Error message

  • Deprecated function: Methods with the same name as their class will not be constructors in a future version of PHP; views_display has a deprecated constructor in require_once() (line 3097 of /home/janashakthi/public_html/includes/bootstrap.inc).
  • Deprecated function: Methods with the same name as their class will not be constructors in a future version of PHP; views_many_to_one_helper has a deprecated constructor in require_once() (line 113 of /home/janashakthi/public_html/sites/all/modules/ctools/ctools.module).

ಸಾಮಾಜಿಕ ಮಾಧ್ಯಮ ಬಳಕೆಯಲ್ಲೊಂದು ನೆಗೆತ

ಸಂಪುಟ: 
11
ಸಂಚಿಕೆ: 
11
Sunday, 5 March 2017

ಪಕ್ಷದ ಮತ್ತು ಜನಶಕ್ತಿ ಪತ್ರಿಕೆಯ ಸಾಮಾಜಿಕ ಮಾಧ್ಯಮ ಚಟುವಟಿಕೆ ಕಳೆದ 1 ವರ್ಷದಿಂದ ನಡೆಯುತ್ತಿದ್ದು ಇತ್ತೀಚಿನ ತಿಂಗಳುಗಳಲ್ಲಿ ಹೆಚ್ಚಿನ ಪಕ್ಷದ ಪ್ರಜಾಸತ್ತಾತ್ಮಕ ಸಾಮೂಹಿಕ ಸಂಘಟನೆಗಳ ಚಳುವಳಿಗಳ ಪ್ರಚಾರಾಂದೋಲನದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಕಳೆದ ಕೆಲವು ತಿಂಗಳುಗಳಿಂದ ಬಳಕೆಯ ವೈವಿಧ್ಯತೆ, ಸೃಜನಾತ್ಮಕ ಪ್ರಚಾರ ಪರಿಕರಗಳ ತಯಾರಿ, ಉದ್ದೇಶಿತ ಜನವಿಭಾಗಗಳಿಗೆ ತಲುಪುವ ಪ್ರಮಾಣ, ಬೀರುವ ಪ್ರಭಾವ ಇವೆಲ್ಲದರಲ್ಲೂ ತೀವ್ರ ಪ್ರಗತಿ ಸಾಧಿಸಿದೆ. ಮಾಣಿಕ್ ಸರ್ಕಾರ್ ಅವರ ಕರ್ನಾಟಕ ಭೇಟಿ ಸಮಯದಲ್ಲಿ ಒಂದು ನೆಗೆತವನ್ನೂ ಕಂಡಿತ್ತು. ಪ್ರಮುಖ ಕಾರ್ಯಕ್ರಮಗಳ, ಭಾಷಣಗಳ ಲೈವ್ ಫೇಸ್ ಬುಕ್ ಪ್ರಸಾರದ ಮೂಲಕ ನೆಗೆತ ಸಾಧಿಸಿತ್ತು. ಕರಾವಳಿ ಕೋಮುವಾದದ ವಿರುದ್ಧ ಮತ್ತು ಸೌಹಾರ್ದತೆಗಾಗಿ ಹಲವು ವಾರಗಳ ಪ್ರಚಾರಾಂದೋಲನದಲ್ಲಿ ಸಾಮಾಜಿಕ ಮಾಧ್ಯಮ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಸೌಹಾರ್ದ ರ್ಯಾಲಿಯ ದಿನವಂತೂ ಹಿಂದಿನ ನೆಗೆತದ ಮೇಲೊಂದು ನೆಗೆತ ಸಾಧಿಸಿತು ಎಂದರೆ ತಪ್ಪಾಗಲಾರದು.

ಫೆ. 25 ರಂದು ಸಿಪಿಐ(ಎಂ) ಕರ್ನಾಟಕ ಫೇಸ್ ಬುಕ್ ಪುಟದಿಂದ ಮಾಡಿದ ಪಿಣರಾಯಿ ಭಾಷಣದ ಲೈವ್ ಪ್ರಸಾರದ ವಿಡಿಯೊವನ್ನು ಇದುವರೆಗೆ 1.1 ಲಕ್ಷ ಜನ ನೋಡಿದ್ದಾರೆ. 51 ಸಾವಿರ ಜನ  ಲೈಕ್+ಶೇರ್+ಕಮೆಂಟ್ ಮಾಡಿದ್ದಾರೆ. ಇವುಗಳಲ್ಲಿ 3200 ಶೇರ್ ಗಳು. ಇನ್ನೂ ಆ ದಿನದ ಮೆರವಣಿಗೆಯ ವಿಡಿಯೊವನ್ನು 3.6 ಲಕ್ಷ ಜನ ನೋಡಿದ್ದಾರೆ. 1.4 ಲಕ್ಷ ಜನ ಲೈಕ್+ಶೇರ್+ಕಮೆಂಟ್ ಮಾಡಿದ್ದಾರೆ. ಇವುಗಳಲ್ಲಿ 12 ಸಾವಿರ ಶೇರ್‍ಗಳು. ಈ ಪ್ರಚಾರಾಂದೋಲನದ ವಾರದಲ್ಲಿ ವಿವಿಧ ಪೋಸ್ಟರುಗಳು, ವಿಡಿಯೊಗಳು 17 ಲಕ್ಷ ಜನರನ್ನು ತಲುಪಿವೆ. ಸಾಮಾನ್ಯವಾಗಿ ಸರಾಸರಿ ವಾರಕ್ಕೆ 30 ಸಾವಿರ ಜನರನ್ನು ತಲುಪುತ್ತವೆ. ಮಾಣಿಕ ಸರ್ಕಾರ್ ಕರ್ನಾಟಕ ಬೇಟಿ ಸಮಯದಲ್ಲಿ 1.5 ಲಕ್ಷ ತಲುಪಿತ್ತು ಎಂದು ಹೋಲಿಸಿದರೆ ಈ ಬಾರಿಯ ``ನೆಗೆತದಲ್ಲಿ ನೆಗೆತ'' ಏನು ಎಂದು ತಿಳಿಯುತ್ತದೆ.  ಸಿಪಿಐ(ಎಂ) ಕರ್ನಾಟಕ ಫೇಸ್ ಬುಕ್ ಪುಟದ ಪೇಜ್ ಲೈಕ್ ಈ ಪ್ರಚಾರಾಂದೋಲನದ ಸುಮಾರು ಎರಡು ವಾರಗಳಲ್ಲಿ 15 ಸಾವಿರದಿಂದ 30 ಸಾವಿರಕ್ಕೆ ಇಮ್ಮಡಿಗೊಂಡಿದೆ.

ಈ ``ನೆಗೆತದಲ್ಲಿ ನೆಗೆತ'' ಸಾಧಿಸಲು ದುಡಿದವರು - ನವೀನ್ ಕುಮಾರ್ ನೇತೃತ್ವದಲ್ಲಿ ಪ್ರಶಾಂತ ಆಚಾರ್ಯ, ಮಿಥುನ್ ರಾಜ್ ಕುತ್ತಾರ್, ಚೇತನಾ ತೀರ್ಥಹಳ್ಳಿ ಮತ್ತು ಹಲವು ಯುವ ಬ್ರಿಗೇಡಿನ ಸದಸ್ಯರು, ಮತ್ತು ರಾಜ್ಯದ ದೇಶದ ಸಾಮಾಜಿಕ ಮಾಧ್ಯಮ ಜಾಲದ ಸದಸ್ಯರು. ಅವರಿಗೆ ಬೆಂಬಲವಾಗಿ ನಿಂತವರು ಮುನೀರ್, ಸಂತೋಷ್ ಬಜಾಲ್, ವಸಂತ್.

ಈ ಇಡೀ ಸಾಮಾಜಿಕ ಮಾಧ್ಯಮ ತಂಡಕ್ಕೊಂದು  ಲಾಲ್ ಸಲಾಂ !!

ಕೊನೆಯ ಶಾಟ್ !

ಆಸ್ಟ್ರೇಲಿಯ ವಿರುದ್ಧ ಮೊದಲ ಟೆಸ್ಟ್ ಸೋತ ಬಳಿಕ ಕ್ಯಾಪ್ಟನ್ ಪ್ರತಿಕ್ರಿಯೆ:
``ನಮಗಿಂತ ಹೀನಾಯವಾಗಿ ಮಂಗಳೂರಿನ ಸಂಘಿಗಳು ಸೋತಿದ್ದಾರೆ'' : ವಿರಾಟ್ ಕೊಹ್ಲಿ

ಅಪರಿಚಿತ ಪೋನ್ ನಂಬರ್ ನಿಂದ

*DYFI ದ.ಕ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಕುಮಾರ್ ಬಜಾಲ್ ಗೆ  *ಜೀವ ಬೆದರಿಕೆ*
ಪಾಂಡೇಶ್ವರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು