ನಿವೇಶನ ರಹಿತರ ಅನಿರ್ದಿಷ್ಟಾವಧಿ ಹೋರಾಟಕ್ಕೆ ಕರೆ

ಸಂಪುಟ: 
11
ಸಂಚಿಕೆ: 
2
Sunday, 1 January 2017

ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಕೊಲ್ಲಳ್ಳಿ ಗ್ರಾಮದಲ್ಲಿ ನಿವೇಶನ ರಹಿತರ ಸಭೆಯು ಡಿಸೆಂಬರ್ 29ರಂದು ನಡೆಯಿತು. ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್‍ಎಸ್)ದ ರಾಜ್ಯ ಅಧ್ಯಕ್ಷರಾದ ಮಾರುತಿ ಮಾನ್ಪಡೆರವರು ಮಾತನಾಡಿದರು.

ಜನವರಿ 05 ರಂದು ನಿವೇಶನ ರಹಿತರ ಅನಿರ್ದಿಷ್ಟಾವಧಿ ಹೋರಾಟಕ್ಕೆ ಕರೆ ನೀಡಿದರು. ಸಭೆಯಲ್ಲಿ ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಧರ್ಮೇಶ್, ಕೆಪಿಆರ್‍ಎಸ್ ಜಿಲ್ಲಾಧ್ಯಕ್ಷರಾದ ಹೆಚ್.ಆರ್.ನವೀನ್‍ಕುಮಾರ್, ದಲಿತ ಹಕ್ಕುಗಳ ಸಮಿತಿ ಜಿಲ್ಲಾ ಸಂಚಾಲಕರಾದ ಪೃಥ್ವಿ, ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಹರೀಶ್ ಮತ್ತು ದಲಿತ ಮುಖಂಡರಾದ ಮಲ್ಲಪ್ಪ, ಸಂದೇಶ್, ವಿಜಯ್‍ಕುಮಾರ್ ಮತ್ತು ಸ್ಥಳೀಯರಾದ ಸಲೀಂ ಭಾಗವಹಿಸಿದ್ದರು.