ಸೌಹಾರ್ದ ಕಹಳೆ

ಸಂಪುಟ: 
11
ಸಂಚಿಕೆ: 
11
Sunday, 5 March 2017

ಈ ಇಳಿವಯಸ್ಸಿನ ಕಾಮ್ರೇಡ್ ಹೆಸರು ವಾಸು ನಾಯ್ಕ.

ಕಮ್ಯುನಿಸ್ಟ್ ಚಳವಳಿಯ ಆರಂಭದ ದಿನಗಳಿಂದಲೇ ಕೆಂಬಾವುಟ ಹಿಡಿದವರು. ಹೆಂಚು ಕಾರ್ಮಿಕರ ಹೋರಾಟ, ಗೇಣಿದಾರರ ಸಮರಶೀಲ ಚಳವಳಿ, ಗೋಡಂಬಿ, ಸಾರಿಗೆ, ಬೀಡಿ, ಮೂರ್ತೆ(ಶೇಂದಿ) ದಾರರ ಹೋರಾಟಗಳಲ್ಲಿ ಭಾಗಿಯಾದವರು. ಆ ಎಲ್ಲಾ ಮೆರವಣಿಗೆಗಳು ಆರಂಭವಾಗುತ್ತಿದ್ದದ್ದೇ ಇವರು ಕೊಂಬು(ಕಹಳೆ) ಊದುವ ಮೂಲಕ. ಆ ಕಾಲದ ಎಲ್ಲಾ ನಿರ್ಣಾಯಕ ಹೋರಾಟಗಳಿಗೂ ಇವರು ಕಹಳೆ ಊದಿದ್ದಾರೆ. ಹೋರಾಟಗಳೆಲ್ಲ ಬಹುತೇಕ ಗೆದ್ದಿದೆ. ಭೂಮಿ, ಹಕ್ಕು ದೊರಕಿದೆ. ಎಲ್ಲಾ ಹೋರಾಟಗಳಿಗೂ ತನ್ನ ಕೊಂಬು ಸಹಿತ ಹಾಜರಿ ಹಾಕುವ ವಾಸು ನಾಯ್ಕ ಇತ್ತೀಚಿನ ವರ್ಷಗಳಲ್ಲಿ ನೇಪಥ್ಯಕ್ಕೆ ಸರಿದಿದ್ದರು.

ಈಗ ಮತ್ತೆ ಕಾಮ್ರೇಡ್ ವಾಸು ನಾಯ್ಕ ಅದೇ ಹಳೆಯ ಜೋಶ್ ನೊಂದಿಗೆ ಕೊಂಬು (ಕಹಳೆ) ಊದಿದ್ದಾರೆ. ಮೆರವಣಿಗೆ ಹೊರಟಿದೆ....