ಲಾಲ್ ಸಲಾಂ - ಯುವ ರೆಡ್ ಬ್ರಿಗೇಡ್ !!

ಸಂಪುಟ: 
11
ಸಂಚಿಕೆ: 
11
Sunday, 5 March 2017

ಸೌಹಾರ್ದ ರ್ಯಾಲಿ ಎಂಬ ಈ ಅದ್ಭುತ ಘಟಿಸಲು ಹಲವು ಅಂಶಗಳು - ಪಿಣರಾಯಿಗೆ ಸಂಘ ಪರಿವಾರದ ಬೆದರಿಕೆ, ಸರಕಾರದ ಬಿಗಿ ಕ್ರಮ, ಕೋಮುವಾದಿ-ವಿರೋಧಿ ಪ್ರಗತಿಪರ ಶಕ್ತಿಗಳ ಐಕ್ಯತೆ, ಪಿಯುಸಿ ಪರೀಕ್ಷೆಯಿಂದಾಗಿ ಬಂದ್ ಕರೆ ಬಗ್ಗೆ ಆಕ್ರೋಶ - ಇತ್ಯಾದಿ ಸಹಕಾರಿಯಾದವು. ಆದರೆ ಇವೆಲ್ಲ ಸಕಾರಾತ್ಮಕ ಅಂಶಗಳನ್ನು ಬಳಸಿ, ಇನ್ನೆಷ್ಟೋ ನಕಾರಾತ್ಮಕ ಅಂಶಗಳನ್ನು ಮೆಟ್ಟಿ ನಿಂತ ಯುವ ರೆಡ್ ಬ್ರಿಗೆಡ್ ಇಲ್ಲದೆ ಸೌಹಾರ್ದ ರ್ಯಾಲಿ ಖಂಡಿತ ಯಶಸ್ವಿಯಾಗುತ್ತಿರಲಿಲ್ಲ.

ರ್ಯಾಲಿಗೆ ಕೆಲವೇ ದಿನ ಇರುವಾಗ ದಾಳಿಯ ಬೆದರಿಕೆ, ದಾಳಿಗಳ ನಡುವೆ ಮತ್ತೆ ಮತ್ತೆ (3-4 ಬಾರಿ) ಹರಿದ ಬ್ಯಾನರ್/ಫ್ಲೆಕ್ಸ್ ಗಳನ್ನು ಕಟ್ಟುವ, ಕರಿ ಮೆತ್ತಿದ ಪೋಸ್ಟರು ಗೋಡಬರಹಗಳನ್ನು ಮತ್ತೆ ಅಂಟಿಸುವ/ಬರೆಯುವ ಹಗಲು ರಾತ್ರಿಯೆನ್ನದೆ ಪ್ರಚಾರ, ಬೈಕ್ ರ್ಯಾಲಿ, ಪಾದಯಾತ್ರೆ ಕೈಗೊಳ್ಳುವ ಅತ್ಯಂತ ಉನ್ನತ ಮಟ್ಟದ ಬದ್ಧತೆಯ ವಿದ್ಯಾರ್ಥಿ-ಯುವ ಜನರ ರೆಡ್ ಬ್ರಿಗೇಡ್ ಕೊಂಡಾಡದಿರಲು ಸಾಧ್ಯವೇ ಇಲ್ಲ. ರ್ಯಾಲಿಯ ದಿನವೂ, ಬಹಿರಂಗ ಸಭೆ ನಡೆಯುವ ಮೈದಾನದ ಮತ್ತು ಮೆರವಣಿಗೆಯ ಭದ್ರತೆ ಬಗ್ಗೆ ಕಣ್ಣಿಡುವುದು, ಸೇರಿದಂತೆ ಮತ್ತಿತರ ನೂರಾರು ಕೆಲಸಗಳನ್ನು ಮಾಡಿದ್ದು ಈ ಯುವ ಬ್ರಿಗೇಡ್. ಸಾಮಾಜಿಕ ಮಾಧ್ಯಮದಲ್ಲೂ ಇತರ ಸಾಂಪ್ರದಾಯಿಕ ವಿಧಾನಗಳಲ್ಲೂ ಸೌಹಾರ್ದ ರ್ಯಾಲಿಗೆ ಪ್ರಚಾರ ಕೊಟ್ಟಿದ್ದರ ಸಿಂಹಪಾಲು ಸಹ ಈ ಬ್ರಿಗೇಡಿದ್ದೇ.

ಇಲ್ಲಿ ನೋಡಿ! ರ್ಯಾಲಿ ಮುಗಿದ ಮೇಲೆ ವೇದಿಕೆ ಹತ್ತಿ ವಿಜಯದ ಸಾರ್ಥಕತೆಯ ನಗೆ ಬೀರುತ್ತಿದೆ.

ಯುವ ರೆಡ್ ಬ್ರಿಗೇಡ್ ಗೊಂದು ಲಾಲ್ ಸಲಾಂ !!