Error message

 • Deprecated function: Methods with the same name as their class will not be constructors in a future version of PHP; views_display has a deprecated constructor in require_once() (line 3097 of /home/janashakthi/public_html/includes/bootstrap.inc).
 • Deprecated function: Methods with the same name as their class will not be constructors in a future version of PHP; views_many_to_one_helper has a deprecated constructor in require_once() (line 113 of /home/janashakthi/public_html/sites/all/modules/ctools/ctools.module).

ಫೆಬ್ರುವರಿ 17: ಬರಗಾಲ ಪರಿಹಾರಕ್ಕಾಗಿ ರಾಜ್ಯದಾದ್ಯಂತ ಹೆದ್ದಾರಿ ತಡೆ ಚಳುವಳಿ

ಸಂಪುಟ: 
11
ಸಂಚಿಕೆ: 
8
Sunday, 12 February 2017

ಕರ್ನಾಟಕ ರಾಜ್ಯ ಸತತ ಕಳೆದ ನಾಲ್ಕೈದು ವರ್ಷಗಳಿಂದ ಸತತ ಮಳೆಯ ಕೊರತೆಯಿಂದಾಗಿ ನಿರಂತರ ಬರಗಾಲವನ್ನು ಅನುಭವಿಸುತ್ತಿದೆ. ಈ ವರ್ಷ ಒಂದೆಡೆ ಮಳೆಯ ಕೊರತೆ ಮತ್ತು ಇನ್ನೊಂದೆಡೆ ವ್ಯಾಪಕ ಮಳೆ (ಅತಿವೃಷ್ಠಿ)ಯಿಂದಾಗಿ ಉಂಟಾದ ಬರಗಾಲವನ್ನು ಕಳೆದ 30 ವರ್ಷಗಳಲ್ಲಿ ಕಾಣದ ಬರಗಾಲವೆಂದು ಬಣ್ಣಿಸಿ ಅದರ ತೀವ್ರತೆಯನ್ನು ಹೇಳಲಾಗಿದೆ.

ರಾಜ್ಯವು ಸತತ ಬರಗಾಲವನ್ನನುಭವಿಸಿದರೂ, ಕೇಂದ್ರ ಹಾಗೂ ರಾಜ್ಯ ಸರಕಾರಗಳು ಬರಪರಿಹಾರವನ್ನು ಗಂಭೀರವಾಗಿ ತಗೆದುಕೊಂಡಿಲ್ಲ. ಈಗಲೂ ಗಂಭೀರವಾಗಿ ವರ್ತಿಸುತ್ತಿಲ್ಲ. ಬದಲಿಗೆ ಪರಸ್ಪರರು ಆರೋಪ ಪ್ರತ್ಯಾರೋಪಗಳಲ್ಲಿ ಮೇಲೆ ತೊಡಗಿದ್ದಾರೆ. ಗ್ರಾಮೀಣ ಬಡವರು ಮತ್ತು ರೈತರ ಇದ್ದ ಬದ್ದ ಸಣ್ಣ ಪುಟ್ಟ ಆಸ್ತಿಗಳು, ಒಡವೆಗಳನ್ನು, ಭೂಮಾಲಕರ ಹಾಗೂ ಗ್ರಾಮೀಣ ಶ್ರೀಮಂತರ ಪಾಲಾಗಲು ಬಿಡುತ್ತಿದ್ದಾರೆ. ಬ್ಯಾಂಕುಗಳು ಖಾಸಗೀ ಸಂಸ್ಥೆಗಳ ಸಾಲ ವಸೂಲಿಯ ದಬ್ಭಾಳಿಕೆಯನ್ನು ನಡೆಸಲು ಬಿಡಲಾಗಿದೆ. ಪರಿಣಾಮವಾಗಿ ದಲಿತರು, ಮಹಿಳೆಯರ ಮೇಲೆ ದೌರ್ಜನ್ಯಗಳು ಹೆಚ್ಚುತ್ತಿವೆ.

ಆದ್ದರಿಂದ, ಕೇಂದ್ರ ಹಾಗೂ ರಾಜ್ಯ ಸರಕಾರಗಳ ಉದಾಸೀನತೆ ಮತ್ತು ನಿರ್ಲಕ್ಷ್ಯವನ್ನು ಖಂಡಿಸಿ, ಬರಪರಿಹಾರದ ಹಕ್ಕೊತ್ತಾಯಗಳಿಗಾಗಿ, ರೈತರ-ಕೂಲಿಕಾರರ-ಸ್ತ್ರೀ ಶಕ್ತಿ ಸಂಘಗಳ ಎಲ್ಲಾ ರೀತಿಯ ಸಾಲ ಮನ್ನಾಕ್ಕಾಗಿ, ರಾಜ್ಯದಾದ್ಯಂತ ಎಲ್ಲೆಡೆ ಹೆದ್ದಾರಿ ತಡೆ ಚಳುವಳಿಯನ್ನು ಸಂಘಟಿಸಲು ಕರ್ನಾಟಕ ಪ್ರಾಂತ್ಯ ರೈತ ಸಂಘ, ಇತರ ಸಾಮೂಹಿಕ ಸಂಘಟನೆಗಳ ಜತೆ ಸೇರಿ ಕರೆ ಕೊಟ್ಟಿದೆ. ಆ ಮೂಲಕ ಮೂಲಕ ಕೇಂದ್ರ ಹಾಗೂ ರಾಜ್ಯ ಸರಕಾರಗಳ ವಿರುಧ್ಧ ತೀವ್ರ ರೀತಿಯಲ್ಲಿ ಪ್ರತಿಭಟನೆ ನಡೆಸಲು ಕರೆ ನೀಡಿವೆ. ಎಲ್ಲಾ ರೈತರು, ಕೂಲಿಕಾರರು ಮತ್ತು ಕಸುಬುದಾರರು, ಕಾರ್ಮಿಕರು, ನಾಗರೀಕರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಲು ವಿನಂತಿಸಿವೆ.

ಬರ ಪರಿಹಾರದ ಹಕ್ಕೊತ್ತಾಯಗಳು :

 1. ರೈತರ/ ಕೂಲಿಕಾರರ ಮತ್ತು ಕಸುಬುದಾರರ ಎಲ್ಲಾ ರೀತಿಯ ಸಹಕಾರ ಸಂಘ/ಬ್ಯಾಂಕುಗಳ ಮತ್ತು ಖಾಸಗಿಯಾದ ಎಲ್ಲಾ ಸಾಲವನ್ನು ತಕ್ಷಣವೇ ಮನ್ನಾ ಮಾಡಬೇಕು. ಎಲ್ಲಾ, ಸ್ತ್ರೀಶಕ್ತಿ ಹಾಗೂ ಸ್ವ ಸಹಾಯ ಸಂಘಗಳ ಸಾಲವನ್ನು ಮನ್ನಾ ಮಾಡಬೇಕು. ಪರಿಶಿಷ್ಠ ಜಾತಿ ಹಾಗೂ ಪರಿಶಿಷ್ಠ ಪಂಗಡ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ಇಲಾಖೆಗಳ ಮೂಲಕ ಹಾಗೂ ದೇವದಾಸಿ ಪುನರ್‍ವಸತಿ ಹಾಗೂ ಮಹಿಳಾ ಅಭಿವೃದ್ದಿ ನಿಗಮದ ಮೂಲಕ ನೀಡಲಾದ ಎಲ್ಲಾ ಸಾಲಗಳನ್ನು ಮನ್ನಾ ಮಾಡಬೇಕು. ಸಾರ್ವಜನಿಕ ಹಾಗೂ ಖಾಸಗೀ ಸಾಲ ನೀಡುವ ಸಂಸ್ಥೆಗಳು ಜನತೆಯ ಮೇಲೆ ಸಾಲ ವಸೂಲಿಗೆ ಒತ್ತಾಯಿಸುವುದನ್ನು ನಿಷೇಧಿಸಬೇಕು. ಅದೇ ರೀತಿ, ಮುಂದಿನ ಸಾಲಿಗೆ ಈ ಎಲ್ಲರಿಗೂ ಅಗತ್ಯವಾದಷ್ಠು ಸಾಲವನ್ನು ಒದಗಿಸಲು ಕ್ರಮವಹಿಸಬೇಕು.  
   
 2. ತಕ್ಷಣವೇ ಅಗತ್ಯ ಬೆಳೆ ವಿಮೆಯನ್ನು ನೀಡಲು ಕ್ರಮವಹಿಸಬೇಕು ಮತ್ತು ಬೆಳೆ ಪರಿಹಾರವಾಗಿ ಪ್ರತಿ ಎಕರೆಗೆ ಕನಿಷ್ಠ 50 ಸಾವಿರ ರೂಗಳ ಪರಿಹಾರವನ್ನು ಗೇಣಿದಾರರು ಸೇರಿದಂತೆ ಎಲ್ಲಾ ರೈತರಿಗೂ ವಿತರಿಸಬೇಕು. ಕೃಷಿಕೂಲಿಕಾರರಿಗೆ ಹಾಗೂ ಕಸುಬುದಾರರಿಗೆ ಉದ್ಯೋಗ ಪರಿಹಾರವಾಗಿ ತಲಾ ಕುಟುಂಬಕ್ಕೆ ಕನಿಷ್ಟ 25,000 ರೂಗಳನ್ನು ನೀಡಬೇಕು.
   
 3. ಉದ್ಯೋಗ ಖಾತ್ರಿ ಕೆಲಸವನ್ನು 200 ದಿನಗಳಿಗೆ ವಿಸ್ತರಿಸಬೇಕು. ಪಟ್ಟಣ/ ನಗರ ಪ್ರದೇಶಗಳಿಗೂ ವಿಸ್ತರಿಸಬೇಕು. ಕೂಲಿಯನ್ನು 600 ರೂ. ಗಳಿಗೆ ಹೆಚ್ಚಿಸಬೇಕು.
   
 4. ಎಲ್ಲಾ ಬಡವರಿಗೆ ಉಚಿತವಾಗಿ ಅಗತ್ಯವಾದ ಎಲ್ಲಾ ಪಡಿತರವಿರುವ ರೇಷನ್ ಸರಬರಾಜು ಮಾಡಬೇಕು. ನಗದು ವರ್ಗಾವಣೆ ಅಥವಾ ಕೂಪನ್ ಪದ್ದತಿಯನ್ನು ಕೈಬಿಡಬೇಕು. ಆ ಧಾರ್ ಕಾರ್ಡ ಕಡ್ಡಾಯವಾಗಿ ಪಡೆಯುವ ಪಧ್ಧತಿಯನ್ನು ಕೈಬಿಡಬೇಕು. ವಿಧ್ಯಾರ್ಥಿ/ಮಕ್ಕÀಳಿಗೆ ಶಾಲೆ/ಅಂಗನವಾಡಿಗಳಲ್ಲಿ ರಾತ್ರಿ ಊಟಕ್ಕೆ ಕ್ರಮವಹಿಸಬೇಕು.  
   
 5. ಪ್ರತಿ ಗ್ರಾಮ ಫಂಚಾಯ್ತಿಯಲ್ಲಿ ಮೇವಿನ ಬ್ಯಾಂಕ್ ತೆರೆಯಬೇಕು.
   
 6. ಗ್ರಾಮ, ಪಟ್ಟಣ ಹಾಗೂ ನಗರಗಳ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು.
   
 7. ಮುಂದಿನ ಬೆಳೆಗೆ ಅಗತ್ಯವಾದ ಬೀಜ, ಗೊಬ್ಬರ, ಕ್ರಿಮಿನಾಶಕಗಳನ್ನು ಉಚಿತವಾಗಿ ಒದಗಿಸಬೇಕು.
   
 8. ಮಹದಾಯಿ ನದಿ ನೀರಿನ ವಿವಾಧವನ್ನು ತ್ವರಿತವಾಗಿ ಪರಿಹರಿಸಲು ಅಗತ್ಯ ಕ್ರಮಕೈಗೊಳ್ಳಬೇಕು. ಬಯಲು ಸೀಮೆ ಜಿಲ್ಲೆಗಳ ಬರವನ್ನು ಪರಿಹರಿಸಲು ಡಾ.ಪರಮಶಿವಯ್ಯನವರ ವರದಿಯಂತೆ ತ್ವರಿತ ಕ್ರಮವಹಿಸಬೇಕು. ಅದೇ ರೀತಿ, ಇತರೇ ಬರಪೀಡಿತ ಪ್ರದೇಶದ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಅಗತ್ಯ ಕ್ರಮವಹಿಸಬೇಕು.
   
 9. ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಒದಗಿಸಬೇಕು. ಸಾರ್ವಜನಿಕ ಹಾಗೂ ಖಾಸಗೀ ಶಿಕ್ಷಣ ಸಂಸ್ಥೆಗಳಲ್ಲಿ ಮುಂದಿನ ವರ್ಷದ ಎಲ್ಲಾ ಶಾಲಾ, ಕಾಲೇಜು ಹಾಗೂ ಉನ್ನತ ಹಂತದ ಶಿಕ್ಷಣ ಶುಲ್ಕವನ್ನು ಮನ್ನಾ ಮಾಡಬೇಕು
   
 10. ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಗಳಿಗೆ ತಲಾ 10 ಲಕ್ಷ ರೂ. ಪರಿಹಾರವನ್ನು ನೀಡಬೇಕು.