ಅಮಾನ್ಯೀಕರಣದ ವಿರುದ್ಧ ಬೀದಿಗಿಳಿದ ಬೀಡಿ ಕಾರ್ಮಿಕರು

Tuesday, 24 January 2017

ಕರಾವಳಿ ಜಿಲ್ಲೆಗಳ ಜೀವನಾಡಿ ಬೀಡಿ ಉದ್ಯಮ ಪ್ರಮುಖವಾಗಿ ಮಹಿಳಾ ಕಾರ್ಮಿಕರು ಬೀಡಿ ಕೆಲಸವನ್ನೇ ನಂಬಿಕೊಂಡು ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ. #ನರೇಂದ್ರಮೋದಿ ಸರಕಾರ ರೂ.500 ಮತ್ತು 1000 ರೂ. ನೋಟುಗಳ #ಅಮಾನ್ಯಗೊಳಿಸಿದ ಪರಿಣಾಮವಾಗಿ ಜಿಲ್ಲೆಯ ಬೀಡಿ ಕಾರ್ಮಿಕರು ಅತೀ ತೊಂದರೆಗೊಳಗಾದರು. ಹಲವಾರು ವಾರಗಳ ಕಾಲ ವೇತನ ಸಿಗದೆ ಪರದಾಡಿದರು. ಗಾಯದ ಮೇಲೆ ಬರೆ ಎಂಬಂತೆ ನಗದು ರಹಿತವಾಗಿ ವೇತನ ಬ್ಯಾಂಕುಗಳ ಮುಖಂತರ ನೀಡಬೇಕೇಂದು #ಸರ್ವಾಧಿಕಾರಿಪಕೀರ ಸುತ್ತೋಲೆ ಹೊರಡಿಸುತ್ತಾರೆ.

ದಿನವೊಂದಕ್ಕೆ ರೂ.50 ರಿಂದ ರೂ.70 ದುಡಿಯುವ ಬೀಡಿ ಕಾರ್ಮಿಕರು ದಿಕ್ಕೇ ತೋಚದಾದರು. ದಿನದ ಖರ್ಚು ಭರಿಸಲಾರದೆ ಗುಂಪುಗಳಲ್ಲಿ ತೆಗೆದಿರುವ ಸಾಲಗಳನ್ನು ತೀರಿಸಲಾಗದೆ ದಿನಾ ಕಣ್ಣೀರಿಡುವಂತಾಗಿದೆ. ಬಡ ಬೀಡಿ ಕಾರ್ಮಿಕರು. ಸಣ್ಣ ಗುತ್ತಿಗೆದಾರರನ್ನು ಬೀದಿಪಾಲು ಮಾಡುವಲ್ಲಿ ಪಕೀರ ಯಶಸ್ವಿಯಾಗಿದ್ದಾರೆ.

ಮೋದಿ ಸರಕಾರದ ನೋಟು ಅಮಾನ್ಯೀಕರಣ ತೊಂದರೆಯ ವಿರುದ್ದ ಮಂಗಳೂರಿನಲ್ಲಿ ಬೀದಿಗಿಳಿದ ಬೀಡಿ ಕಾರ್ಮಿಕರು ಇದರ ವಿರುದ್ದ ಬೀದಿಗೆ ಇಳಿದಿದ್ದಾರೆ.

 

 

ವರದಿ  : ಮಿಥುನ್ ರಾಜ್ ಕುತ್ತಾರ್