Error message

  • Deprecated function: Methods with the same name as their class will not be constructors in a future version of PHP; views_display has a deprecated constructor in require_once() (line 3097 of /home/janashakthi/public_html/includes/bootstrap.inc).
  • Deprecated function: Methods with the same name as their class will not be constructors in a future version of PHP; views_many_to_one_helper has a deprecated constructor in require_once() (line 113 of /home/janashakthi/public_html/sites/all/modules/ctools/ctools.module).

ಫೆಬ್ರವರಿ 14 ರಿಂದ ಪೌರ ಕಾರ್ಮಿಕರ ‘ಅಮರಣಾಂತ ಉಪವಾಸ ಸತ್ಯಾಗ್ರಹ’

ಸಂಪುಟ: 
11
ಸಂಚಿಕೆ: 
08
Sunday, 12 February 2017

ಹಾಸನ ನಗರಸಭೆಯ ಅಧ್ಯಕ್ಷರು, ಪೌರಾಯುಕ್ತರು ಹಾಗೂ ಗುತ್ತಿಗೆದಾರು ಹಾಸನ ನಗರಸಭೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಬಡ ಹಾಗೂ ದಲಿತ ಪೌರಕಾರ್ಮಿಕರ ಮೇಲಿನ ದೌರ್ಜನ್ಯವನ್ನು ವಿರೋಧಿಸಿ ಹಾಗೂ ಕೆಲಸ ನಿರಾಕರಿಸಲ್ಪಟ್ಟಿರುವ ಕಾರ್ಮಿಕರಿಗೆ ಬಾಕಿ ವೇತನ ಸಹಿತ ಕೆಲಸ ನೀಡುವಂತೆ ಮತ್ತು ಪೌರಕರ್ಮಿಕರ ಬೇಡಿಕೆಗಳ ಈಡೇರಿಕೆಗಾಗಿ ದಿನಾಂಕ: 14/02/2017 ರಿಂದ ಹಾಸನ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ದೌರ್ಜನ್ಯಕ್ಕೊಳಗಾದ ಕಾರ್ಮಿಕರು ‘ಅಮರಣಾಂತ ಉಪವಾಸ ಸತ್ಯಾಗ್ರಹ’ ನಡೆಸಲಿದ್ದಾರೆ.

ಹಾಸನ ನಗರಸಭೆಯ ಅ ಧ್ಯಕ್ಷರಾದ ಎಚ್.ಎಸ್. ಅನಿಲ್‍ಕುಮಾರ್ ರವರು ಸರ್ವಾಧಿಕಾರಿಯಂತೆ ಹಾಗೂ ದಲಿತ ವಿರೋಧಿಯಾಗಿ ವರ್ತಿಸುತ್ತಿದ್ದಾರೆ. ನಗರಸಭೆಯ ಪೌರಾಯುಕ್ತರಾದ ನಾಗಭೂಷಣ್‍ರವರು ಅ ಧ್ಯಕ್ಷರ ಕೈಗೊಂಬೆಯಾಗಿದ್ದಾರೆ. ಅಧ್ಯಕ್ಷರು ನಗರಸಭೆಯ ಎಲ್ಲಾ ಕೆಲಸಗಳನ್ನು ತಾವೊಬ್ಬರೇ ಮಾಡುತ್ತಿರುವಂತೆ ಭ್ರಮೆಯಲ್ಲಿದ್ದಾರೆ. ಶಾಸಕರಾದ ಎಚ್.ಎಸ್. ಪ್ರಕಾಶ್‍ರವರು ತಮ್ಮ ಸಹೋದರನೇ ಅಧ್ಯಕ್ಷರಾಗಿರುವುದರಿಂದ ಎಲ್ಲದಕ್ಕೂ ಬೆಂಬಲವಾಗಿ ನಿಂತಿದ್ದಾರೆ.

ಕಾರ್ಮಿಕರ ಸಂಘ ಕಟ್ಟದಂತೆ, ಸಂಘದ ಚಟುವಟಿಕೆಗಳಿಗೆ ಭಾಗವಹಿಸದಂತೆ ನಿರ್ಬಂದ ಹೇರಲಾಗುತ್ತಿದೆ. ಕೆಲಸದ ಸ್ಥಳಗಳಲ್ಲಿ ಕಾರ್ಮಿಕರನ್ನು ಬೇಕಾಬಿಟ್ಟಿ ದುಡಿಸಿಕೊಳ್ಳಲಾಗುತ್ತಿದೆ. ಕಾರ್ಮಿಕರಿಗೆ ಕನಿಷ್ಟ ಸೌಲಭ್ಯಗಳನ್ನೂ ಒದಗಿಸುತ್ತಿಲ್ಲ. ಕಾರ್ಮಿಕರನ್ನು ಪ್ರತಿದಿನ ಏಕಾಏಕಿಯಾಗಿ ಕೆಲಸದಿಂದ ತೆಗೆಯುವುದು ಬೇಕಾದವರನ್ನು ಕೆಲಸಕ್ಕೆ ಸೇರಿಕೊಳ್ಳುವುದು ಮಾಡಲಾಗುತ್ತಿದೆ. ಕಾರ್ಮಿಕರು ಸಂಘ ಕಟ್ಟಿದರೆ ಅವರನ್ನು ಕೆಲಸದಿಂದ ತೆಗೆದು ಹಾಕುವ ಹಾಗೂ ಅವರನ್ನು ಖಾಯಂ ಆಗದಂತೆ ತಡೆಯುವ ಬೆದರಿಕೆ ಹಾಕಲಾಗುತ್ತಿದೆ. ಅತ್ಯಂತ ತಳ ಸಮುದಾಯದ ದಲಿತರಲ್ಲೇ ದಲಿತರಾಗಿರುವ ಇಂತಹ ಕಾರ್ಮಿಕರ ಮೇಲೆ ದಬ್ಬಾಳಿಕೆ ನಡೆಸಲಾಗುತ್ತಿದೆ. ನಗರಸಭೆಯ ಖಾಯಂ ಕಾರ್ಮಿಕರ ಮೇಲೂ ದಬ್ಬಾಳಿಕೆ ನಡೆಯುತ್ತಿದೆ.

ದಲಿತ ವಿಭಾಗಕ್ಕೆ ಸೇರಿದ ಪೌರಕಾರ್ಮಿಕರು ತಮ್ಮ ಹೋರಾಟದ ಮುಖಾಂತರ ತಮ್ಮ ವೇತನವನ್ನು 14 ಸಾವಿರ ರೂಪಾಯಿಯನ್ನು ಪಡೆದುಕೊಳ್ಳುತ್ತಿರುವುದು ನಗರಸಭೆಯ ಅಧ್ಯಕ್ಷರು ಹಾಗೂ ಗುತ್ತಿಗೆದಾರರ ಅಸಮಾಧಾನಕ್ಕೆ ಕಾರಣವಾಗಿದೆ. ಹಾಗೂ ವಸತಿ ರಹಿತ ಗುತ್ತಿಗೆ ಪೌರಕಾರ್ಮಿಕರು ಇತರೆ ವಸತಿ ರಹಿತರೊಂದಿಗೆ ಸೇರಿ ತಮಗೆ ಮನೆ, ನಿವೇಶ ನೀಡಬೇಕೆಂದು ಹೋರಾಟ ನಡೆಸಿದ್ದನ್ನು ಅ ಧ್ಯಕ್ಷರು ವಯಕ್ತಿಕವಾಗಿ ತೆಗೆದುಕೊಂಡಿದ್ದಾರೆ. ಕಷ್ಟಪಟ್ಟು ತಮ್ಮ ಆರೋಗ್ಯವನ್ನೂ ಲೆಕ್ಕಿಸದೆ ದುಡಿಮೆ ಮಾಡುವ ದಲಿತ ವಿಭಾಗದ ಈ ಕಾರ್ಮಿಕರು ಒಳ್ಳೆಯ ಬಟ್ಟೆ ಹಾಕುವುದನ್ನೂ ಸಹಿಸಲಾರದ ಸ್ಥಿತಿ ನಗರಸಭೆಯಲ್ಲಿದೆ. ಕಾರ್ಮಿಕರ ನಿರಂತರವಾದ ಹೋರಾಟದ ಫಲವಾಗಿ ಸರ್ಕಾರ ಗುತ್ತಿಗೆ ಪೌರ ಕಾರ್ಮಿಕರಿಗೆ 14 ಸಾವಿರ ರೂಪಾಯಿ ಕನಿಷ್ಟ ವೇತನ ನಿಗದಿಗೊಳಿಸಿ ಆದೇಶ ಹೊರಡಿಸಿದೆ. ಆದರೆ, ಹಾಸನದ ನಗರಸಭೆಯ ಅಧ್ಯಕ್ಷರು ಇದನ್ನು ನಾನು ಮಾಡಿಸಿಕೊಂಡು ಬಂದಿರುವುದು ಹಾಗಾಗಿ ನೀವು ನನ್ನ ಮಾತು ಕೇಳಬೇಕು ಎನ್ನುತ್ತಾರೆ.

ಹಾಸನ ನಗರಸಭೆಯಲ್ಲಿ ಕಳೆದ ಹತ್ತಾರು ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ 13 ಕಾರ್ಮಿಕರನ್ನು ನಗರಸಭೆ ಮತ್ತು ಗುತ್ತಿಗೆದಾರರು ಕಾರ್ಮಿಕರಿಗೆ ಯಾವುದೇ ತಿಳುವಳಿಕೆ ನೀಡದೆ ಹಾಗೂ ಅವರಿಂದ ಯಾವುದೇ ಸ್ಪಷ್ಟೀಕರಣವನ್ನೂ ಪಡೆಯದೆ ಏಕಾಏಕಿಯಾಗಿ ನಗರಸಭೆಯ ಅಧ್ಯಕ್ಷರ ಸೂಚನೆಯಂತೆ ನವೆಂಬರ್ 6ರಿಂದ ಅವರಿಗೆ ಅಕ್ರಮವಾಗಿ ಕೆಲಸ ನಿರಾಕರಿಸಿ, ಹಾಜರಾತಿ ಹಾಗೂ ವೇತನ ನೀಡದೆ ಬಡ ಹಾಗೂ ದಲಿತ ಕಾರ್ಮಿಕರಿಗೆ ಅನ್ಯಾಯ ಮಾಡಲಾಗಿದೆ.

ಕಾರ್ಮಿಕರಿಗೆ ಕೆಲಸ ಸ್ಥಗಿತಗೊಳಿಸಿರುವ ಬಗ್ಗೆ ಅಥವಾ ಕೆಲಸದಿಂದ ವಜಾ ಮಾಡಿರುವ ಬಗ್ಗೆಯಾಗಲೀ ನಗರಸಭೆಯ ಆಯುಕ್ತರು ಅಥವಾ ಗುತ್ತಿಗೆದಾರರಿಂದ ಇದುವರೆಗೂ ಯಾವುದೇ ರೀತಿಯಲ್ಲಿಯೂ ಲಿಖಿತ ಸೂಚನೆ ಬಂದಿರುವುದಿಲ್ಲ. ಈ ಬಗ್ಗೆ ಹಲವು ಬಾರಿ ನಗರಸಭೆ ಆಯುಕ್ತರನ್ನು ಮನವಿ ಮಾಡಿಕೊಂಡಾಗ ನಾವು ಯಾವುದೇ ಕಾರ್ಮಿಕರಿಗೂ ಕೆಲಸ ಸ್ಥಗಿತಗೊಳಿಸಿರುವುದಿಲ್ಲ ಅವರು ಕೆಲಸ ಮಾಡಲಿ ಅವರಿಗೆ ಹಾಜರಾತಿ ಹಾಕಿಸಿ ವೇತನ ಕೊಡಿಸಲಾಗುವುದು ಎಂದು ಮೌಖಿಕವಾಗಿ ತಿಳಿಸಿರುತ್ತಾರೆ. ಆದರೆ ಗುತ್ತಿಗೆದಾರರು ನಗರಸಭೆಯ ಅಧ್ಯಕ್ಷರ ಸೂಚನೆಯ ಆಧಾರದಲ್ಲಿಯೇ ಸದರಿ ಕಾರ್ಮಿಕರನ್ನು ಕೆಲಸದಿಂದ ಕೈಬಿಡಲಾಗಿದೆ ಎಂದು ತಿಳಿಸಿರುತ್ತಾರೆ. ಆದರೆ ಈ ಸಂಬಂಧ ಇದುವರೆಗೂ ಆಯುಕ್ತರು ಅಥವಾ ಗುತ್ತಿಗೆದಾರರಿಂದ ಕಾರ್ಮಿಕರಿಗೆ ಯಾವುದೇ ರೀತಿಯಲ್ಲಿಯೂ ಲಿಖಿತವಾಗಿ ಮಾಹಿತಿ ಅಥವಾ ಸೂಚನೆ ಇದುವರೆಗೂ ಬಂದಿರುವುದಿಲ್ಲ. ಕಾರ್ಮಿಕರು ಈಗಲೂ ಪ್ರತೀ ದಿನ ಕೆಲಸಕ್ಕೆ ಹಾಜರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ ಸದರಿ ಕಾರ್ಮಿಕರಿಗೆ ಹಾಜರಾತಿ ಹಾಗೂ ವೇತನ ನೀಡುತ್ತಿಲ್ಲ.

ಪೌರ ಕಾರ್ಮಿಕರಿಗೆ ಸರ್ಕಾರದ ಅಧಿಸೂಚನೆಯಂತೆ ಕನಿಷ್ಟ ವೇತನ, 7 ತಿಂಗಳ ಬಾಕಿ ವೇತನ ಹಾಗೂ ಗುತ್ತಿಗೆ ಕಾರ್ಮಿಕ ಕಾಯ್ದೆಯನ್ವಯ ಸೇವಾ ಸೌಲಭ್ಯಗಳನ್ನು ನೀಡಬೇಕೆಂದು ಹಾಗೂ ಕಾರ್ಮಿಕರಿಗೆ ಇಎಸ್‍ಐ ಮತ್ತು ಇಪಿಎಫ್(ಭವಿಷ್ಯನಿಧಿ) ಸೌಲಭ್ಯ ನೀಡುವಲ್ಲಿ ಅಕ್ರಮ ನಡೆದಿದ್ದು ನಷ್ಟಕ್ಕೊಳಗಾದ ಕಾರ್ಮಿಕರಿಗೆ ಪರಿಹಾರ ನೀಡುವಂತೆ ಹಾಗೂ ತಪ್ಪಿತಸ್ಥ ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕಾರ್ಮಿಕರು ಕಾನೂನುಬದ್ಧವಾಗಿಯೇ ನವೆಂಬರ್ 2ರಿಂದ 5ರವರೆಗ ಮುಷ್ಕರ ನಡೆಸಿದ್ದರು. ನಗರಸಭೆಯವರು ಕಾರ್ಮಿಕರಿಗೆ ಬಾಕಿ ಸಹಿತ ವೇತನ ಪಾವತಿಸಿದ ನಂತರ ಕಾರ್ಮಿಕರು ಮುಷ್ಕರ ಹಿಂಪಡೆದು ನವೆಂಬರ್ 6 ರಿಂದ ಕೆಲಸಕ್ಕೆ ಹಾಜರಾದರು.

ಶಾಸನಬದ್ಧವಾದ ಬೇಡಿಕೆಗಳ ಈಡೇರಿಕೆಗಾಗಿ ಕಾರ್ಮಿಕರು ಮುಷ್ಕರ ನಡೆಸಿ ವೇತನ ಪಡೆದುಕೊಂಡದ್ದುನ್ನು ಮತ್ತು ಇಎಸ್‍ಐ ಮತ್ತು ಭವಿಷ್ಯನಿಧಿಯಲ್ಲಿ ಆಗಿರುವ ಅನ್ಯಾಯ ಮತ್ತು ಅಕ್ರಮದ ಬಗ್ಗೆ ಹಾಗೂ ನಗರಸಭೆಯಲ್ಲಿ ಗುತ್ತಿಗೆ ಕಾರ್ಮಿಕ ಕಾಯ್ದೆ ಹಾಗೂ ಇತರೆ ಕಾರ್ಮಿಕ ಕಾನೂನುಗಳು ಉಲ್ಲಂಘನೆಯಾಗಿರುವುದರ ವಿರುದ್ಧ ಪ್ರಜಾಸತ್ತಾತ್ಮಕವಾಗಿಯೇ ನಡೆಸಿದ ಕಾರ್ಮಿಕರ ಮುಷ್ಕರವನ್ನು ವಯಕ್ತಿಕವಾಗಿ ಪರಿಗಣಿಸಿದ ಹಾಸನ ನಗರಸಭೆಯ  ಅಧ್ಯಕ್ಷರಾದ ಎಚ್.ಎಸ್. ಅನಿಲ್‍ಕುಮಾರ್‍ರವರು ಕಾರ್ಮಿಕರ ಕಾನೂನುಬದ್ಧ ಮುಷ್ಕರಕ್ಕೆ ಮುಂದಾಳಾಗಿ ನಿಂತಿದ್ದ ಕಾರ್ಮಿಕರನ್ನು ಗುರಿಯಾಗಿಸಿ ಅವರ ಮೇಲಿನ ಸೇಡಿನ ಕ್ರಮದ ಭಾಗವಾಗಿ ಅವರನ್ನು ಕೆಲಸದಿಂದ ಅಕ್ರಮವಾಗಿ ವಜಾ ಮಾಡಿರುತ್ತಾರೆ. ಯಾವುದೇ ಕಾರ್ಮಿಕರು ತಮ್ಮ ಕಾನೂನಾತ್ಮಕವಾದ ಬೇಡಿಕೆಗಳಿಗಾಗಿ ಕಾನೂನಾತ್ಮಕವಾಗಿ ಮುಷ್ಕರಕ್ಕಿಳಿಯುವುದನ್ನು ವಯಕ್ತಿಕವಾಗಿ ತೆಗೆದುಕೊಂಡಿರುವ ನಗರಸಭೆಯ ಅಧ್ಯಕ್ಷರು ಕಾರ್ಮಿಕರ ಮೇಲೆ ವಯಕ್ತಿಕವಾಗಿ ಸೇಡು ತೀರಿಸಿಕೊಳ್ಳುವುದರ ಮುಖಾಂತರ ಕಾರ್ಮಿಕರ ಹಕ್ಕುಗಳನ್ನು ಉಲ್ಲಂಘಿಸಿರುವುದಲ್ಲದೆ ಬಡ ಹಾಗೂ ಅತ್ಯಂತ ಕೆಳಸ್ಥರದ ದಲಿತ ಕಾರ್ಮಿಕರ ಮೇಲೆ ದೌರ್ಜನ್ಯ ಎಸಗಿದ್ದಾರೆ.

ಅನ್ಯಾಕ್ಕೊಳಗಾದ ಕಾರ್ಮಿಕರಿಗೆ ಕೆಲಸ ನೀಡುವಂತೆ ಬಹುತೇಕ ಎಲ್ಲಾ ನಗರಸಭಾ ಸದಸ್ಯರು ಅಧ್ಯಕ್ಷರಿಗೆ ಹಾಗೂ ಪೌರಾಯುಕ್ತರಿಗೆ ಆಗ್ರಹಪಡಿಸಿರುತ್ತಾರೆ. ರಾಜ್ಯ ಸ¥sóÁಯಿ ಕರ್ಮಚಾರಿ ಆಯೋಗದ ಅಧ್ಯಕ್ಷರು, ಜಿಲ್ಲಾಧಿಕಾರಿಗಳು, ಕಾರ್ಮಿಕ ಇಲಾಖೆ, ರಾಜ್ಯ ಪೌರಾಡಳಿತ ನಿರ್ದೇಶನಾಲಯ ಕೆಲಸ ನಿರಾಕರಿಸಲ್ಪಟ್ಟಿರುವ ಕಾರ್ಮಿಕರಿಗೆ ಕೆಲಸ ನೀಡಬೇಕೆಂದು ಸೂಚಿಸಿದ್ದರೂ ಪೌರಾರಾಯುಕ್ತರು ಅದನ್ನು ಜಾರಿ ಮಾಡುತ್ತಿಲ್ಲ. ಆದರೆ, ಈ ಹಿಂದೆ ನಗರಸಭೆಯಲ್ಲಿ ಅನಧಿಕೃತವಾಗಿ ನಗರ ಸ್ವಚ್ಛತೆಯ ಗುತ್ತಿಗೆ ನಿರ್ವಹಿಸಿ ಪೌರಕಾಮಿಕರಿಗೆ ಹಲವು ತಿಂಗಳ ವೇತನವನ್ನು ಬಾಕಿ ಉಳಿಸಿಕೊಂಡು ಇಎಸ್‍ಐ ಹಾಗೂ ಭವಿಷ್ಯನಿಧಿ ಪಾವತಿಯಲ್ಲಿ ಮೋಸ ಮಾಡಿದ್ದ ಕೆಲವು ನಗರಸಭಾ ಸದಸ್ಯರ ಮನೆ ಮುಂದೆ ನ್ಯಾಯ ಕೇಳಿ ಪೌರಕಾರ್ಮಿಕರು ಧರಣಿ ನಡೆಸಿದ್ದ ಕಾರಣವನ್ನು ಮುಂದಿಟ್ಟುಕೊಂಡು ಅಧ್ಯಕ್ಷರ ಮುಖಾಂತರ ಸೇಡು ತೀರಿಸಿಕೊಳ್ಳಲು ಅಧ್ಯಕ್ಷರೊಂದಿಗೆ ಸೇರಿ ದಲಿತ ಕಾರ್ಮಿಕರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ. ಕಾರ್ಮಿಕರು ಯಾವ ತಪ್ಪು ಮಾಡದಿದ್ದರೂ ಅವರನ್ನು ನಗರಸಭೆಗೆ ಕರೆಸಿ ದಿನವಿಡೀ ನಿಲ್ಲಿಸಿ ಅಮಾನವೀಯವಾಗಿ ನಡೆಸಿಕೊಂಡು ಅವಮಾನಿಸಿ ಕಳುಹಿಸಿದ್ದಾರೆ.

ಕಾರ್ಮಿಕರು ಮತ್ತು ಕಾರ್ಮಿಕ ಸಂಘಗಳ ಸಂಘಟಿತ ಹೋರಾಟದಿಂದಾಗಿ ಹಾಗೂ ನ್ಯಾಯಾಲಯದ ಆದೇಶದಂತೆ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಪೌರ ಕಾರ್ಮಿಕರನ್ನು ಖಾಯಂ ಮಾಡಲು ಉದ್ದೇಶಿಸಿರುವ ಮಾನ್ಯ ಕರ್ನಾಟಕ ಸರ್ಕಾರ ಪ್ರಕ್ರಿಯೆ ಆರಂಭಿಸಿರುವ ಸಂದರ್ಭದಲ್ಲಿ ಹತ್ತು ಹದಿನೈದು ವರ್ಷಗಳಿಂದ ಹಾಸನ ನಗರಸಭೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡಿರುವ ಈ ಬಡ ಹಾಗೂ ದಲಿತ ಕಾರ್ಮಿಕರ ಕೆಲಸ ಖಾಯಂ ಆಗಬಾರದು ಎನ್ನುವ ದುರುದ್ದೇಶದಿಂದಲೇ ಈ ಕಾರ್ಮಿಕರನ್ನು ಕೆಲಸದಿಂದ ಅಕ್ರಮವಾಗಿ ಕೈಬಿಟ್ಟು ಅವರಿಗೆ ಅನ್ಯಾಯ ಮಾಡಲಾಗುತ್ತಿದೆ.

ಧರ್ಮೇಶ್