ಸದಸ್ಯ ಮತ್ತು ತ್ರಿಪುರಾದ ಹಿರಿಯ ಮುಖಂಡ ಜಿತೇಂದ್ರ ಚೌಧುರಿ ರಾಜ್ಯದಲ್ಲಿ ಚುನಾವಣಾ ಸಭೆಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದಾರೆ.

ಜಿತೇಂದ್ರ ಚೌಧುರಿಯವರು ಈ ರಾಜ್ಯದಲ್ಲಿ ಮಹಿಳಾ ಹೋರಾಟದ ದನಿಯಾಗಿರುವ ಮತ್ತು ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆ(ಎಎಫ್‍ಎಸ್‍ಪಿಎ) ವಿರುದ್ಧ ದಶಕಗಳಿಂದ ಹೋರಾಡುತ್ತಿರುವ ಇರೊಮ್ ಶರ್ಮಿಲ ಚಾನು ಅವರನ್ನು ಭೇಟಿಯಾಗಿ ಅವರಿಗೆ ಸಿಪಿಐ(ಎಂ)ನ ಬೆಂಬಲವನ್ನು ವ್ಯಕ್ತಪಡಿಸಿದರು. ಇವರು ತಮ್ಮ ದೀರ್ಘ ಕಾಲದ ಉಪವಾಸ ಹೋರಾಟದ ನಂತರ ಈಗ ಈ ಚುನಾವಣೆಗಳಲ್ಲಿ ಹೋರಾಟ ಮುಂದುವರೆಸಲು ನಿರ್ಧರಿಸಿ ಮುಖ್ಯ ಮಂತ್ರಿಯಾಗಿರುವ ಇಬೊಬ್ ಸಿಂಗ್ ಅವರ ವಿರುದ್ಧ ಸ್ಪರ್ಧಿಸುತ್ತಿದ್ದಾರೆ.