ಸಮಾನ ವೇತನ ಮತ್ತು ಖಾಯಂಮಾತಿಗೆ ಒತ್ತಾಯಿಸಿ ಗುತ್ತಿಗೆ ಕಾರ್ಮಿಕರ ಧರಣಿ

Thursday, 22 December 2016

ತುಮಕೂರು :  ಸುಪ್ರಿಂಕೋರ್ಟ್ನ ತೀರ್ಪಿನಂತೆ ಗುತ್ತಿಗೆ, ಅರೆ ಗುತ್ತಿಗೆ, ಹೊರಗುತ್ತಿಗೆ, ಟ್ರೈನಿ, ಅಪ್ರೆಂಟಿಸ್, ಹಂಗಾಮಿ, ದಿನಗೂಲಿ ಮುಂತಾದ ಕಾರ್ಮಿಕರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ, ಖಾಯಂ ಸ್ಥಾನಮಾನಕ್ಕೆ ಶಾಸನಕ್ಕೆ ಒತ್ತಾಯಿಸಿ ಇಂದು (ಡಿಸೆಂಬರ್ 22, 2016ರಂದು) #ಸಿಐಟಿಯು ನೇತೃತ್ವದಲ್ಲಿ ತುಮಕೂರು ಜಿಲ್ಲಾಧಿಕಾರಿಗಳ ಕಛೇರಿ ಎದುರು ಪೌರಕಾರ್ಮಿಕರು, ಆಸ್ಪತ್ರೆ ಕಾರ್ಮಿಕರು, ಹಾಸ್ಟೇಲ್ ಕಾರ್ಮಿಕರು, ಬಿಎಸ್ಎನ್ಎಲ್ ಕಾರ್ಮಿಕರು, ವಿವಿಧ ಕೈಗಾರಿಕಾ ಕಾರ್ಮಿಕರು ಪ್ರತಿಭಟನಾ ಧರಣಿಯನ್ನು ನಡೆಸಿದರು.

ಪ್ರತಿಭಟನಾ ಧರಣಿಯನ್ನು ಉದ್ದೇಶಿಸಿ ಪೌರಕಾರ್ಮಿಕರ ಸಂಘದ ನಟರಾಜ್ ಮಾತನಾಡಿ ಖಾಯುಂ ಮಾಡುತ್ತೇವೆ ಎಂಬ ಆಸೆ ತೋರಿ ಹೆಚ್ಚಿಸಿರುವ ಸಂಬಂಳವನ್ನು ಎರಡು-ಮೂರು ತಿಂಗಳಿಗೊಮ್ಮೆ ನೀಡುತ್ತಿದ್ದಾರೆ ಇದರಿಂದ ಪೌರಕಾರ್ಮಿಕರು ಬದುಕು ಸಾಗಿಸುವುದು ದುಸ್ಥರವಾಗಿದೆ ಎಂದರು.

ಆಸ್ಪತ್ರೆ ಕಾರ್ಮಿಕರ ಸಂಘದ ರಂಗಮ್ಮ ಮಾತನಾಡಿ 15-18 ವರ್ಷಗಳಿಂದ ಕೆಲಸ ಮಾಡುತ್ತಿದ್ದು ಕಾನೂನು ಬದ್ದ ಸಂಬಂಳ ಖಾಯಂಮಾತಿ ಕೇಳಿದರೆ ಕೆಲಸದಿಂದ ತೆಗೆಯುವ ಕೆಲಸ ಮಾಡುತ್ತಿದ್ದಾರೆ ನಾವು ಬದುಕುವುದು ಬೇಡವೇ ಎಂದು ಪ್ರಶ್ನಿಸಿದರು.

ಬಿಎಸ್.ಎನ್.ಎಲ್ ನಾನ್  ಪರ್ಮೆನೆಂಟ್ ನೌಕರರ ಸಂಘದ ಕುಮಾರ್ ಮಾತನಾಡಿ ನೌಕರರ ಕೇಂದ್ರ ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ನಲ್ಲಿ ಗುತ್ತಿಗೆ ಕಾರ್ಮಿಕರ ಸಮಾನ ವೇತನಕ್ಕೆ ಒತ್ತಾಯಿಸಿದರು.

ಹಾಸ್ಟೇಲ್ ಕಾರ್ಮಿಕರ ಪರವಾಗಿ ಮಾತನಾಡಿದ ಮಂಜುಳವರು 12-15 ವರ್ಷಗಳಿಂದ ದುಡಿಯುತ್ತಿರುವ ಕಾರ್ಮಿಕರನ್ನು ಖಾಯಂಮಾಡದೆ ವಂಚಿಸಲಾಗುತ್ತಿದೆ. ಕೇವಲ 6-7 ಸಾವಿರ ಸಂಬಂಳ ನೀಡಲಾಗುತಿದೆ ಕಾನೂನು ಕೇಳುವವರಿಗೆ ಕೆಲಸದಿಂದ ತೆಗೆಯುವ ಬೆದರಿಕೆ ಹಾಕಲಾಗುತ್ತಿದೆ ಎಂದರು.

ಕಾರ್ಮಿಕರ ಅಹವಾಲು ಕೇಳಲು ಜಂಟಿ ಸಭೆಗೆ ಆಗ್ರಹ :

ಮನವಿ ಸ್ವೀಕರಿಸಲು ಬಂದ ಅಪರ ಜಿಲ್ಲಾಧಿಕಾರಿಗಳಾದ ಶ್ರೀಮತಿ ಅನಿತಾಲಕ್ಷ್ಮೀರವರಿಗೆ ವಿವಿಧ ಕಾರ್ಮಿಕರು ತಮ್ಮ ಸಂಕಷ್ಠಗಳನ್ನು ತೋಡಿಕೊಂಡರು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರಿಗೂ ಹಾಗೂ ಅಪರ ಜಿಲ್ಲಾಧಿಖಾರಿಗಳ ನಡುವೆ ಮಾತಿಗೆ ಮಾತು ನಡೆಯಿತು, ಸರ್ಕಾರದ ವಿವಿಧ ಇಲಾಖೆಗಳ ನಿಗಮ ಮಂಡಳಿಗಳಲ್ಲಿರುವ, ಕೈಗಾರಿಕೆಗಳಲ್ಲಿರುವ ಗುತ್ತಿಗೆ ಕಾರ್ಮಿಕರ ಅಹವಾಲುಗಳನ್ನು ಚರ್ಚಿಸಲು ಕಾರ್ಮಿಕ ಪ್ರತಿನಿಧಿಗಳ ಹಾಗೂ ಇಲಾಖೆಯ ಮುಖ್ಯಸ್ಥರ ಜಂಟಿ ಸಬೆಯೊಂದನ್ನು ಕರೆಯುವಂತೆ ಪ್ರತಿಭನಟಾಕಾರರ ಆಗ್ರಹಿಸಿದರು. ಇದಕ್ಕೆ ಒಪ್ಪಿಗೆ ಸೂಚಿಸಿದ ಅಪರ ಜಿಲ್ಲಾಧಿಖಾರಿಗಳು ಕಾರ್ಮಿಕ ಇಲಾಖೆಯ ಅಧಿಕಾರಿಗಳಿಗೆ ಈ ಜಂಟಿ ಸಭೆಯನ್ನು ವ್ಯವಸ್ಥೆಗೊಳಿಸುವಂತೆ ನಿರ್ದೇಶನ ನೀಡಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್,  ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ, ನೀರು ಸರಬರಾಜು ಕಾರ್ಮಿಕರ ಸಂಘದ ಮುಖಂಡ ಕಾಂತರಾಜು, ಮಾತನಾಡಿದರು,

ಧರಣಿಯಲ್ಲಿ ಪೌರಕಾರ್ಮಿಕರ ಸಂಘದ ನರಸಿಂಹರಾಜು, ಗೌಡ, ಸುರೇಂದ್ರ, ಪಾತಯ್ಯ, ಗೋವಿಂದರಾಜು, ಕಾಳೇಶ್ವರಿ ಕಾರ್ಮಿಕರ ಸಂಘದ ಮುತ್ತುರಾಜ್, ಸಿದ್ದಗಂಗಯ್ಯ, ಬಿಎಸ್ಎನ್ಎಲ್ ನೌಕರರ ಸಂಘದ ಅಧ್ಯಕ್ಷ ಶಶಿಧರ್, ಹಾಸ್ಟೇಲ್ ನೌಕರರ ಸಂಘದ ಯೋಗೀಶ್, ಸೇರಿದಂತೆ ಮುಂತಾದವರು ನೇತೃತ್ವವಹಿಸಿದ್ದರು.

ಸಮಾನ ಕೆಲಸಕ್ಕೆ ಸಮಾನ ವೇತನದ ಸಂಬಂಧ ಸುಪ್ರಿಂಕೋರ್ಟ್ ತೀರ್ಪು ಜಾರಿಗೊಳಿಸಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ತ್ರಿಪಕ್ಷೀಯ ಸಮಿತಿಯೊಂದನ್ನು ರಚಿಸಲು ಪ್ರತಿಭಟನಾಕಾರರು ಒತ್ತಾಯಿಸಿದರು.

 

 

ಕೃಪೆ  : ಸಯ್ಯದ್ ಮುಜೀಬ್