ಕಾ||ಚನ್ನಪ್ಪ ಭವನಕ್ಕೆ ಅಡಿಗಲ್ಲು ಸಮಾರಂಭ

ಸಂಪುಟ: 
10
ಸಂಚಿಕೆ: 
46
Sunday, 6 November 2016

ತುಮಕೂರುನಲ್ಲಿ ಜನ ಚಳುವಳಿಯ ಕೇಂದ್ರವನ್ನಾಗಿ ಬಳಸಿಕೊಳ್ಳಲು ಕಾ. ಹೆಚ್.ಸಿ.ಚನ್ನಪ್ಪ ಭವನ ನಿರ್ಮಾಣಕ್ಕೆ ಅಕ್ಟೋಬರ್ 25ರಂದು ಚಾಲನೆ ನೀಡಲಾಗಿದೆ. 

ತುಮಕೂರು ಜಿಲ್ಲೆಯಲ್ಲಿ ಕಮ್ಯೂನಿಸ್ಟ್ ಚಳುವಳಿಯನ್ನು ಕಟ್ಟಿದ ಕೆ.ಆರ್.ನಾಯಕ್, ಮತ್ತು ಅವರ ಒಡನಾಡಿಗಳಾಗಿ ಶ್ರಮಿಸಿದ ಕಾರ್ಮಿಕ ನಾಯಕ ಮಹಮ್ಮದ್ ದಸ್ತಗೀರ್ ಮತ್ತು ಹೆಚ್.ಸಿ.ಚನ್ನಪ್ಪನವರು ಆದರ್ಶವಾಗಿದ್ದವರು. ದಶಕಗಳ ಕಾಲ ಕಾರ್ಮಿಕರು, ರೈತರು, ಕೃಷಿಕೂಲಿಕಾರರ ಪರವಾಗಿ ನಿರಂತವಾಗಿ ಚಳುವಳಿಯನ್ನು ಮುನ್ನಡೆಸಿದ ಕೀರ್ತಿ ಚನ್ನಪ್ಪನವರಿಗೆ ಸಲ್ಲುತ್ತದೆ.

ತುಮಕೂರಿನ ಗಾಂಧಿನಗರದ ಪ್ರದೇಶದಲ್ಲಿ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಅಡಿಗಲ್ಲು ಸಮಾರಂಭದಲ್ಲಿ ನಿವೃತ್ತ ನ್ಯಾಯಾಧೀಶರಾದ ಟಿ.ಜಿ.ಮರಿಯಪ್ಪ, ಸ್ವಾತಂತ್ರ್ಯ ಹೋರಾಟಗಾರ ಟಿ.ಆರ್.ರೇವಣ್ಣ, ವಿಜ್ಞಾನ ಲೇಖಕ ಡಾ. ಹೆಚ್.ಎಸ್.ನಿರಂಜನಾರಾಧ್ಯ, ಹಿರಿಯ ವಕೀಲ ಬಿ.ಡಿ.ರಾಮಯ್ಯ, ರಾಜೇಂದ್ರ ನಾಯಕ್, ಪ್ರೋ.ಜಿ.ಎಂ.ಶ್ರೀನಿವಾಸಯ್ಯ, ಹಿರಿಯ ಕಾರ್ಮಿಕ ಮುಖಂಡರಾದ ಕೋದಂಡರಾಮ್, ನಿವೃತ್ತ ಅಭಿಯಂತರರಾದ ಪುಟ್ಟಯ್ಯ, ಪ್ರೋ ಕೆ.ದೊರೈರಾಜ್, ಈ.ಬಸವರಾಜು, ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ, ರಾಜ್ಯ ಕಾರ್ಯದರ್ಶಿ ಕೆ.ಎನ್.ಉಮೇಶ್, ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಜಿ.ಎನ್.ನಾಗರಾಜ್, ಮತ್ತಿತರ ಮುಖಂಡರು ಮತ್ತು ಅಪಾರ ಅಭಿಮಾನಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿಐಟಿಯು ಜಿಲ್ಲಾಧ್ಯಕ್ಷರಾದ ಸೈಯದ್ ಮುಜೀಬ್ ವಹಿಸಿದ್ದರು. ಪ್ರಾಸ್ತಾವಿಕ ನುಡಿಯನ್ನು ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷರಾದ ಬಿ.ಉಮೇಶ್ ಆಡಿದರು. ಸ್ವಾಗತ ಎನ್.ಕೆ.ಸುಬ್ರಮಣ್ಯ ಮತ್ತು ವಂದನಾರ್ಪಣೆ ನೌಷಾದ್ ಸೆಹಗನ್ ಮಾಡಿದರು.