ತ್ರಿಪುರಾ ಗ್ರಾಮ ಪಂಚಾಯತು ಚುನಾವಣೆಗಳಲ್ಲಿ ಎಡರಂಗಕ್ಕೆ ಭಾರೀ ಜಯ

ಸಂಪುಟ: 
11
ಸಂಚಿಕೆ: 
02
Monday, 2 January 2017

ತ್ರಿಪುರಾದಲ್ಲಿ ಡಿಸೆಂಬರ್ 21ರಂದು ಮೂರು ಹಂತಗಳ ಪಂಚಾಯತುಗಳ ಖಾಲಿ ಸ್ಥಾನಗಳಿಗೆ ನಡೆದ ಉಪಚುನಾವಣೆಗಳಲ್ಲಿ ಎಡರಂಗ ಭಾರೀ ಜಯ ಗಳಿಸಿದೆ. 83% ಮತದಾರರು ಈ ಚುನಾವಣೆಗಳಲ್ಲಿ ಶಾಂತಿಯುತವಾಗಿ ಮತ ಚಲಾಯಿಸಿದರು. ಒಂದು ಜಿಲ್ಲಾಪರಿಷದ್ ಸ್ಥಾನ, ಎರಡು ಪಂಚಾಯತ್ ಸಮಿತಿ ಸ್ಥಾನಗಳು ಮತ್ತು 41 ಗ್ರಾಮ ಪಂಚಾಯತ್ ಸ್ಥಾನಗಳಿಗೆ ಮತದಾನ ನಡೆದಿತ್ತು. ಜಿಲ್ಲಾ ಪರಿಷದ್ ಮತ್ತು ಪಂಚಾಯತ್ ಸಮಿತಿಯ ಒಟ್ಟು ಮೂರೂ ಸ್ಥಾನಗಳನ್ನು ಸಿಪಿಐ(ಎಂ) ಗೆದ್ದು ಕೊಂಡಿದೆ. 41 ಗ್ರಾಮ ಪಂಚಾಯತು ಸ್ಥಾನಗಳಲ್ಲಿ 37ನ್ನು ಎಡರಂಗ ಗೆದ್ದುಕೊಂಡಿದೆ. ಮೂರು ಗ್ರಾಮ ಪಂಚಾಯತ್ ಸ್ಥಾನಗಳನ್ನು ಸಿಪಿಐ(ಎಂ) ಈ ಮೊದಲೇ ಅವಿರೋಧವಾಗಿ ಪಡೆದುಕೊಂಡಿತ್ತು.

ಹೀಗೆ ಒಟ್ಟು 47 ಸ್ಥಾನಗಳಲ್ಲಿ ಎಡರಂಗ 43ನ್ನು ಗೆದ್ದುಕೊಂಡಿzಸಿವುಗಳಲ್ಲಿ ಐದು ಈ ಹಿಂದೆ ಪ್ರತಿಪಕ್ಷಗಳು ಗೆದ್ದಿದ್ದ ಸ್ಥಾನಗಳು.  ಜಿಲ್ಲಾ ಪರಿಷದ್ ಚುನಾವಣೆಯಲ್ಲಿ ಎರಡನೇ ಸ್ಥಾನದಲ್ಲಿ ಬಿಜೆಪಿ ಇತ್ತು, ಟಿಎಂಸಿ ಠೇವಣಿ ಕಳೆದುಕೊಂಡಿತು.

ಎಡರಂಗದಲ್ಲಿ ವಿಶ್ವಾಸವನ್ನು ಪುನರುಚ್ಚರಿಸಿರುವ ತ್ರಿಪುರಾದ ಮತದಾರರನನು ಅಭಿನಂದಿಸುತ್ತ ತ್ರಿಪುರಾ ಎಡರಂಗ ಇದು ಶಾಂತಿ, ಸೌಹಾರ್ದ ಮತ್ತು ಅಭಿವೃದ್ಧಿಗೆ ಜನಾದೇಶ ಎಂದು ವರ್ಣಿಸಿದೆ. ಈ ಚುನಾವಣೆಗಳಲ್ಲಿ ಒಂದೂ ಸ್ಥಾನ ಪಡೆಯದ ಕಾಂಗ್ರೆಸ್ ಪಕ್ಷ ಗುಪ್ತವಾಗಿ ಬಿಜೆಪಿಯನ್ನು ಬೆಂಬಲಿಸಿದ ಬಗ್ಗೆ ಎಡರಂಗ ಆತಂಕ ವ್ಯಕ್ತಪಡಿಸಿದೆ. ಅದು ಈ ಹಿಂದೆ ಗೆದ್ದಿದ್ದ ಸ್ಥನಗಳಿಗೂ ಈ ಬಾರಿ ಸ್ಪರ್ಧಿಸಲಿಲ್ಲ.