10 ತಿಂಗಳಿನಿಂದ ಸ್ಟೈಫಂಡ್ ಇಲ್ಲ

ಸಂಪುಟ: 
10
ಸಂಚಿಕೆ: 
46
Wednesday, 26 October 2016

ವೆನ್ಲಾಕ್ ಜಿಲ್ಲಾ ಆಸ್ಪತ್ರೆಯ ಆಡಳಿತಕ್ಕೊಳಪಟ್ಟ ಏಕೈಕ ಸರ್ಕಾರಿ ಶುಶ್ರೂಷ ಶಾಲೆಯ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಮಂಗಳೂರಿನಲ್ಲಿ ಅಕ್ಟೋಬರ್ 26ರಂದು ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್‍ಎಫ್‍ಐ), ನೇತೃತ್ವದಲ್ಲಿ ಮನವಿ ಸಲ್ಲಿಕೆ.

ಶಾಲೆಯಲ್ಲಿ 132 ವಿದ್ಯಾರ್ಥಿಗಳಿದ್ದಾರೆ, ಮೂಲಭೂತ ಸೌಕರ್ಯಗಳು ಇಲ್ಲ. ವಿದ್ಯಾರ್ಥಿಗಳಿಗೆ ಸರಕಾರ ನೀಡುವ ಸ್ಟೈಫಂಡ್ ಸಹ ಕಳೆದ 10 ತಿಂಗಳಿನಿಂದ ದೊರೆತ್ತಿಲ್ಲ ಮತ್ತು ವಿದ್ಯಾರ್ಥಿ ನಿಲಯವೂ ವಾರ್ಡ್‍ನ್ ಮತ್ತು ಭದ್ರತೆ ಇಲ್ಲದೆ ಹಲವು ಸಮಸ್ಯೆಗಳಿಗೆ ಗುರಿಯಾಗಿದೆ. ಖಾಲಿ ಇರುವ ಉಪನ್ಯಾಸಕರನ್ನು ಭರ್ತಿ ಮಾಡಬೇಕೆಂದು ಆಸ್ಪತ್ರೆಯ ಡಿಎಂಓ ಮತ್ತು ಅಪರ ಜಿಲ್ಲಾಧಿಕಾರಿಗಳ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರಾದ ನಿತಿನ್ ಕುತ್ತಾರ್, ಕಾರ್ಯದರ್ಶಿ ಚರಣ ಶೆಟ್ಟಿ ಭಾಷಿತ್ ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.