Error message

  • Deprecated function: Methods with the same name as their class will not be constructors in a future version of PHP; views_display has a deprecated constructor in require_once() (line 3097 of /home/janashakthi/public_html/includes/bootstrap.inc).
  • Deprecated function: Methods with the same name as their class will not be constructors in a future version of PHP; views_many_to_one_helper has a deprecated constructor in require_once() (line 113 of /home/janashakthi/public_html/sites/all/modules/ctools/ctools.module).

ಜೈಪುರದಲ್ಲಿ ರೈತರ ಬೃಹತ್ ವಿಜಯೋತ್ಸವ-ಸಂಘರ್ಷ ರ್ಯಾಲಿ

ಸಂಪುಟ: 
11
ಸಂಚಿಕೆ: 
11
Sunday, 5 March 2017

ಮಾರ್ಚ್ 2 ರಂದು ರಾಜಸ್ತಾನದ ರಾಜಧಾನಿ ಜೈಪುರದಲ್ಲಿ ಒಂದು ಬೃಹತ್ ರೈತ ರ್ಯಾಲಿ ನಡೆಯಿತು. ಅಖಿಲ ಭಾರತ ಕಿಸಾನ್ ಸಭಾ(ಎಐಕೆಎಸ್)ದ ರಾಜಸ್ತಾನ ರಾಜ್ಯ ಸಮಿತಿಯ ಕರೆಗೆ ಓಗೊಟ್ಟು ಸಾವಿರಾರು ರೈತರು ರಾಜ್ಯದ ಮೂಲೆ-ಮೂಲೆಗಳಿಂದ  ಬಂದು ನೆರೆದಿದ್ದರು.

ರಾಜ್ಯದಲ್ಲಿ ಈ ಹಿಂದೆ ಇತ್ತೀಚಿನ ದಿನಗಳಲ್ಲಿ ನಡೆದ ರೈತರ ಹಲವು ಪ್ರತಿಭಟನೆಗಳಿಂದಾಗಿ ರಾಜಸ್ತಾನ ಸರಕಾರ ವಿದ್ಯುತ್ ದರಗಳ ಏರಿಕೆಯನ್ನು ಹಿಂತೆಗೆದುಕೊಳ್ಳಬೇಕಾಗಿ ಬಂದಿತ್ತು. ಕೃಷಿಗೆ ಸಾಕಷ್ಟು ನೀರಾವರಿ ವ್ಯವಸ್ಥೆಯನ್ನು ಮಾಡಲು ನಿರಾಕರಿಸುತ್ತಿರುವ ಬಿಜೆಪಿ ಸರಕಾರದ ವಿರುದ್ಧ ಸಂಬಂಧಪಟ್ಟ ಜಿಲ್ಲೆಗಳಲ್ಲಿ ಎಐಕೆಎಸ್ ನೇತೃತ್ವದಲ್ಲಿ ಹೋರಾಟಗಳು ಭುಗಿಲೆದ್ದವು.

ಈ ಪ್ರಶ್ನೆಯನ್ನು ಎತ್ತಿಕೊಳ್ಳುವ ಬದಲು ವಸುಂಧರ ರಾಜೇ ಸರಕಾರ ಶೆಖಾವತಿ ಪಟ್ಟಿಯ ಪ್ರದೇಶದಲ್ಲಿ ನೀರಾವರಿಗೆ ವಿದ್ಯುತ್ ದರಗಳಲ್ಲಿ ಭಾರೀ ಏರಿಕೆ ಮಾಡಲು ಮುಂದಾಯಿತು. ಮನೆಬಳಕೆಯ ವಿದ್ಯುತ್ತಿಗೂ ಭಾರಿ ದರ ಏರಿಕೆ ಪ್ರಕಟಿಸಲಾಯಿತು. ಕೂಡಲೇ ಎಐಕೆಎಸ್ ಇದರ ವಿರುದ್ಧ  ಹಲವಾರು ಪ್ರತಿಭಟನೆಗಳನ್ನು ಸಂಘಟಿಸಿತು. ವಿದ್ಯುತ್ ಬಿಲ್ ಪಾವತಿಯನ್ನು ಬಹಿಷ್ಕರಿಸಿ ಎಂಬ ಕರೆಗೆ ವ್ಯಾಪಕ ಸ್ಪಂದನೆ ದೊರೆಯಿತು.

ಈ ಪ್ರದೇಶದಲ್ಲಿ 1 ಲಕ್ಷಕ್ಕೂ ಹೆಚ್ಚು ಕೊಳವೆ ಬಾವಿಗಳಿವೆ. ಬಿಜೆಪಿ ಸರಕಾರ ವಿದ್ಯುತ್ ಪೂರೈಕೆಯನ್ನು ಖಾಸಗೀಕರಿಸಿದ್ದರಿಂದ ದರಗಳು ಆಗಲೇ ವಿಪರೀತ ಏರಿದ್ದವು. ಇವೆಲ್ಲದರ ವಿರುದ್ಧ ಎಐಕೆಎಸ್ ಸಿಕಾರ್ ಜಿಲ್ಲೆಯಲ್ಲಿ 40,000 ರೈತರನ್ನು, ಝುನ್‍ಝುನುನಲ್ಲಿ 25,000, ಚುರುನಲ್ಲಿ 15,000 ಮತ್ತು ನಾಗೊರ್‍ನಲ್ಲಿ 5000 ರೈತರನ್ನು ಅಣಿನೆರೆಸಿ ಪ್ರತಿಭಟನಾ ರ್ಯಾಲಿಗಳನ್ನು ಸಂಘಟಿಸಿತು.

ಈ ಪ್ರತಿಭಟನೆಗಳ ಮುಂದಿನ ಕಾರ್ಯಾಚರಣೆಯಾಗಿ ಮಾರ್ಚ್ 2ರಂದು ರಾಜಧಾನಿ ಜಯಪುರದಲ್ಲಿ ‘ಮಹಾಪಡಾವ್’ ನಡೆಸಲು ನಿರ್ಧರಿಸಲಾಯಿತು. ಸಿಕಾರ್, ನಾಗೊರ್ ಮತ್ತು ಚುರುನಿಂದ ಮೂರು ಜಾತಾಗಳಲ್ಲಿ ಅಪಾರ ಸಂಖ್ಯೆಯಲ್ಲಿ ಜಯಪುರಕ್ಕೆ ಬಂದು ವಿಧಾನಸಭೆಯನ್ನು ಸುತ್ತುವರೆದು ಅಹೋರಾತ್ರಿ ಧರಣಿ ನಡೆಸಲು ಕರೆ ನೀಡಲಾಯಿತು.  ಇದು ಸರಕಾರೀ ವಲಯಗಳಲ್ಲಿ ಭೀತಿಯುಂಟು ಮಾಡಿತು. ಪ್ರಮುಖ ವಿರೋಧಪಕ್ಷ ಕಾಂಗ್ರೆಸ್ ವಿದ್ಯುತ್ ದರ ಏರಿಕೆಯ ಪ್ರಶ್ನೆಯನ್ನು ಎತ್ತಿಕೊಳ್ಳಲಿಲ್ಲ. ಆದ್ದರಿಂದ ಕೆಲವು ಕಾಂಗ್ರೆಸ್ ಶಾಸಕರು ಮತ್ತು ಇತರ ಮುಖಂಡರೂ ಎಐಕೆಎಸ್ ರ್ಯಾಲಿಗಳಲ್ಲಿ ಭಾಗವಹಿಸಿದರು.

ಈ ಹೋರಾಟಗಳ ಫಲವಾಗಿ ಸರಕಾರ ವಿದ್ಯುತ್ ದರ ಏರಿಕೆಯನ್ನು ಹಿಂದಕ್ಕೆ ಪಡೆಯಿತು. ಇದು ರೈತರಲ್ಲಿ  ಹೊಸ ಹುರುಪನ್ನು ಮೂಡಿಸಿತು. ಆದರೆ ರೈತರ ಇತರ ಪ್ರಮುಖ ಬೇಡಿಕೆಗಳು ಈಡೇರಿಲ್ಲ. ಬೆಳೆಗಳಿಗೆ ಫಲದಾಯಕ ಬೆಲೆ ಸಿಗುತ್ತಿಲ್ಲ, ಲಾಗುವಾಡುಗಳ ವಿಪರೀತ ಬೆಲೆಗಳನ್ನು ಇಳಿಸಿಲ್ಲ, ರೈತರಿಗೆ ಸುಲಭ ದರಗಳಲ್ಲಿ ಸಾಲಗಳು ಸಿಗುತ್ತಿಲ್ಲ, ಸಾಲಮನ್ನಾದ ಬೇಡಿಕೆ ಇತ್ಯರ್ಥವಾಗದೇ ಉಳಿದಿದೆ. ಇವೆಲ್ಲ ಬೇಡಿಕೆಗಳ ಮೇಲೆ ಹೋರಾಟ ಮುಂದುವರೆದಿದೆ. ವಿದ್ಯುತ್ ದರ ಇಳಿಕೆಯ ಹೋರಾಟದ ಯಶಸ್ಸಿನ ಹಿನ್ನೆಲೆಯಲ್ಲಿ ವಿಧಾನಸಭೆ ಘೇರಾವ್ ಬದಲು ‘ಜೈಪುರ ಕೂಚ್’ ರ್ಯಾಲಿಗೆ ಕರೆ ನೀಡಲಾಯಿತು. ಇದು

ವಿಜಯೋತ್ಸವ-ಸಂಘರ್ಷ ರ್ಯಾಲಿ.

ಕೃಷಿರಂಗದಲ್ಲಿ ನವ-ಉದಾರವಾದಿ ಧೋರಣೆಗಳನ್ನು ಅನುಸರಿಸುವಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಒಮ್ಮತವಿದೆ. ಆದರೆ ಎರಡೂ ಪಕ್ಷಗಳೂ ಚೆನ್ನಾಗಿ ನಾಟಕ ಮಾಡುತ್ತಿವೆ. ಪ್ರತಿಪಕ್ಷವಾಗಿರುವಾಗ ಈ ಧೋರಣೆಗಳನ್ನು ವಿರೋಧಿಸುತ್ತವೆ, ಆದರೆ ಅಧಿಕಾರಕ್ಕೆ ಬಂದಾಗ ಅವನ್ನೇ ಜಾರಿ ಮಾಡುತ್ತವೆ. ಆದ್ದರಿಂದ ಈ ಎರಡೂ ಪಕ್ಷಗಳು ಅನುಸರಿಸುತ್ತಿರುವ ರೈತ-ವಿರೋಧಿ ಧೋರಣೆಗಳನ್ನು ಮುಂದುವರೆಸಲು ನಿರ್ಧರಿಸಿದ ಎಐಕೆಎಸ್ ರಾಜ್ಯಸಮಿತಿ ಈ ರ್ಯಾಲಿ ನಡೆಸಲು, ಅಲ್ಲಿ ಕಿಸಾನ್ ಪಂಚಾಯತ್ ನಡೆಸಿ ಹೋರಾಟದ ಮುಂದಿನ ಹಂತವನ್ನು ಯೋಜಿಸಲು ನಿರ್ಧರಿಸಿತು.

ಅದರಂತೆ ಈ ಬೃಹತ್ ರ್ಯಾಲಿ ನಡೆದಿದೆ. ಎಐಕೆಎಸ್ ಪ್ರಧಾನ ಕಾರ್ಯದರ್ಶಿ ಹನ್ನನ್ ಮೊಲ್ಲ, ಅಧ್ಯಕ್ಷರಾದ ಆಮ್ರ ರಾಮ್, ಇತರ ಎಐಕೆಸ್ ಮುಖಂಡರಾದ  ಅಶೋಕ ಧವಳೆ, ವಾಸುದೇವ ಶರ್ಮ, ಪೇಮ ರಾಮ್ ಮತ್ತಿತರರು ರ್ಯಾಲಿಯನ್ನುದ್ದೇಶಿಸಿ ಮಾತನಾಡಿದರು.