ಹಾಸ್ಟೆಲ್ ಗುತ್ತಿಗೆ ನೌಕರರನ್ನು ಖಾಯಂ ಮಾಡಬೇಕೆಂದು ಪ್ರತಿಭಟನೆ

ಸಂಪುಟ: 
10
ಸಂಚಿಕೆ: 
46
Monday, 24 October 2016

ಹಾವೇರಿ ಜಿಲ್ಲೆ ಶಿಗ್ಗಾಂವಿಯ ತಾಲೂಕು ಸಮಿತಿಯ ನೇತೃತ್ವದಲ್ಲಿ ಅಕ್ಟೋಬರ್ 24ರಂದು ಪ್ರತಿಭಟನಾ ರ್ಯಾಲಿ ನಡೆಸಿ  ತಹಶೀಲ್ದಾರರ ಮೂಲಕ ಹಾಸ್ಟೆಲ್ ಗುತ್ತಿಗೆ ನೌಕರರ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಹೊರಗುತ್ತಿಗೆ ನೌಕರರ ಸಂಘದ ಮುಖಂಡರಾದ ಶಾಂತಾ ಗಡ್ಡಿ ಮಾತನಾಡಿದರು. ಪ್ರತಿಭಟನಾಕಾರರು ಶಾಸಕರ ಕಛೇರಿ ಬಳಿ ತೆರಳಿ ಶಾಸಕರಾದ ಬಸವರಾಜ್ ಬೊಮ್ಮಯಿರವರಿ ಮನವಿ ಸಲ್ಲಿಸಿ ಮುಂಬರುವ ಬೆಳಗಾವಿ ಅಧಿವೇಶನದಲ್ಲಿ ಚರ್ಚಿಸಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಕಾರ್ಮಿಕರ ಹಿತರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಫಕ್ಕಿರೇಶ ಶಿಗ್ಗಾಂವಿ ಮಾತನಾಡಿದರು. ಪ್ರತಿಭಟನೆಯಲ್ಲಿ ಹೊರಗುತ್ತಿಗೆ ನೌಕರರ ಮುಖಂಡರಾದ ಎಚ್.ಎಚ್.ನದಾಫ, ಶೋಭಾ ಡೊಳ್ಳೇಶ್ವರ, ಶಶಿಕಲಾ ಜೋಗಣ್ಣವರ, ಯಶೋಧ ಹಂಜಗಿ, ಯಲ್ಲಮ್ಮ ಕೊರವರ, ಶೈಲಾ ಹರಿಜನ, ಸುಮಾ ಕುರುಬರ, ಶಾಂಯವ್ವ ಸವಣೂರ, ಕಮಲವ್ವ, ಶಂಕ್ರಮ್ಮ, ಮಂಜಣ್ಣ, ಲಲಿತವ್ವ ಹರಿಜನ, ಮಾರ್ತೇಪ್ಪ, ನಾಗರಾಜ ಉಳ್ಳಗಡ್ಡಿ, ಮಂಜುಳಾ ಭಜಂತ್ರಿ, ಮಂಜು ಹರಿಜನ, ಎಸ್‍ಎಫ್‍ಐನ ಸುಭಾಸ ಎಂ, ಜ್ಯೋತಿ ದೊಡ್ಮನಿ ಉಪಸ್ಥಿತರಿದ್ದರು.

 

ವರದಿ:  ಸುಭಾಸ ಎಂ