ಅಂಗವಿಕಲರ ಹೋರಾಟ: ಅಂಗೀಕಾರವಾಯಿತು ಕಾಯಿದೆ

ಸಂಪುಟ: 
10
ಸಂಚಿಕೆ: 
11
Sunday, 25 December 2016

ಸುಮಾರು ಒಂದು ದಶಕದಿಂದ ಅಂಗವಿಕಲರು ಮತ್ತು ಅಂಗವಿಕರಲ್ಲಿ ಕೆಲಸ ಮಾಡುವ ಸಂಘ ಸಂಸ್ಥೆಗಳ ಹೋರಾಟಗಳ ಪರಿಣಾಮವಾಗಿ ಈ ಬಾರಿಯ ಸಂಸತ್ ಅಧಿವೇಶನದಲ್ಲಿ ಎರಡು ಸದನಗಳಲ್ಲಿ ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಕಾಯಿದೆ ಜಾರಿಗೆ ಬಂದಿದೆ. ಅಂಗವಿಕಲರ ಸಂಘ ಸಂಸ್ಥೆಗಳ ಜಂಟಿ ಕ್ರಿಯಾ ಸಮಿತಿಯು ಕಾಯಿದೆ ಜಾರಿಗೆ ಬಂದ ಹಿನ್ನೆಲೆಯಲ್ಲಿ ಡಿಸೆಂಬರ್ 17ರಂದು ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ಸಂತಸ ಹಂಚುಕೊಳ್ಳುವ ಕಾರ್ಯಕ್ರಮವನ್ನು ಬಹಿರಂಗವಾಗಿ ಏರ್ಪಡಿಸಿದ್ದರು.

ದೇಶದಲ್ಲಿ ರಾಜಕೀಯ ಪಕ್ಷಗಳು ತಮ್ಮ ವ್ಯತ್ಯಾಸಗಳನ್ನು ಪಕ್ಕಕ್ಕೆ ಇಟ್ಟು ಜೊತೆಯಾಗಿ ಈ ಕಾಯಿದೆಯನ್ನು ಮಂಜೂರು ಮಾಡಿದ್ದು ಇದೊಂದು ಐತಿಹಾಸಿಕ ಸಂದರ್ಭವಾಗಿದೆ ಎಂದು ತಿಳಿಸಿದರು.

ಕೇಂದ್ರ ಸರ್ಕಾರವು ಈ ಕಾಯಿದೆಯನ್ನು ಶೀಘ್ರದಲ್ಲೇ ರಾಷ್ಟ್ರಪತಿಗಳ ಅಂಕಿತಕ್ಕೆ ಕಳುಹಿಸಿ ಜಾರಿಗೊಳಿಸಬೇಕು ಮತ್ತು 2017ರ ಜನವರಿಯಿಂದಲೇ ಇದು ಜಾರಿಗೆ ತರಲು ಮುಂದಾಗಬೇಕೆಂದು ತಿಳಿಸಿದರು. ಈ ಸಂದರ್ಭದಲ್ಲಿ ಕ.ರಾ.ಅ.ಹಾ.ಪಾ.ಒ ಅಧ್ಯಕ್ಷರಾದ ಜಿ.ಎನ್.ನಾಗರಾಜ್, ಎಪಿಡಿಯ ವಿ.ಎಸ್.ಬಸವರಾಜ್, ಕಾರವೀರ್ಸ್‍ನ ಚಂದ್ರಶೇಖರ್ ಪುಟ್ಟಪ್ಪ, ಫೋರ್ತ್‍ವೇವ್ ಫೌಂಡೇಷನ್‍ನ ರವಿ ಜಿ., ಅಪ್ಸಾದ ರಾಮ್‍ಕುಮಾರ್ ಮತ್ತಿತರರು ಮಾತನಾಡಿದರು.