ಆರೆಸ್ಸೆಸ್ ಒಂದು ಭಯೋತ್ಪಾದಕ ಸಂಘಟನೆ ಎಂದು ಪ್ರಕಟವಾಗಿದೆ-ಯೆಚುರಿ

ಸಂಪುಟ: 
11
ಸಂಚಿಕೆ: 
11
Sunday, 5 March 2017

ಇದು ಘಾತುಕ ಹೇಳಿಕೆ. ಒಂದು ರಾಜ್ಯದ ಮುಖ್ಯಮಂತ್ರಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದರೆ ಅವರಿಗೆ ಸರಕಾರದ ರಕ್ಷಣೆ, ಪೋಷಣೆ ಇದೆ ಎಂದು ಅರ್ಥ ಎಂದು ಈ ಹೇಳಿಕೆಯನ್ನು ಖಂಡಿಸುತ್ತ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಹೇಳಿದ್ದಾರೆ. ಆರೆಸ್ಸೆಸ್ ಒಂದು ಭಯೋತ್ಪಾದಕ ಸಂಘಟನೆ ಎಂಬ ಅದರ ನಿಜ ಬಣ್ಣವನ್ನು ಪ್ರಕಟಗೊಳಿಸಿದೆ, ಪ್ರಧಾನ ಮಂತ್ರಿಗಳು ಮತ್ತು ಅವರ ಸರಕಾರದ ಮೌನ ಇನ್ನೂ ಇರುತ್ತದೆಯೇ ಎಂದು ಅವರು ಪ್ರಶ್ನಿಸಿದ್ದಾರೆ.

ಆರೆಸ್ಸೆಸ್ ಹಲವು ತಲೆಗಳನ್ನು ಕಡಿದಿದೆ, ಆದರೆ ನಾನೇನೂ ಪ್ರಯಾಣಗಳನ್ನು ನಿಲ್ಲಿಸುವುದಿಲ್ಲ ಎಂದು ಪಿಣರಾಯಿ ವಿಜಯನ್ ಈ ಹೇಳಿಕೆಗೆ ಶಾಂತವಾಗಿ ಪ್ರತಿಕ್ರಿಯಿಸಿದ್ದಾರೆ.

ಗುಜರಾತಿನಲ್ಲಿ 2000 ಜನರನ್ನು ಹೂತು ಹಾಕಿದವರು?

ಪಿಣರಾಯಿ  ವಿಜಯನ್ ಅವರ ತಲೆಗೆ 1 ಕೋಟಿ ರೂ. ಕೊಡುವುದಾಗಿ ಸಾರಿದ ಆರೆಸ್ಸೆಸ್‍ನ ಉಜ್ಜಯಿನಿಯ ‘ಮಹಾನಗರ ಪ್ರಚಾರ ಪ್ರಮುಖ್’ ಕುಂದನ್ ಚಂದ್ರವತ್ ಮುಂದುವರೆದು ಗೋಧ್ರಾದಲ್ಲಿ ಸತ್ತ 56 ಮಂದಿಗೆ ಪ್ರತಿಯಾಗಿ 2000 ಮಂದಿಯನ್ನು ಮಸಣಗಳಲ್ಲಿ ಹೂತು ಹಾಕಿದ್ದೇವೆ ಎಂದು ಹೆಮ್ಮೆಯಿಂದ ಹೇಳಿಕೊಂಡು ಗುಜರಾತಿನಲ್ಲಿ ಈಗಿನ ನಮ್ಮ ಪ್ರಧಾನ ಮಂತ್ರಿಗಳು ಮುಖ್ಯಮಂತ್ರಿಗಳಾಗಿದ್ದಾಗ ನಡೆದ 2002 ರ ಹತ್ಯಾಕಾಂಡವನ್ನು ನಡೆಸಿದವರು ಆರೆಸ್ಸೆಸ್ ಎಂಬ ಸತ್ಯವನ್ನು ಬಹಿರಂಗ ಪಡಿಸಿದ್ದಾರೆ!