ಸಾಗುವಳಿ ರೈತರಿಂದ ಮುಖ್ಯಮಂತ್ರಿಗಳಿಗೆ ಅಂಚೆ ರವಾನೆ

ಸಂಪುಟ: 
11
ಸಂಚಿಕೆ: 
01
Sunday, 25 December 2016

ಬಗರ್‍ಹುಕುಂ ಸಾಗುವಳಿ ರೈತರಿಗೆ ಹಕ್ಕು ಪತ್ರಕ್ಕೆ ಆಗ್ರಹಿಸಿ, ಸಾಗುವಳಿ ನೀಡಲು ತೊಡಕ್ಕಾಗಿರುವ ಕಾನೂನನ್ನು ತಿದ್ದುಪಡಿ ಮಾಡಬೇಕೆಂದು ಒತ್ತಾಯಿಸಿ ಡಿಸೆಂಬರ್ 15ರಂದು ಕರ್ನಾಟಕ ಪ್ರಾಂತ ರೈತ ಸಂಘ(ಕೆಪಿಆರ್‍ಎಸ್)ದ ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ಕಾಮಗೌಡನ ಹಳ್ಳಿ, ಹನಗೂಡು ಪಂಚಾಯ್ತಿ ಘಟಕದಿಂದ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಹೈಕೋರ್ಟ್‍ನ ಮುಖ್ಯ ನ್ಯಾಯಾಧೀಶರಿಗೆ ಪತ್ರ ರವಾನಿಸುವ ಮೂಲಕ ಅಂಚೆ ಚಳುವಳಿ ನಡೆಸಿದರು.

ನಿವೇಶನ ರಹಿತರ ಕಾರ್ಯಾಗಾರ

ವಸತಿ ನಿವೇಶನದ ಹಕ್ಕಿಗಾಗಿ, ಸಂವಿಧಾನದ ಹಕ್ಕುಗಳ ಉಳುವಿಗಾಗಿ, ವಸತಿ ನಿವೇಶನ ರಹಿತರ ಹೋರಾಟ ಸಮಿತಿ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಕಾರ್ಯಾಗಾರವನ್ನು ಡಿಸೆಂಬರ್ 18ರಂದು ಏರ್ಪಡಿಸಲಾಗಿತು. ಹಾಸನದಲ್ಲಿ ನಡೆದ ಕಾರ್ಯಾಗಾರವನ್ನು ಉದ್ದೇಶಿಸಿ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಕಾಂ||ಜಿ.ವಿ.ಶ್ರೀರಾಮರೆಡ್ಡಿರವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಕಾಂ||ಧರ್ಮೇಶ್ ಅಧ್ಯಕ್ಷತೆ ವಹಿಸಿದ್ದರು. ಕಾಂ||ಹೆಚ್.ಆರ್.ನವೀನ್‍ಕುಮಾರ್‍ರವರು ಮುಂದಿನ ಹೋರಾಟಗಳ ರೂಪುರೇಷೆಗಳನ್ನು ಮಂಡಿಸಿದರು. ರಾಘವೇಂದ್ರ, ಪೃಥ್ವಿ, ಮಂಜುನಾಥ್, ಪುಷ್ಪ ಹರೀಶ್ ಮತ್ತು ನಿವೇಶನರಹಿತರು ನೂರಾರು ಜನತೆ ಭಾಗವಹಿಸಿದ್ದರು.