Error message

  • Deprecated function: Methods with the same name as their class will not be constructors in a future version of PHP; views_display has a deprecated constructor in require_once() (line 3097 of /home/janashakthi/public_html/includes/bootstrap.inc).
  • Deprecated function: Methods with the same name as their class will not be constructors in a future version of PHP; views_many_to_one_helper has a deprecated constructor in require_once() (line 113 of /home/janashakthi/public_html/sites/all/modules/ctools/ctools.module).

ಕರಾವಳಿಯ ಕೋಮುವಾದಿ ಶಕ್ತಿಗಳನ್ನು ಮಣಿಸಲು ಜಿ. ವಿ. ಶ್ರೀರಾಮರೆಡ್ಡಿ ಕರೆ

Monday, 12 December 2016

ಸೌಹಾರ್ದದ ನೆಲೆಯಾಗಿದ್ದ ಕರಾವಳಿಯಲ್ಲಿ ಕಳೆದ ಕೆಲವು ವರ್ಷಗಳಿಂದ ಕೋಮುವಾದ ತಳವೂರಿದ್ದು, ಸಂಘ ಪರಿವಾರದ ಸಂಘಟನೆಗಳು ಅದರಲ್ಲಿ ಪ್ರಧಾನ ಪಾತ್ರ ವಹಿಸಿದೆ. 1925ರಲ್ಲಿ ಆರ್‍ಎಸ್‍ಎಸ್ ಹುಟ್ಟಿದಂದಿನಿಂದ ದೇಶದಲ್ಲಿ ಕೋಮುವಾದ ತೀವ್ರವಾಗಿ ಬೆಳೆದು ಬಂದಿರುವುದು ಬಾಬ್ರಿ ಮಸೀದಿ ನಾಶದ ಚಳುವಳಿಯ ಬಳಿಕ. ಕರಾವಳಿಯು ಹಿಂದುತ್ವದ ಪ್ರಯೋಗ ಶಾಲೆಯಾಗಿದ್ದು, ಕರಾವಳಿಯಲ್ಲಿ ಲವ್‍ಜಿಹಾದ್, ಗೋರಕ್ಷಣೆ, ನೈತಿಕ ಪೊಲೀಸ್‍ಗಿರಿ ಹೆಸರಲ್ಲಿ ಅಲ್ಪಸಂಖ್ಯಾಕರು, ಮಹಿಳೆಯರ ಮೇಲೆ ದಾಳಿಗಳು ನಡೆದಿವೆ. ಕೊಲೆಗಳು ನಡೆದಿವೆ.

ಕಾಂಗ್ರೆಸ್ಸಿಗಾಗಲೀ, ಪ್ರಾದೇಶಿಕ ಪಕ್ಷಗಳಿಗಾಗಲೀ ಹಿಂದುತ್ವದ ದಾಳಿಗಳನ್ನು ತಡೆಯುವ ಶಕ್ತಿಯಿಲ್ಲ. ಏಕೆಂದರೆ ಅವುಗಳು ಅಧಿಕಾರಕ್ಕಾಗಿ ಕೋಮುವಾದಿ ಶಕ್ತಿಗಳೊಂದಿಗೆ ರಾಜಿ ಮಾಡಿಕೊಳ್ಳುತ್ತಿವೆ. ಭಾರತ ಕಮ್ಯೂನಿಸ್ಟ್ ಪಕ್ಷ (ಮಾಕ್ರ್ಸ್‍ವಾದಿ)-ಸಿಪಿಐ(ಎಂ) ಮತ್ತು ಎಡಪಕ್ಷಗಳು ಮಾತ್ರವೇ ಕೋಮುವಾದಿ ಶಕ್ತಿಗಳನ್ನು ದೇಶದಾದ್ಯಂತ ಎದುರಿಸುತ್ತಿವೆ. ಇಂತಹ ಎಡಪಕ್ಷಗಳನ್ನು ಬಲಪಡಿಸಿದಲ್ಲಿ ಮಾತ್ರ ಕೋಮುವಾದಿಗಳನ್ನು ಮಣಿಸಲು ಸಾಧ್ಯ ಎಂಬುದಾಗಿ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಜಿ. ವಿ. ಶ್ರೀರಾಮರೆಡ್ಡಿ ಕರೆ ನೀಡಿದರು.

ಅವರು ಇಂದು (ಡಿಸೆಂಬರ್ 12) ಮಂಗಳೂರಿನ ಪುರಭವನದಲ್ಲಿ ಸಿಪಿಐ(ಎಂ) ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಏರ್ಪಡಿಸಿದ್ದ ಕೋಮುವಾದದ ವಿರುದ್ಧ ಜಿಲ್ಲಾ ಸೌಹಾರ್ದ ಸಮಾವೇಶವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ಹಿಂದುತ್ವ ಕೋಮುವಾದದ ಪ್ರತಿಪಾದಕರಾದ ಆರ್‍ಎಸ್‍ಎಸ್‍ನ ಶತ್ರುಗಳು ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟೀಷರು ಆಗಿರಲಿಲ್ಲ. ಬದಲು ಅವರ ಬರಹಗಳಲ್ಲಿ ಕಂಡು ಬಂದಂತೆ ಕಮ್ಯೂನಿಸ್ಟರು, ಮುಸ್ಲಿಮರು ಮತ್ತು ಕ್ರೈಸ್ತರು ಅವರ ಶತ್ರುಗಳು. ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಮೇಲೆ ನಾಲ್ಕನೆಯದಾಗಿ ಬೌದ್ಧಿಕ ಕೇಂದ್ರಗಳಾದ ವಿಶ್ವವಿದ್ಯಾನಿಲಯಗಳನ್ನು ನಾಶಗೊಳಿಸುವ ಪ್ರಯತ್ನ ನಡೆಯುತ್ತಿದೆ. ಐದನೆಯದಾಗಿ ದಲಿತರ ಮೇಲೆ ದಾಳಿಗಳು ಹೆಚ್ಚುತ್ತಿವೆ. ಮನುಷ್ಯರ ಆಹಾರ ಹಕ್ಕಿನ ಮೇಲೆ ದಾಳಿ ನಡೆಯುತ್ತಿವೆ. ಯಾವ ಬಟ್ಟೆ ತೊಡಬೇಕು, ಯಾವ ಆಹಾರ ಉಣಬೇಕು, ಏನನ್ನು ಮಾತನಾಡಬೇಕು ಎಂದು ಸಂಘ ಪರಿವಾರದ ಸಂಘಟನೆಗಳು ನಿರ್ದೇಶನ ನೀಡುತ್ತವೆ. ವ್ಯಕ್ತಿಯ ಹಕ್ಕು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ನಡೆಯುವ ದಾಳಿಗಳು ನಮ್ಮ ಸಂವಿಧಾನದ ಮೇಲೆಯೇ ನಡೆಯುತ್ತಿರುವ ದಾಳಿಗಳಾಗಿವೆ.

ಇತ್ತೀಚೆಗೆ ಮಾಧ್ಯಮದ ಗುಂಪೊಂದು ನಡೆಸಿದ ಸ್ಟಿಂಗ್ ಕಾರ್ಯಾಚರಣೆಯಲ್ಲಿ ಸಂಘ ಪರಿವಾರದ ಕಾರ್ಯಕರ್ತರು ತಾವೇ ¯ವ್‍ಜಿಹಾದ್ ಸೃಷ್ಟಿಸಿ ದಾಳಿ ಮಾಡಿದವರೆಂದು ಹೇಳಿದ್ದು ವರದಿಯಾಗಿದೆ. ಅದೇ ರೀತಿ ಪೊಲೀಸ್ ಇಲಾಖೆಯಲ್ಲೂ ದ.ಕ ಜಿಲ್ಲೆಯಲ್ಲಿ 30% ಮಂದಿ ಹಿಂದುತ್ವವಾದಿಗಳಿದ್ದಾರೆಂದು ಹೇಳಿದ್ದೂ ವರದಿಯಾಗಿದೆ. ಈ ಕಾರಣದಿಂದಲೇ ಕೋಮುವಾದಿ ಶಕ್ತಿಗಳು ದಿಟ್ಟ, ನೇರನಡೆಯ ಅಧಿಕಾರಿಗಳನ್ನು ವರ್ಗಾವಣೆ ಮಾಡಲು ಪ್ರಯತ್ನಿಸುತ್ತಿದ್ದಾರೆಂದು ತಿಳಿದು ಬರುತ್ತದೆ. ಸಿದ್ದರಾಮಯ್ಯನವರ ಕಾಂಗ್ರೆಸ್ ಸರಕಾರ ಕೋಮುವಾದಿ ಚಟುವಟಿಕೆ ನಡೆಸಿದವರ ಮೇಲೆ ಕ್ರಮ ಕೈಗೊಳ್ಳುತ್ತಿಲ್ಲ. ಅಂತಹವರ ಚಟುವಟಿಕೆಗೆ ರಕ್ಷಣೆ ನೀಡಲಾಗುತ್ತಿದೆ. ಆದರೆ ರೈತರ, ಕೃಷಿ ಕಾರ್ಮಿಕರ ಅಖಿಲ ಭಾರತ ಜಾಥಾದ ಮೆರವಣಿಗೆಗೆ ಅವಕಾಶ ಕೊಡುತ್ತಿಲ್ಲ. ಕಾಂಗ್ರೆಸ್ ಪಕ್ಷ ಕೋಮುವಾದದ ವಿರುದ್ಧ ಅಳುಕಿ ನಡೆಯುತ್ತಿದೆ ಎಂದು ಜಿ. ವಿ. ಶ್ರೀರಾಮರೆಡ್ಡಿ ಟೀಕಿಸಿದರು.

ಜಾತ್ಯತೀತ ನಿಲುವು ಎಂದರೆ ಧರ್ಮನಿರಪೇಕ್ಷತೆ. ಅಂದರೆ ರಾಜಕಾರಣದಲ್ಲಿ ಧರ್ಮವನ್ನು ಸೇರಿಸಕೂಡದು. ಧರ್ಮ ರಾಜಕೀಯವನ್ನು ನಿಯಂತ್ರಣ ಮಾಡಬಾರದು. ಹಾಗೆ ಮಾಡಿದಲ್ಲಿ ದೇಶ ನಾಶವಾದಂತೆಯೇ ಸರಿ. ಎರಡನೆಯ ಮಹಾಯುದ್ಧ ಕಾಲದಲ್ಲಿ ಜರ್ಮನಿ ಮತ್ತು ಇಟಲಿ ದೇಶಗಳು ನಾಶವಾದುದು ಧರ್ಮ ರಾಜಕೀಯವನ್ನು ನಿಯಂತ್ರಣ ಮಾಡಿದ್ದರಿಂದ. ಕೊನೆಗೂ ಹಿಟ್ಲರ್‍ನ ಪ್ಯಾಸಿಸ್ಟ್ ಸೈನ್ಯವನ್ನು ಸೋಲಿಸಿದ್ದು ರಷ್ಯಾದ ಕೆಂಪು ಸೇನೆ. ಇವತ್ತು ಭಾರತದಲ್ಲಿಯೂ ಎಲ್ಲ ಬಗೆಯ ಕೋಮುವಾದವನ್ನು ಎದುರಿಸುತ್ತಿರುವುದು ಸಿಪಿಐ(ಎಂ) ಮತ್ತು ಎಡಪಕ್ಷಗಳು ಮಾತ್ರವೇ. ಆದುದರಿಂದ ಕೋಮುವಾದವನ್ನು ದೃಢವಾಗಿ ಎದುರಿಸಲು ಎಡಪಕ್ಷಗಳನ್ನು ಬಲಪಡಿಸಬೇಕಾಗಿದೆ ಎಂದು ಕರೆ ನೀಡಿದರು.

ಲೇಖಕಿ ಹಾಗೂ ನಿವೃತ್ತ ಪ್ರಾಂಶುಪಾಲೆ ಚಂದ್ರಕಲಾ ನಂದಾವರ ಮಾತನಾಡಿ, ಕೋಮುವಾದಿ ಶಕ್ತಿಗಳು ಶ್ರೀಮಂತ ಹಾಗೂ ಮೇಲು ವರ್ಗದವರಿಂದ ನಿರ್ದೇಶಿಸಲ್ಪಟ್ಟಿದ್ದು, ಅವರುಗಳು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುತ್ತಾ ಬಡ ದಲಿತ, ಹಿಂದುಳಿದ ಮಕ್ಕಳನ್ನು ಕೋಮುವಾದಿ ಗೂಂಡಾ ವೃತ್ತಿಗೆ ತಳ್ಳುತ್ತಿರುವ ಸಂಘಟನೆಗಳಾಗಿವೆ. ಇದಕ್ಕೆ ದುಡಿಯುವ ವರ್ಗದ ಕುಟುಂಬದ ಮಕ್ಕಳೂ ಬಲಿ ಬಿದ್ದಿದ್ದಾರೆ. ವಿದ್ಯಾಸಂಸ್ಥೆಗಳಲ್ಲಿ ಬಡವರ ಮಕ್ಕಳನ್ನೇ ಕೋಮುವಾದಿಗಳು ತಮ್ಮ ಹೋರಾಟದ ಕಾಲಾಳುಗಳಾಗಿ ಮಾಡಿದ್ದಾರೆ. ಆಗೊಮ್ಮೆ ಈಗೊಮ್ಮೆ ಅವರು ನೀಡುವ ಕೈಕಾಸಿಗೆ ಬಲಿಯಾದ ಯುವಕರು, ಕೆಲಸ ಮಾಡದೆ ವೈಭವದ ಜೀವನ ಮಾಡುವ ಕನಸು ಕಾಣುತ್ತಾ ಸಮಾಜಕ್ಕೆ ಹೊರೆಯಾಗುತ್ತಿದ್ದಾರೆ.

ಇವತ್ತು ಸಾಹಿತ್ಯಕ್ಕಾಗಿ ಸಾಹಿತ್ಯವಾಗಬಾರದು. ಜನರನ್ನು ಎಚ್ಚರಿಸುವ ಸಾಹಿತ್ಯಬೇಕು. ಬಹುಸಂಖ್ಯಾಕರ ಶಕ್ತಿಯನ್ನು ಬಳಸಬೇಕು. ಆದರೆ ಮನುಷ್ಯತ್ವವನ್ನು ಮೆರೆಯಬೇಕು. ಧಾರ್ಮಿಕತೆಯ ಸೋಗು ಹಾಕಿ ವಾಣಿಜ್ಯ ನಡೆಸುವವರನ್ನು ಬಹಿರಂಗಗೊಳಿಸಬೇಕು. ಸಹೃದಯತೆಯುಳ್ಳ ಜನರನ್ನು ಒಗ್ಗೂಡಿಸಬೇಕು ಎಂಬುದಾಗಿ ಚಂದ್ರಕಲಾ ನಂದಾವರ ಕರೆ ನೀಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ಹಿರಿಯ ಕಮ್ಯೂನಿಸ್ಟ್ ಮುಖಂಡ ಕೆ.ಆರ್.ಶ್ರೀಯಾನ್ ವಹಿಸಿದ್ದರು. ಯಾದವ ಶೆಟ್ಟಿ ಸ್ವಾಗತಿಸಿ, ಸಿಪಿಐ(ಎಂ) ದ.ಕ ಕಾರ್ಯದರ್ಶಿ ವಸಂತ ಆಚಾರಿ ವಂದಿಸಿದರು. ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಯು.ಬಿ.ಲೋಕಯ್ಯ, ಜೆ.ಬಾಲಕೃಷ್ಣ ಶೆಟ್ಟಿ, ಕೃಷ್ಣಪ್ಪ ಸಾಲಿಯಾನ್, ಸುನಿಲ್ ಕುಮಾರ್ ಬಜಾಲ್ ವೇದಿಕೆಯಲ್ಲಿದ್ದರು.