ಅಹೋರಾತ್ರಿ ಧರಣಿ

ಸಂಪುಟ: 
01
ಸಂಚಿಕೆ: 
07
Sunday, 5 February 2017

ಸುಮಾರು 5 ಸಾವಿರಕ್ಕಿಂತ ಹೆಚ್ಚಿನ ಕಾರ್ಮಿಕರು ಪ್ರೀಡಂ ಪಾರ್ಕನಲ್ಲೇ ತಾವು ತಂದಿದ್ದ ಊಟವನ್ನು ಸ್ಥಳದಲ್ಲಿದ್ದ ನಾಯಕರಿಗೂ ನೀಡಿ ಅಲ್ಲೇ ರಾತ್ರಿ ವಾಸ್ತವ್ಯ ಮುಂದುವರೆಸಿದರು. ಎರಡನೇ ದಿನ ಕಾರ್ಮಿಕ ಸಚಿವ ಶ್ರೀ ಸಂತೋಷ್ ಲಾಡ್ ಸ್ಥಳಕ್ಕೆ ಬಂದರು ಮನವಿ ಸ್ವೀಕರಿಸಿದರು ಮತ್ತು ಕೆಲವು ಭರವಸೆ ನೀಡಿದರು. ಆದರೆ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ವಿವಿಧ ಇಲಾಖೆಗಳ  ಸಚಿವರು ಮತ್ತು ಅಧಿಕಾರಿಗಳೊಂದಿಗೆ ಸಭೆ ನಿಗದಿಯಾಗದ ಹೊರತು ಚಳವಳಿ ಹಿಂಪಡೆಯುವುದಿಲ್ಲ ಎಂದು ನಾಯಕರು ಸ್ಪಷ್ಟಪಡಿಸಿದ್ದರಿಂದ ಸಚಿವರು ಮುಖ್ಯಮಂತ್ರಿಗಳ ಜೊತೆ ಸಭೆ ನಿಗದಿಪಡಿಸುವ ಭರವಸೆಯೊಂದಿಗೆ ನಿರ್ಗಮಿಸಿದರು. ಈ ಮಧ್ಯ ಗ್ರಾಮೀಣಾಭೀವೃಧ್ದಿ, ವಿದ್ಯುತ್ ಮೊದಲಾದ ಇಲಾಖೆಗಳ ಅಧಿಕಾರಿಗಳು ಬಂದ ಮನವಿ ಸ್ವೀರಿಸಿದರು.   ರಾಜ್ಯ ಸರಕಾರ ನಿರ್ದಿಷ್ಟ ಭರವಸೆ ಕೊಡುವವರೆಗೆ ಕಾರ್ಮಿಕರು ಅಲ್ಲಿಂದ ಕದಲಲಿಲ್ಲ.