ಆರೆಸ್ಸೆಸ್‍ನ ಅಸಹ್ಯಕರ ಬೆದರಿಕೆ-ಸಿಪಿಐ(ಎಂ) ಪೊಲಿಟ್‍ಬ್ಯುರೊ ಖಂಡನೆ

ಸಂಪುಟ: 
11
ಸಂಚಿಕೆ: 
11
Sunday, 5 March 2017

ಆರೆಸ್ಸೆಸ್ ಮುಖಂಡರು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ಧ ಬೆದರಿಕೆಗಳನ್ನು ಹಾಕುತ್ತಿದ್ದಾರೆ. ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಒಬ್ಬ ಆರೆಸ್ಸೆಸ್ ಮುಖಂಡ ಪ್ರಜಾಸತ್ತಾತ್ಮಕವಾಗಿ ಚುನಾಯಿತರಾದ ಮುಖ್ಯಮಂತ್ರಿಯ ತಲೆತಂದು ಕೊಟ್ಟವರಿಗೆ 1 ಕೋಟಿ ರೂ.ಗಳ ಬಹುಮಾನ ಘೋಷಿಸಿದ್ದಾರೆ. ಇದನ್ನು ಸಿಪಿಐ(ಎಂ) ಪೊಲಿಟ್‍ಬ್ಯುರೊ ಬಲವಾಗಿ ಖಂಡಿಸಿದೆ.

ಈ ಮೂಲಕ ತಾನು ಹಿಂಸಾಚಾರದ ರಾಜಕೀಯದ ಮುಂಚೂಣಿಯಲ್ಲಿದ್ದೇನೆ ಎಂಬುದನ್ನು ಆರೆಸ್ಸೆಸ್ ಮತ್ತೊಮ್ಮೆ ದೃಢಪಡಿಸಿದೆ. ಕೇರಳದಲ್ಲಿ ಇದು ಇತ್ತೀಚಿನ ತಿಂಗಳುಗಳಲ್ಲಿ ಸ್ಪಷ್ಟವಾಗಿದೆ ಎಂದಿರುವ ಸಿಪಿಐ(ಎಂ) ಪೊಲಿಟ್‍ಬ್ಯುರೊ ರಾಜ್ಯ ಮತ್ತು ಕೇಂದ್ರ ಸರಕಾರಗಳು ಕಾನೂನಿನ ಪ್ರಕಾರ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ. ಈ ಸರಕಾರಗಳ ಮೌನ ಇದಕ್ಕೆ ನೀಡುವ ಅನುಮೋದನೆಯಾಗುತ್ತದೆ, ಇದು ಆರೆಸ್ಸೆಸ್ ಇಂತಹ ಅಸಹ್ಯ ಬೆದರಿಕೆಗಳನ್ನು ಹಾಕಲು ಕುಮ್ಮಕ್ಕು ನೀಡುತ್ತದೆ ಎಂದು ಅದು ಹೇಳಿದೆ.