ಕನಿಷ್ಟ ಕೂಲಿಗಾಗಿ ಕಾರ್ಮಿಕರ ವಿಜಯಿ ‘ಅಹೋರಾತ್ರಿ’ ಹೋರಾಟ...

ಸಂಪುಟ: 
11
ಸಂಚಿಕೆ: 
7
Sunday, 5 February 2017

ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ಜನವರಿ 31 ರಿಂದ ಪ್ರಮುಖ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಅನಿರ್ದಿಷ್ಟ ಅಹೋರಾತ್ರಿ ಹೋರಾಟವನ್ನು ಕಾರ್ಮಿಕರು ನಡೆಸಿದರು. ನಗರದ ಸಂಗೊಳ್ಳಿರಾಯಣ್ಣ ರೈಲ್ವೆ ನಿಲ್ದಾಣದಿಂದ ಆರಂಭಗೊಂಡ ಕಾರ್ಮಿಕರ ರ್ಯಾಲಿ ಫ್ರೀಡಂ ಪಾರ್ಕಿನಲ್ಲಿ ಸಮಾವೇಶಗೊಂಡಿತು. 30 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಕಾರ್ಮಿಕರ ಬೃಹತ್ ರ್ಯಾಲಿ ನಡೆಸಿದರು.

ಕಾರ್ಮಿಕರ ಬೃಹತ್ ರ್ಯಾಲಿಯಲ್ಲಿ  ಅಂಗನವಾಡಿ ನೌಕರರು, ಅಕ್ಷರ ದಾಸೋಹ ನೌಕರರು, ಆಶಾ, ಗ್ರಾಮ ಪಂಚಾಯತ್ ನೌಕರರು, ಹಮಾಲಿ ನೌಕರರು, ಮುನ್ಸಿಪಲ್ ಕಾರ್ಮಿಕರು, ಕಟ್ಟಡ ನಿರ್ಮಾಣ ಕಾರ್ಮಿಕರು, ಸಾರಿಗೆ ನೌಕರರು, ಆಟೋ ಚಾಲಕರು, ಕೈಗಾರಿಕಾ ಕಾರ್ಮಿಕರು, ಸಾರ್ವಜನಿಕ ಉದ್ದಿಮೆಗಳ ಕಾರ್ಮಿಕರು, ವಿದ್ಯುತ್ ಕಾರ್ಮಿಕರು, ವಿವಿಧ ಕೈಗಾರಿಕೆಗಳ ಗುತ್ತಿಗೆ ಕಾರ್ಮಿಕರು, ಬೀಡಿ ಕಾರ್ಮಿಕರು, ಮನೆ ಕೆಲಸಗಾರರು, ಎಲ್‍ಐಸಿ ಏಜೆಂಟ್‍ರು, ಔಷದ ಮಾರಾಟ ಪ್ರತಿನಿಧಿಗಳು ವಿತರಕರು, ಹೀಗೆ ವಿವಿಧ ವಲಯಗಳ ಕಾರ್ಮಿಕರು ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿ ರಾಜಧಾನಿಯನ್ನು ಸೇರಿದ ಜನ ಸರ್ಕಾರದ ಕಾರ್ಮಿಕ ವಿರೋಧಿ ಧೋರಣೆಯ ವಿರುದ್ಧ ಘೋಷಣೆಗಳನ್ನು ಕೂಗಿದರು.

ಈ ಹಿಂದೆ ದಿನಾಂಕ 2014 ಜನವರಿ 20  ರಂದು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅವರು ನೀಡಿದ್ದ ನಿರ್ದೇಶನಗಳು ಜಾರಿಗೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಕಳೆದ ವರ್ಷ ಹೋರಾಟ ನಡೆಸಿದಾಗಲೂ ಮಾನ್ಯ ಕಾರ್ಮಿಕ ಸಚಿವರು ಕೆಲವು ಪ್ರಶ್ನೆಗಳನ್ನು ಕುರಿತು ನಮ್ಮ ಸಂಘದ ಪದಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರೂ ಪ್ರಯೋಜನವಾಗಿಲ್ಲ ಅಂತೆಯೆ ಈ ಹಿಂದೆ ದಿನಾಂಕ 2016 ಏಪ್ರಿಲ್ 12 ರಂದು ತಮ್ಮ ಸಮುಖದಲ್ಲಿ ನಿಗದಿಯಾಗಿದ್ದರೂ ಸಭೆ ನಡೆದಿರುವುದಿಲ್ಲ. ಹೀಗಾಗಿ ರಾಜ್ಯದ ಕಾರ್ಮಿಕ ವರ್ಗದ ಹಲವು ಗಂಭೀರ ಸಮಸ್ಯೆಗಳು ಇತ್ಯರ್ಥವಾಗದೇ ಹಾಗೇ ಉಳಿದಿವೆ ್ಮ ಮಧ್ಯಪ್ರವೇಶ ಅಗತ್ಯವಿದೆ ಎಂಬುದು ಹೋರಾಟದ ಪ್ರಮುಖ ಒತ್ತಾಯವಾಗಿತ್ತು. ಮಾನ್ಯ ಮಖ್ಯಮಂತ್ರಿಗಳ ನೇತೃತ್ವದಲ್ಲಿ ಸಮಸ್ಯೆಗಳ ಇತ್ಯರ್ಥಕ್ಕಾಗಿ ಆಗ್ರಹಿಸಿ ಈ ಹೋರಾಟ ಹಮ್ಮಿಕೊಳ್ಳಲಾಗಿತ್ತು.

ಸಿಐಟಿಯು ರಾಜ್ಯ ಅಧ್ಯಕ್ಷೆ ಎಸ್.ವರಲಕ್ಷ್ಮಿ, ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ, ಹಿರಿಯ ಉಪಾಧ್ಯಕ್ಷರಾದ ವಿಜೆಕೆ ನಾಯರ್, ಆರ್. ಶ್ರೀನಿವಾಸ್, ಕೆ. ಶಂಕರ್, ಎಚ್.ಎನ್.ಗೋಪಾಲಗೌಡ, ರಾಜ್ಯ ಕಾರ್ಯದರ್ಶಿಗಳಾದ ಕೆ.ಎನ್.ಉಮೇಶ್, ಕೆ.ಮಹಾಂತೇಶ್,  ಸೈಯ್ಯದ್ ಮುಜೀಬ್, ಬಾಲಕೃಷ್ಣಶೆಟ್ಟಿ, ಯಮುನಾ ಗಾಂವ್ಕರ್, ಸುನಂದಾ, ಮಾಲಿನಿ ಮೇಸ್ತಾ, ಆರ್.ಎಸ್. ಬಸವರಾಜ್, ಜೆ.ಬಾಲಕೃಷ್ಣಶೆಟ್ಟಿ, ಎಂ.ಬಿ.ನಾಡಗೌಡ, ಪ್ರತಾಪ್ ಸಿಂಹ ,ಮಹೇಶ ಪತ್ತಾರ್, ಮಾತನಾಡಿದರು. ಹಾಗೂ ಇತರೆ ರಾಜ್ಯ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಗ್ರಾ.ಪ. ನೌಕರರ ಸಂಘದ ರಾಜ್ಯಧ್ಯಕ್ಷ ಮಾರುತಿ ಮಾನ್ಪಡೆ, ವಿದ್ಯುತ್ ಗುತ್ತಿಗೆ ನೌಕರರ ಸಂಘದ ರಾಜ್ಯ ಅಧ್ಯಕ್ಷರಾದ ಸತ್ಯಬಾಬು, ಕಟ್ಟಡ ಕಾರ್ಮಿಕ ಸಂಘದ ರಾಜ್ಯ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಜನವಾದಿ ಮಹಿಳಾ ಸಂಘದ ಪ್ರಧಾನ ಕಾರ್ಯದರ್ಶಿ ಗೌರಮ್ಮ, ಆದಿವಾಸಿ ಹಕ್ಕುಗಳ ಸಮಿತಿ ಸಹ ಸಂಚಾಲಕ ಎಸ್. ವೈ ಗುರುಶಾಂತ್, ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಜಿ. ವಿ. ಶ್ರೀರಾಮರೆಡ್ಡಿ, ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಯು, ಬಸವರಾಜ್ ಮುಂತಾದ ನಾಯಕರು ಮಾತನಾಡಿದರು.

ಮೂರು ದಿನಗಳ ಕಾಲ ಸಾವಿರಾರು ಸಂಖ್ಯೆಯಲ್ಲಿ ಫ್ರೀಡಂ ಪಾರ್ಕಿನಲ್ಲಿ ಅಹೋರಾತ್ರಿ ಧರಣಿ ನಡೆಸಿದರು. ಅದರಲ್ಲಿ ದೊಡ್ಡ ಸಂಖ್ಯೆಯಲ್ಲಿ ಕರ್ನಾಟಕದ ಮೂಲೆ ಮೂಲೆಗಳಿಂದ ಬಂದಿದ್ದ ಮಹಿಳಾ ಸ್ಕಿಂ ಕಾರ್ಮಿಕರು, ಗ್ರಾಮ ಪಂಚಾಯತ್, ಹಮಾಲಿ ಮತ್ತಿತರ ಕಾರ್ಮಿಕರು ಭಾಗವಹಿಸಿದ್ದರು. ಬೆಂಗಳೂರಿನ ಹೊರಗಿಂದ ಬಂದಿದ್ದ ಕಾರ್ಮಿಕರು ಅಲ್ಲೇ ರಾತ್ರಿ ವೇಳೆಯಲ್ಲಿ ಉಳಿಯುತ್ತಿದ್ದರು. ಬೆಂಗಳೂರಿನ ಮತ್ತು ಸುತ್ತ ಮುತ್ತದಿಂದ ಬಂದ ಕಾರ್ಮಿಕರು ಅವರನ್ನು ಸೇರಿಕೊಳ್ಳುತ್ತಿದ್ದರು. ದಿನವೀಡಿ ಹಾಡುಗಳು, ಸಾಂಸ್ಕøತಿಕ ಕಾರ್ಯಕ್ರಮಗಳು, ಘೋಷಣೆಗಳು, ನಾಯಕರ ಭಾಷಣಗಳು ಸ್ಫೂರ್ತಿದಾಯಕವಾಗಿ ನಡೆಯುತ್ತಿದ್ದವು. ಈ ನಡುವೆ ಕೇಂದ್ರ ಬಜೆಟ್ ನಲ್ಲಿ ಕಾರ್ಮಿಕರು ನಿರೀಕ್ಷಿಸಿದ್ದ ಯಾವ ಕ್ರಮಗಳೂ ಇಲ್ಲದ್ದನ್ನು ಪ್ರತಿಭಟಿಸಲಾಯಿತು. ಮೂರು ದಿನಗಳ ಕಾಲ ಫ್ರೀಢಂ ಪಾರ್ಕಿನಲ್ಲಿ ಕರ್ನಾಟಕ ಕಾರ್ಮಿಕರ ಪ್ರತಿನಿಧಿಗಳ ಒಂದು ‘ಪರಪಂಚ’ವೇ ನೆರೆದಿತ್ತು. ನಿರ್ದಿಷ್ಟ ಭರವಸೆಗಳು ಕೊಡದೆ ಧರಣಿ ವಾಪಸು ತೆಗೆದುಕೊಳ್ಳಲು ಮನವಿ ಮಾಡಲು ಬಂದ ಮಂತ್ರಿಗಳು, ಅಧಿಕಾರಿಗಳನ್ನು ಲೆಕ್ಕಿಸದೆ ಧರಣಿ ಮೂರು ದಿನಗಳ ಕಾಲ ಮುಂದುವರೆದಿತ್ತು. ಮೂರನೇ ದಿನ ಅಂದರೆ ಫೆಬ್ರುವರಿ 2ರಂದು ಸಾಯಂಕಾಲ ವಾಪಸು ತೆಗೆದುಕೊಳ್ಳಲಾಯಿತು.

ಲಿಂಗರಾಜು