ಎಸ್.ಎಫ್.ಐ ರಾಜ್ಯ ಸಮ್ಮೇಳನ

ಸಂಪುಟ: 
11
ಸಂಚಿಕೆ: 
11
Sunday, 5 March 2017

ಎಸ್.ಎಫ್.ಐ ರಾಜ್ಯ ಸಮ್ಮೇಳನ ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಫೆಬ್ರವರಿ 23 ರಿಂದ 26 ವರೆಗೆ ಸಿ.ಬಿ.ಎಸ್. ಕಲ್ಯಾಣ ಮಂಟಪದಲ್ಲಿ ನಡೆಯಿತು.

23 ರಂದು ಬಾಬು ಜಗಜೀವನರಾಮ್ ವೃತ್ತದ ಬಳಿ ಬಹಿರಂಗ ಸಭೆ ನಡೆಯಿತು. ಕೂಡಲ ಸಂಗಮದ ಶ್ರೀ ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳು ಚಾಲನೆ ನೀಡಿದರು. ಎಸ್.ಎಫ್.ಐ ಅಖಿಲ ಭಾರತ ಪ್ರಧಾನಕಾರ್ಯದರ್ಶಿ ವಿಕ್ರಂ ಸಿಂಗ್ ಮುಖ್ಯ ಮುತಿಥಿಯಾಗಿ ಮಾತನಾಡಿದರು.ರಾಜ್ಯ ಕಾರ್ಯದರ್ಶಿ ಗುರುರಾಜದೇಸಾಯಿ ಪ್ರಾಸ್ಥಾವಿಕವಾಗಿ ಮಾತನಾಡಿದರೆ, ರಾಜ್ಯಾಧ್ಯಕ್ಷ ವಿ.ಅಂಬರೀಶ್ ಅಧ್ಯಕ್ಷತೆ ವಹಿಸಿದ್ದರು.ಗಂಗಾತಿಯ ಹಿರಿಯ ಸಾಹಿತಿ ನಿಜಲಿಂಗಪ್ಪ ಮೆಣಸಗಿ, ಕರ್ನಾಟಕ ಪ್ರಾಂತರೈತ ಸಂಘದ ಮುಖಂಡ ಜಿ.ನಾಗರಾಜ್ ಮುಖಂಡರಾದ ಬಸವರಾಜ ಪೂಜಾರ, ರೇಣುಕಾ ಕಹಾರ, ಶಬ್ಬೀರ್, ಚಿಕ್ಕರಾಜು, ಅಮರೇಶ ಕಡಗದ್, ಗ್ಯಾನೇಶ್ ಕಗದ್ ಸೇರಿದಂತೆ ಸಾವಿರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಎಸ್,ಎಫ್.ಐ ನ 14 ನೇ ರಾಜ್ಯ ಸಮ್ಮೇಳನದಲ್ಲಿ ನೂತನ ರಾಜ್ಯಾಧ್ಯಕ್ಷರಾಗಿ ವಿ.ಅಂಬರೀಶ್, ರಾಜ್ಯ ಕಾರ್ದದರ್ಶಿಯಾಗಿ ಗುರುರಾಜ್ ದೇಸಾಯಿ, 17 ಜನರ ಪದಾಧಿಕಾರಿ ಮತ್ತು 60 ಜನರ ರಾಜ್ಯ ಸಮಿತಿ ಪ್ರಜಾಸತ್ತಾತ್ಮಕವಾಗಿ ಆಯ್ಕೆಗೊಂಡಿದೆ.