ಅತ್ಯಾಚಾರಿಗಳಿಗೆ ಶಿಕ್ಷೆ ಆಗಬೇಕೆಂದು ಅಂಗನವಾಡಿ ನೌಕರರ ಹೋರಾಟ

Monday, 2 January 2017

ಬೀದರ್ ಜಿಲ್ಲೆಯ ಸುಂಕನಾಳದ ಉಜ್ಜಿನೆ ಗ್ರಾಮದಲ್ಲಿ ಡಿಸೆಂಬರ್ 26ರಂದು ಅಂಗನವಾಡಿ ನೌಕರರ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಖಂಡಿಸಿ, ಅಪರಾಧಿಗಳನ್ನು ಬಂಧಿಸದಿರುವುದು ಮತ್ತು ಧಾಳಿಗೆ ಒಳಗಾದ ಮಹಿಳೆಗೆ ಸೂಕ್ತ ವೈಧ್ಯಕೀಯ ನೆರವು ನೀಡುವಲ್ಲಿ ನಿರ್ಲಕ್ಷ್ಯ ವಹಿಸಿದ ಜಿಲ್ಲಾಡಳಿತದ ವಿರುದ್ಧ ಬೀದರ್ ಜಿಲ್ಲೆಯಲ್ಲಿ ಕರ್ನಾಟಕ ರಾಜ್ಯ  ಅಂಗನವಾಡಿ ನೌಕರರ ಸಂಘ (ಸಿಐಟಿಯು) ನೇತೃತ್ವದಲ್ಲಿ ಜನವರಿ 02, 2017ರಂದು ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ಕಛೇರಿ ಮುಂಭಾಗ ಸತತ ನಾಲ್ಕು ಗಂಟೆಗಳ ಕಾಲ ನಡೆದ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿಗಳು ಮನವಿ ಸ್ವೀಕರಿಸಿದರು. ನ್ಯಾಯ ಸಿಗಲೇಬೇಕೆಂದು ಪಟ್ಟು ಹಿಡಿದ ಅಂಗನವಾಡಿ ನೌಕರರ ಧರಣಿ ಆಕ್ರೋಶಕ್ಕೆ ಮಣಿದ ಜಿಲ್ಲಾಧಿಕಾರಿಗಳು ಸ್ಥಳದಲ್ಲೇ ಪೊಲೀಸ್ ವರಿಷ್ಠಾಧಿಕಾರಿಗಳಾದ ಎಸ್.ಪಿ. ಹಾಗೂ ಡಿವೈಎಸ್‍ಪಿರವರ ಸಮ್ಮುಖದಲ್ಲಿ ಸಂಘಟನೆ ಮುಖಂಡರೊಂದಿಗೆ ಸಭೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲು ಆದೇಶಿಸಿದರು.

ಈ ಪರಿಣಾಮವಾಗಿ ಹೋರಾಟವನ್ನು ಅಂತ್ಯಗೊಳಿಸಲಾಯಿತು. ಪ್ರತಿಭಟನೆಯಲ್ಲಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಸುನಂದಾ ಹೆಚ್.ಎಸ್., ಜನವಾದಿ ಮಹಿಳಾ ಸಂಘಟನೆಯ ಕಾಂ||ರೇಷ್ಮಾ, ನೌಕರರ ಸಂಘದ ರಾಜ್ಯ ಕಾರ್ಯದ್ಯಕ್ಷರಾದ ಶಾಂತ ಎನ್. ಘಂಟೆ, ಕೆಪಿಆರ್‍ಎಸ್‍ ರಾಜಾದ್ಯಕ್ಷರಾದ ಮಾರುತಿ ಮಾನ್ಪಡೆ, ಬಿಸಿಯೂಟ ನೌಕರರ ಸಂಘ ಜಿಲ್ಲಾ ಅಧ್ಯಕ್ಷರಾದ ಕಾಂ||ರೇಖಾ, ಸಿಐಟಿಯು ಜಿಲ್ಲಾಧ್ಯಕ್ಷರಾದ ಕಾಂ||ಪ್ರಭು ಮತ್ತು ನೂರಾರು ಸಂಖ್ಯೆಯ ಅಂಗನವಾಡಿ ನೌಕರರು, ಪಂಚಾಯತಿ ನೌಕರರ ಸಂಘ, ಕಟ್ಟಡ ಕಾರ್ಮಿಕರ ಸಂಘದ ಮುಖಂಡರು ಭಾಗವಹಿಸಿದ್ದರು.
 

 

 

ವರದಿ  - ಸುನಂದಾ ಹೆಚ್ .ಎಸ್.