ನ.7-16 : ಬಸವಕಲ್ಯಾಣದಿಂದ ಬೆಳಗಾವಿ ವರೆಗೆ ಕಿಸಾನ್ ಸಂಘರ್ಷ ಜಾಥಾದ ಉಪ ಜಾಥಾ

ಸಂಪುಟ: 
10
ಸಂಚಿಕೆ: 
47
Sunday, 13 November 2016

ರೈತರ ಸಾಲ ಮನ್ನಾ, ರೈತ ಕೂಲಿಕಾರರಿಗೆ ಮಾಸಿಕ ರೂ. 3,000 ಪಿಂಚಣಿಗಾಗಿ, ರೈತರ ಬೆಳೆಗೆ ಡಾ||ಎಂ.ಎಸ್.ಸ್ವಾಮಿನಾಥನ್ ವರದಿಯಂತೆ ಬೆಲೆ ನಿಗದಿಗೊಳಿಸಲು, ಬಹುರಾಷ್ಟ್ರೀಯ ಸಂಸ್ಥೆಗಳ ಕಂಪನಿ ಕೃಷಿಯನ್ನು ವಿರೋಧಿಸಿ, ರೈತರು, ಕೃಷಿಕೂಲಿಕಾರರ ಆಧಾರಿತ ಕೃಷಿಯ ಸಂರಕ್ಷಣೆಗಾಗಿ ಹಕ್ಕುಪತ್ರಕ್ಕಾಗಿ, ಮನೆ, ನಿವೇಶನ ಮಂಜೂರಾತಿಗಾಗಿ ಇನ್ನಿತರ ರೈತಪರ ಬೇಡಿಕೆಗಳನ್ನು ಒಳಗೊಂಡ ಅಖಿಲ ಭಾರತ ಮಟ್ಟದಲ್ಲಿ ಅಖಿಲ ಭಾರತ ಕಿಸಾನ್ ಸಭಾ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಜಾಥಾದ ಅಂಗವಾಗಿ ನವೆಂಬರ್ 07ರಿಂದ 16ರವರೆಗೆ ಬಸವಕಲ್ಯಾಣದಿಂದ ಬೆಳಗಾವಿ ವರೆಗೆ ರಾಜ್ಯ ಮಟ್ಟದ ಉಪಜಾಥಾವನ್ನು ಹಮ್ಮಿಕೊಳ್ಳಲಾಗಿದೆ.

ಇದರ ಅಂಗವಾಗಿ ನವೆಂಬರ್ 7ರಂದು ಬಸವಕಲ್ಯಾಣದ ಪೂಜ್ಯ ಶ್ರೀ ಸಿದ್ಧರಾಮ ಬೆಲ್ದಾಳ ಶರಣರು ಉದ್ಘಾಟಿಸುವ ಮೂಲಕ ಜಾಲನೆ ನೀಡಿದರು. ಉದ್ಘಾಟನಾ ಸಮಾರಂಭದಲ್ಲಿ ಕೆಪಿಆರ್‍ಎಸ್ ರಾಜ್ಯಾಧ್ಯಕ್ಷರಾದ ಕಾಂ||ಮಾರುತಿ ಮಾನ್ಪಡೆ, ಧಾರವಾಡ ಜಿಲ್ಲಾಧ್ಯಕ್ಷರಾದ ಕಾ. ಬಿ.ಎಸ್.ಸೊಪ್ಪಿನ್, ಸಿಐಟಿಯು ಬೀದರ್ ಜಿಲ್ಲಾಧ್ಯಕ್ಷರಾದ ಕಾ. ಶ್ರೀದೇವಿ ಚಿವಡೆ, ಮುಖಂಡರಾದ ಭುಜಂಗರಾವ್, ರುದ್ರಮುನಿಸ್ವಾಮಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

ಬಸವಕಲ್ಯಾಣದಿಂದ ಹೊರಟ ಜಾಥಾವು ಹುಮನಾಬಾದ್‍ನಲ್ಲಿ ರೈತರು ಸ್ವಾಗತಿಸಿದರು. ರಾಜ್ಯ ಮುಖಂಡರಲ್ಲದೇ ಅಂಗನವಾಡಿ ನೌಕರರ ಸಂಘದ ಶ್ರೀಮತಿ ಸುಮಿತ್ರಾ, ಎಸ್.ಎಫ್.ಐ. ರಾಜ್ಯ ಉಪಾಧ್ಯಕ್ಷರಾದ ಬಸವರಾಜ ಪೂಜಾರ್, ಗದಗ ಜಿಲ್ಲಾ ಸಿಐಟಿಯು ಅಧ್ಯಕ್ಷರಾದ ಮಹೇಶ ಹಿರೇಮಠ, ಗ್ರಾಮ ಪಂಚಾಯತಿ ನೌಕರರ ಸಂಘದ ಮುಖಂಡರಾದ ಅಬ್ರಹಾಂ, ರೈತ ಮುಖಂಡರಾದ ಮಲ್ಲಪ್ಪ, ಶಿವಪ್ಪ ಸೇರಿದಂತೆ ಇತರರು ಹಾಜರಿದ್ದರು. 

ಅಲ್ಲಿಂದ ಮುಂದೆ ಸಾಗಿದ ಜಾಥಾವು ಚಾಂಗಲೇರ ಪ್ರದೇಶಲ್ಲಿ ಬಂದಿತು. ದಲಿತ ಕಾಲೋನಿಯಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮಾರುತಿ ಮಾನ್ಪಡೆ, ಬಿ.ಎಸ್.ಸೊಪ್ಪಿನ್, ಮಾತನಾಡಿದರು.

ಹುಮಾನಾಬಾದ್ ಕಡೆಗೆ ಸಾಗಿದ ಜಾಥವನ್ನು ಅಲ್ಲಿಯ ರೈತ ಬಂಧುಗಳು ಸ್ವಾಗತಿಸಿದರು. ನವೆಂಬರ್ 8ರಂದು ತುಮಕುಂಟಾ ಗ್ರಾಮದಲ್ಲಿ ರೈತ ಸಂಘರ್ಷ ಜಾಥಾವನ್ನು ರೈತರು ಅಭೂತಪೂರ್ವವಾಗಿ ಸ್ವಾಗತ ಕೋರಿದರು.

ನವೆಂಬರ್ 9ರಂದು ಚಿಂಚೋಳಿ, ನವೆಂಬರ್ 10ರಂದು ಕಲಬುರಗಿ ಜಿಲ್ಲೆಯ ವಿವಿಧ ತಾಲ್ಲೂಕು, ಗ್ರಾಮಗಳಿಗೆ ಜಾಥಾ ಸಂಚರಿಸಿ ಜಾಥಾದ ಮಹತ್ವದ ಬಗ್ಗೆ ರೈತರಿಗೆ ವಿವರಿಸಲಾಯಿತು

ವರದಿ : ಬಸವರಾಜ ಪೂಜಾರ್