ವಸತಿ ರಹಿತ ಹಮಾಲರ ಪ್ರತಿಭಟನೆ

ಸಂಪುಟ: 
11
ಸಂಚಿಕೆ: 
01
Sunday, 25 December 2016

ರಾಜ್ಯದ ಗಡಿನಾಡು ತುಮಕೂರು ಜಿಲ್ಲೆಯ ತಾಲ್ಲೂಕು ಪಾವಗಡದ ಎಪಿಎಂಸಿ, ಗ್ರಾಮೀಣ, ಬಸ್ ಸ್ಟ್ಯಾಂಡ್‍ನಲ್ಲಿ ಶ್ರಮದಾಯಕ ಕೆಲಸ ನಿರ್ವಹಿಸುವ ಬಹುತೇಕ ದಲಿತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ವಸತಿ ರಹಿತ ಹಮಾಲಿ ಕಾರ್ಮಿಕರು ಸಿಐಟಿಯು ನೇತೃತ್ವದಲ್ಲಿ ಸಮಾವೇಶ ಕೈಗೊಂಡರು. ಡಿಸೆಂಬರ್ 16ರಂದು ನಡೆದ ಸಮಾವೇಶ ಉದ್ದೇಶಿಸಿ ಸಿಐಟಿಯು ರಾಜ್ಯ ಕಾರ್ಯದರ್ಶಿ ಮಹೇಶ್ ಪತ್ತಾರ್ ರವರು ಮಾತನಾಡಿದರು.

ಸಮಾವೇಶದ ನಂತರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ತಾಲ್ಲೂಕು ಆಡಳಿತಕ್ಕೆ ಮತ್ತು ಸ್ಥಳೀಯ ಶಾಸಕರಿಗೆ ಮನವಿ ಮತ್ತು ವಸತಿ ನಿವೇಶನಕ್ಕಾಗಿ ವಯುಕ್ತಿಕ ಅರ್ಜಿಗಳನ್ನು ಪ್ರತಿಭಟನಾಕಾರರು ಸಲ್ಲಿಸಿದರು. ಶಾಸಕರು ವಸತಿ ಹಾಗೂ ನಿವೇಶನ ಕುರಿತು ಸಂಬಂಧಿಸಿದ ಅಧಿಕಾರಿಗಳ ಜೊತೆ ಶೀರ್ಘದಲ್ಲಿಲೇ ಸಭೆ ನಡೆಸಿ ಹಮಾಲರಿಗೆ ನಿವೇಶನ ವಸತಿ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

 

ಎಸ್‍ಎಫ್‍ಐ ಪ್ರತಿಭಟನೆ

ಕೋಲಾರ ನಗರದ ಸರ್ಕಾರಿ ಬಾಲಕಿಯರ ಪಿ.ಯು. ಕಾಲೇಜಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಒತ್ತಾಯಿಸಿ ಜಿಲ್ಲಾಧಿಕಾರಿಗಳ ಕಛೇರಿ ಎದುರು ಡಿಸೆಂಬರ್ 16, 2016ರಂದು ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‍ಎಫ್‍ಐ) ಸಂಘಟನೆಯು ಪ್ರತಿಭಟನೆ ನಡೆಸಿತು. ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ವಾಸುದೇವರೆಡ್ಡಿ ಕೆ., ತಾಲ್ಲೂಕು ಅಧ್ಯಕ್ಷರಾದ ಗಾಯತ್ರಿ ಆರ್‍ಎನ್, ಕಾರ್ಯದರ್ಶಿ ಜೆ.ಶ್ರೀಕಾಂತ್, ಸದಸ್ಯರಾದ ಅನುಷಾ, ಚಂದನ, ವಿ.ಅನುಷಾ, ಕಾಲೇಜು ಮತ್ತು ಪ್ರೌಢಶಾಲೆಯ ಸಮಿತಿ ಸದಸ್ಯರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.