Error message

  • Deprecated function: Methods with the same name as their class will not be constructors in a future version of PHP; views_display has a deprecated constructor in require_once() (line 3097 of /home/janashakthi/public_html/includes/bootstrap.inc).
  • Deprecated function: Methods with the same name as their class will not be constructors in a future version of PHP; views_many_to_one_helper has a deprecated constructor in require_once() (line 113 of /home/janashakthi/public_html/sites/all/modules/ctools/ctools.module).

ಜೈಲ್ ಭರೋ : ವ್ಯಾಪಕಗೊಳ್ಳುತ್ತಿದೆ ಪ್ರಚಾರಾಂದೋಲನ

ಸಂಪುಟ: 
10
ಸಂಚಿಕೆ: 
48
Monday, 14 November 2016

ಕರ್ನಾಟಕ ಪ್ರಾಂತ ರೈತ ಸಂಘ, ಕರ್ನಾಟಕ ಪ್ರಾಂತ ಕೃಷಿ ಕಾರ್ಮಿಕರ ಸಂಘ, ಗ್ರಾಮ ಪಂಚಾಯತ್ ನೌಕರರ ಸಂಘ, ಪಟ್ಟಣ ಪಂಚಾಯತ, ಅಂಗನವಾಡಿ ನೌಕರರ ಸಂಘÀ, ಮುಂತಾದ ಸಂಘಟನೆಗಳು ಎ.ಪಿ.ಎಂ.ಸಿ ರೈತ ಸಂಘ ಕಾರ್ಯಾಲಯದಲ್ಲಿ ಜಂಟಿ ಸಭೆ ನಡೆಸಿ ನವೆಂಬರ್ 18ರ ಜೈಲ್‍ಭರೋ ಕಾರ್ಯಕ್ರಮದ ಬಗ್ಗೆ ಚರ್ಚೆ ನಡಸಿದರು. ಭೀಮಶಿ ಕಲಾದಗಿಯವರ ಅಧ್ಯಕ್ಷತೆಯಲ್ಲಿ ನವೆಂಬರ್ 08ರಂದು ನಡೆದ ಸಭೆಯು ಪ್ರಮುಖ ತೀರ್ಮಾನಗಳನ್ನು ಕೈಗೊಂಡಿತು.

ನವೆಂಬರ್ 11ರಂದು ಉಡುಪಿ ಜಿಲ್ಲೆಯ ಕರ್ನಾಟಕ ಪ್ರಾಂತ ರೈತ ಸಂಘ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಸಿಐಟಿಯು ಮುಂತಾದ 15ಕ್ಕೂ ಹೆಚ್ಚು ಸಂಘಟನೆಗಳು ಬಡವರು, ದಲಿತರ ಪರವಾಗಿ ಭೂಮಿ ಹಾಗೂ ನಿವೇಶನ ಸಹಿತ ವಸತಿ ಪ್ರಶ್ನೆಗಾಗಿ ಹೋರಾಟವನ್ನು ತೀವ್ರ ಹಾಗೂ ವ್ಯಾಪಕಗೊಳಿಸಲು ನಿರ್ಧರಿಸಲಾಯಿತು.

ಮುಖಂಡರಾದ ಕೆ. ಶಂಕರ ಮಹಾಬಲ ವಡೇರ ಹೋಬಳಿ, ವಿ. ನರಸಿಂಹ, ಸುರೇಶ ಕಲ್ಲಾಗರ, ಎಚ್. ನರಸಿಂಹ, ಯು. ದಾಸ ಭಂಡಾರಿ, ವೆಂಕಟೇಶ ಕೋಣಿ, ನಾಗರತ್ನ ನಾಡ, ಪದ್ಮಾವತಿ ಶೆಟ್ಟಿ, ರಮೇಶ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.

ನವೆಂಬರ್ 11ರಂದು ಹಮಾಲಿ ಕಾರ್ಮಿಕರ ಸಂಘಟನೆ ವತಿಯಿಂದ ತುಮಕೂರು ಜಿಲ್ಲೆಯ ಪಾವಗಡದಲ್ಲಿ ಸಮಾವೇಶ ಕೈಗೊಂಡು ವಸತಿ, ಭೂಮಿ, ನಿವೇಶನ, ಸಮಸ್ಯೆಗಳ ಕುರಿತು ಮುಖಂಡರು ಮಾತನಾಡಿದರು.

ಬಳ್ಳಾರಿ ಜಿಲ್ಲೆ ಹಗರಿಬೊಮ್ಮನಹಳ್ಳಿಯಲ್ಲಿ ನವೆಂಬರ್ 11ರಿಂದ ಚಳುವಳಿಯ ಬಗ್ಗೆ ಸಮುದಾಯದ ವತಿಯಿಂದ `ಈ ಭೂಮಿ ನಮ್ಮದು' ಎಂಬ ಬೀದಿ ನಾಟಕ ಪ್ರದರ್ಶನ ನಡೆಸುವ ಮೂಲಕ ಜನತೆಯಲ್ಲಿ ಜಾಗೃತಿ ಮೂಡಿಸಿದರು.

ನವೆಂಬರ್ 13ರಂದು ಬೆಳ್ತಂಗಡಿಯಲ್ಲಿ ಬೃಹತ್ ಸಭೆ ನಡೆಸುವ ಮೂಲಕ ಚಳುವಳಿಯ ಬಗ್ಗೆ ಪ್ರಚಾರಾಂದೋಲದ ಬಗ್ಗೆ ಚರ್ಚಿಸಲಾಯಿತು. ನವೆಂಬರ್ 15ರಂದು ಜೈಲ್‍ಭರೋ ಚಳುವಳಿಗೆ ಜೈಲಿಗೆ ಹೋಗಲು ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕಿನ ಮರಸನಹಳ್ಳಿ ಮತ್ತು ಬೊಮ್ಮಯ್ಯಗಾರಿಪಲ್ಲಿಯ ರೈತರು ತಮ್ಮ ಹೆಸರುಗಳನ್ನು ಬರೆಸುವ ಮೂಲಕ ಪ್ರಚಾರ ಕೈಗೊಂಡರು.

ಮಂಡ್ಯ ಜಿಲ್ಲೆಯಲ್ಲಿ ಆಟೋ ಪ್ರಚಾರಕ್ಕೆ ನವೆಂಬರ್ 16ರಂದು ಜಾಲನೆ ನೀಡಲಾಯಿತು. ಜನವಾದಿ ಮಹಿಳಾ ಸಂಘಟನೆ ಅಧ್ಯಕ್ಷರಾಧ ದೇವಿ, ಕಾರ್ಯದರ್ಶಿ ಸುನೀತಾ, ತಾಲ್ಲೂಕು ಕಾರ್ಯದರ್ಶಿ ಮಂಜುಳಾ, ಕೆಪಿಆರ್‍ಎಸ್ ಮುಖಂಡರಾದ ಎನ್.ಎಲ್.ಭರತ್‍ರಾಜ್, ಲಿಂಗರಾಜಮೂರ್ತಿ,

ಡಿವೈಎಫ್‍ಐ ಮುಖಂಡರಾದ ಗುರುಸ್ವಾಮಿ, ಸಿಐಟಿಯು ಮುಖಂಡರಾದ ತಿಮ್ಮೆಗೌಡ ಉಪಸ್ಥಿತರಿದ್ದರು. ಕೋಲಾರದ ವಿವಿಧ ತಾಲ್ಲೂಕು, ಗ್ರಾಮಗಳಲ್ಲಿ ಪ್ರಚಾರ ನಡೆಸುವ ಮೂಲಕ, ವಾಹನಗಳ ಮೂಲಕವೂ ರೈತರಲ್ಲಿ ಜಾಗೃತಿ ಮೂಡಿಸಿದರು. ಜೈಲ್‍ಭರೋ ಚಳುವಳಿಗಾಗಿ ವಿವಿಧ ಸಂಘಟನೆಗಳು ಹಲವು ಜಿಲ್ಲೆಗಳಲ್ಲಿ ಪ್ರಚಾರಾಂದೋಲನ, ಜಾಥಾಗಳನ್ನು ನಡೆಸಿ, ಪತ್ರಿಕಾಗೋಷ್ಟಿ ಕೈಗೊಂಡು ವ್ಯಾಪಕವಾಗಿ ಪ್ರಚಾರ ನಡೆಸಿದ್ದಾರೆ.