ಅಕ್ಷರದವ್ವನ ಕನಸು ನನಸಾಗಿಸೋಣ

Tuesday, 3 January 2017

ಜ.03 :  ಅಕ್ಷರ ಕಲಿಸಿದವ್ವನ ಕನಸನ್ನು ನನಸು ಮಾಡಬೇಕು ಎಂದು ಲೆಖಕಿಯರ ಸಂಘದ ಅದ್ಯಕ್ಷರಾದ ಡಾ.ವಸುಂಧರಾ ಭೂಪತಿ ಹೇಳಿದರು. ಬೆಂಗಳೂರಿನಲ್ಲಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‍ಎಫ್‍ಐ) ಸಂಘಟನೆ ಹಮ್ಮಿಕೊಂಡಿದ್ದ ಸಾವಿತ್ರಿಬಾಯಿ ಫುಲೆಯವರ ಜನ್ಮದಿನಾಚರಣೆಯ ಅಂಗವಾಗಿ ವಿದ್ಯಾರ್ಥಿನೀಯರ ರಾಜ್ಯ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ಮುಂದುವರೆದು ಮಾತನಾಡಿದ ಅವರು "ಅವಮಾನ, ಅಪಮಾನವನ್ನು ಮೆಟ್ಟ ಹೆಣ್ಣುಮಕ್ಕಳ ಶಿಕ್ಷಣವನ್ನು ಕಲಿಯಬೇಕೆಂಬ ಕ್ರಿಯೆಯನ್ನು ಜಾರಿ ಮಾಡುವಲ್ಲಿ ಅವರ ಕೊಡುಗೆ ದೊಡ್ಡದಿದೆ. ಅವರ ಕನಸ್ಸನ್ನು ನಾವೆಲ್ಲ ಇಂದು ನನಸಾಗಿಸುವ ದಾರಿಯನ್ನು ತುಳಿಯಬೇಕು ಎಂದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಕಲಾ ಕಾಲೇಜಿನ ಪ್ರಾಚಾರ್ಯರಾದ ಡಾ. ಕಾವಲಮ್ಮ ಮಾತನಾಡಿ " ಅಕ್ಷರ ಜ್ಞಾನವನ್ನು ನೀಡಿದರು ಬದುಕು ರೂಪಿಸಿಕೊಳ್ಳಬಹುದು ಎಂದು ಸಾವಿತ್ರಿಬಾಯಿವರು ಹೋರಾಟ ನಡೆಸಿದ್ದರು. ಇಂದು ಅಕ್ಷರ ಕಲಿತ ಮಹಿಳೆ ದಿಟ್ಟತನದಿಂದ ಬದುಕುತ್ತಿದ್ದಾಳೆ. ಆದರೂ ಇಂದಿಗೂ ಮಹಿಳೆಯನ್ನು ಶೋಷಿಸುವ, ಅವಮಾನಿಸುವ, ಗುಲಾಮರಂತೆ ಕಾಣುವುದು ನಿಂತಿಲ್ಲ ಇದರ ವಿರುದ್ದ ಹೋರಾಡಬೇಕು ಎಂದರು.

ವೇದಿಕೆಯ ಮೇಲೆ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಗೌರಮ್ಮ, ವಿದ್ಯಾರ್ಥಿನೀಯರ ಉಪಸಮಿತಿ ರಾಜ್ಯ ಸಂಚಾಲಕರಾದ ರೇಣುಕಾ ಕಹಾರ್, ಎಸ್ಎಪ್‍ಐ ರಾಜ್ಯ ಅದ್ಯಕ್ಷ ವಿ.ಅಂಬರೀಶ್, ರಾಜ್ಯ ಕಾರ್ಯದರ್ಶಿ ಗುರುರಾಜ್ ದೇಸಾಯಿ, ಮುಖಂಡರಾದ ಬಸವರಾಜ್ ಪೂಜಾರ್, ಚಿಕ್ಕರಾಜು ಎಸ್, ಆಶಾ, ಶೃತಿ ನೆಲಮಾಕನಳ್ಳಿ, ಮಯೂರಿ ಸೇರಿದಂತೆ ಅನೇಕರಿದ್ದರು. ವಿವಿಧ ಜಿಲ್ಲೆಗಳಿಂದ ವಿದ್ಯಾರ್ಥಿನೀಯರು ಭಾಗವಹಿಸಿದ್ದರು.

ಇದೇ ವೇಳೆ #ಸಾವಿತ್ರಿಬಾಯಿ_ಫುಲೆಯವರ ಜನ್ಮ ದಿನಾಚರಣೆಯನ್ನು #ಶಿಕ್ಷಕಿಯರ ದಿನಾಚರಣೆಯನ್ನಾಗಿ ಆಚರಿಸಬೇಕು ಮತ್ತು ದೇಶದ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಇವರ ಹೆಸರಿನಲ್ಲಿ ಮಹಿಳಾ ಅಧ್ಯಯನ ಪೀಠ ಆರಂಭಿಸಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರಕಾರವನ್ನು ಒತ್ತಾಯಿಸುವ ನಿರ್ಣಯವನ್ನು ತೆಗೆದುಕೊಳ್ಳಲಾಯಿತು.

 

ಕೃಪೆ  : ಗುರುರಾಜ ದೇಸಾಯಿ