2016ರಲ್ಲಿ ತ್ರಿಪುರಾ ತೋರಿಸಿದ ಎಡಪರ್ಯಾಯ:

ಸಂಪುಟ: 
11
ಸಂಚಿಕೆ: 
2
Sunday, 1 January 2017

ಶಾಂತಿಯ ದ್ವೀಪ,ಸಾಕ್ಷರತೆಯಲ್ಲಿ ಮತ್ತು ಗ್ರಾಮೀಣ ಉದ್ಯೋಗ ಒದಗಿಸುವುದರಲ್ಲಿ ಪ್ರಥಮ ಸ್ಥಾನ
ಈಗ ಮುಕ್ತಾಯಗೊಳ್ಳುತ್ತಿರುವ 2016   ತ್ರಿಪುರಾ ರಾಜ್ಯಕ್ಕೆ ಎರಡೆರಡು ಸಂತೋಷದ ಸಂಗತಿಗಳ ವರ್ಷ.

ಮೊದಲನೆಯದಾಗಿ ಹಿಮಸಾಚಾರ ಪೀಡಿತ ಈಶಾನ್ಯ ಭಾರತದಲ್ಲಿ ತ್ರಿಪುರ ಶಾಂತಿಯ ದ್ವೀಪವಾಗಿ ಮೂಡಿಬಂದಿದೆ. 2016ರಲ್ಲಿ ಅಲ್ಲಿ ಓಂದೇ ಒಂದು ಉಗ್ರಗಾಮಿ ಚಟುವಟಿಕೆ ವರದಿಯಾಗಿಲ್ಲ.

ಎರಡನೆಯದಾಗಿ, ಅದು  94% ಸಾಕ್ಷರತೆ   ಸಾಧಿಸಿರುವ ಕೇರಳವನ್ನು ಕೂಡ ಹಿಮ್ಮೆಟ್ಟಿಸಿ, ಸುಮಾರು 97% ಸಾಕ್ಷರತೆ ಸಾಧಿಸಿ ಇಡೀ ದೇಶದಲ್ಲಿಯೇ ಪ್ರಥಮ ಸ್ಥಾನ ಪಡೆದುಕೊಂಡಿದೆ.

1960ರ ದಶಕದ ಮಧ್ಯದಿಂದ  ತ್ರಿಪುರಾ ರಾಜ್ಯ ದಶಕಗಳವರೆಗೆ ಭಯೋತ್ಪಾದಕರ ಹಾವಳಿಗೆ ತುತ್ತಾಗಿತ್ತು. ಎಡರಂಗ ಸರಕಾರ  ನಿರಂತರವಾಗಿ ಭಯೋತ್ಪಾದನೆ ವಿರುದ್ಧ ಕ್ರಮಗಳನ್ನು ತೆಗೆದುಕೊಳ್ಳುವ ಜತೆಗೇ, ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಂಡುದರಿಂದಾಗಿ ಕ್ರಮೇಣ ಭಯೋತ್ಪಾದನೆಯನನು ಹಿಮ್ಮಟ್ಟಿಸಲು ಸಾಧ್ಯವಾಗಿದೆ  ಎಂದು ಮುಖ್ಯಮಂತ್ರಿ ಮಾಣಿಕ್ ಸರಕಾರ್ ಹೇಳಿದ್ದಾರೆ.

“ನಮ್ಮ ಸಮಗ್ರ ನಿಲುವಿನಿಂದಾಗಿ ಮತು ಬಹುಮುಖೀ ಕಾರ್ಯತಂತ್ರದಿಂದಾಗಿ ತ್ರಿಪುರಾದಲ್ಲಿ ದಶಕಗಳ ಭಯೋತ್ಪಾದನೆಯನ್ನು ನಿಯಂತ್ರಣಕ್ಕೆ ತರಲುಸ ಅಧ್ಯವಾಗಿದೆ” ಎಂದು 1998ರಿಂದ ಮುಖ್ಯಮಂತ್ರಿಗಳಾಗಿರುವ ಮಾಣಿಕ್ ಸರಕಾರ್ ಹೇಳಿದ್ದಾರೆ. ಸಶಸ್ತ್ರ ಪಡೆಗಳ ವಿಶೇಷ ಅಧಿಕಾರಗಳ ಕಾಯ್ದೆಯನ್ನು ಹಿಂತೆಗೆದುಕೊಂಡರೂ ಸಂತೃಪ್ತಿಯಿಂದ ಕುಳಿತಿಲ್ಲ, ಅವು ಪುನಃ ಯಾವಾಗ ಬೇಕಾದರೂ ತಲೆ ಎತ್ತಬಹುದೆಂದು ಸದಾ ಜಾಗರೂಕರಾಗಿದ್ದೇವೆ ಎಂದು ಅವರು ಹೇಳುತ್ತಾರೆ. ಅಭಿವೃದ್ಧಿ ಚಟುವಟಿಕೆಗಳಲ್ಲದೆ, ರಾಜ್ಯದಲ್ಲಿರುವ ವಿಭಿನ್ನ ಸಮುದಾಯಗಳಲ್ಲಿ ಭದ್ರತೆಯ ಭಾವವನ್ನು ಕಟ್ಟಿ ಬೆಳೆಸುವ ಮೂಲಕ ಆಡಳಿತ ವ್ಯವಸ್ಥೆಯಲ್ಲಿ ಬುಡಕಟ್ಟು ಜನಗಳು ವಿಶ್ವಾಸ ಹೊಮದುವಂತೆ ಮಾಡಲಾಗಿರುವುದೂ ಇದಕ್ಕೆ ಕಾರಣ ಎಂದು ರಾಜ್ಯದ ನಿವೃತ್ತ ಪೋಲೀಸ್ ಮುಖ್ಯಸ್ಥ ಸಲಿಂ ಅಲಿ ಕೂಡ ಹೇಳುತ್ತಾರೆ.

ಶಾಂತಿಯನ್ನು ಕಪಾಡಿಕೊಳ್ಳುವಲ್ಲಿ ಮಾತ್ರವಲ್ಲ, ಪ್ರಜಾಪ್ರಭುತ್ಪ ಮತ್ತು ಸಾಮಾಜಿಕ ನ್ಯಾಯವನ್ನು ಖಾತ್ರಿಪಡಿಸಲು, ಬಡತನವನ್ನು ಹಿಮ್ಮೆಟ್ಟಿಸುವಲ್ಲಿ ಶಿಕ್ಷಣ ಪ್ರಮುಖ ಪಾತ್ರ ವಹಿಸುತ್ತ ಎಂಬುದನ್ನು ಅರಿತು 2011ರಲ್ಲಿ ಎಡರಂಗ ಸರಕಾರ ಮೂರು ಹಂತಗಳ ರಾಜ್ಯವ್ಯಾಪಿ ಸಾಕ್ಷರತಾ ಆಂದೋಲನವನ್ನು ಆರಂಭಿಸಿತು. ಆಗ ಸಾಕ್ಷರತೆ 87.75 ಇತ್ತು. ಈ ವರ್ಷ ಸಾಕ್ಷರತಾ ಪ್ರಮಾಣ 96.82 ಪ್ರತಿಶತಕ್ಕೆ ಏರಿದೆ ಎಂದು ಮಾಣಿಕ್ ಸರಕಾರ್ ಘೋಷಿಸಿದ್ದು, ಈ ಯಶಸ್ಸನ್ನು ಆಧ್ಯಯನ ಮಾಡಲು ಬೇರೆ ರಾಜ್ಯಗಳಿಂದ ಅನೇಕ ಅಧಿಕಾರಿಗಳು ಇಲ್ಲಿಗೆ ಬರುತ್ತಿದ್ದಾರೆ.

ಈ ವರ್ಷದ ತ್ರಿಪುರಾದ ಮತ್ತೊಂದು ಸಾಧನೆಯೆಂದರೆ ರಾಷ್ಟ್ರದ ರಾಜಧಾನಿಯೊಂದಿಗೆ ರಾಜ್ಯದ ರೈಲು ಸಂಪರ್ಕಕ್ಕಾಗಿ 67 ವರ್ಷಗಳಿಮದ ನಡೆಯುತ್ತಿದ್ದ ಚಳುವಳಿ ಇವರ್ಷ ಶಾಂತಿಯುತವಾಗಿ ಕೊನೆಗೊಂಡಿದೆ, ಹೊಸದಾಗಿ ನಿರ್ಮಿಸಿರುವ ಬ್ರಾಡ್ ಗೇಜ್‍ನಲ್ಲಿ ಜುಲೈ 31ರಂದು ಅಗರ್ತಲಾ-ದೆಹಲಿ ಪ್ರಯಾಣಿಕರ ರೈಲು ಸಂಚಾರ ಆರಂಭವಾಗಿದೆ.

ತ್ರಿಪುರಾ ರಾಜ್ಯ ಮಹಾತ್ಮಾ ಗಾಂಧೀ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಸತತ 7 ನೇ ವರ್ಷವೂ ಉದ್ಯೋಗ ಒದಗಿಸುವುದರಲ್ಲಿ ಮೊದಲನೇಯ ಸ್ಥಾನದಲ್ಲಿ ಮುಂದುವರೆದಿದೆ ಎಂಬದು ಎಡರಂಗ ಆಳ್ವಿಕೆಯ ಈ ರಾಜ್ಯದ ಮತ್ತೊಂದು ಮಹತ್ಸಾಧನೆ.

ಈ ಮೂಲಕ ಎಡ ಪರ್ಯಾಯವೇ ನಿಜವಾದ ಪರ್ಯಾಯ ಎಂಬುದನ್ನು ತ್ರಿಪುರಾ ತೋರಿಸಿಕೊಟ್ಟಿದೆ.