ಜಗತ್ತನ್ನು ಬದಲಿಸಬಹುದು ಎಂದು ತೋರಿದ ಅಕ್ಟೋಬರ್ ಕ್ರಾಂತಿ

ಸಂಪುಟ: 
10
ಸಂಚಿಕೆ: 
46
date: 
Sunday, 6 November 2016
Image: 

- ಸೀತಾರಾಮ್ ಯೆಚೂರಿ

ಅಕ್ಟೋಬರ್ ಕ್ರಾಂತಿ ಜಗತ್ತನ್ನು ಬದಲಿಸಲು ಸಾಧ್ಯವಿದೆ ಎಂದು ತೋರಿಸಿ ಕೊಟ್ಟಿದೆ. ಇದು ಆದರ ಚಿರಂತನ ಪ್ರಸ್ತುತತೆಯಾಗಿ ಉಳಿಯುತ್ತದೆ. ಸೋಲುಗಳೇನೇ ಇದ್ದರೂ ಅಕ್ಟೋಬರ್ ಕ್ರಾಂತಿ ಮತ್ತು ಅದರ ಕೊಡುಗೆಗಳು ಮಾನವ ನಾಗರಿಕತೆಯ ಮುನ್ನಡೆಯ ದಿಕ್ಪಥವನ್ನು ಮುಂದೆಯೂ ರೂಪಿಸುತ್ತವೆ. ಮಾನವೇತಿಹಾಸದ ಈ ಯುಗಾಂತರಕಾರೀ ಘಟನೆ ನಮ್ಮೆಲ್ಲರಿಗೆ ನಮ್ಮ ಕ್ರಾಂತಿಕಾರಿ ಹೋರಾಟಗಳಲ್ಲಿ ಸ್ಫ್ಫೂರ್ತಿಯ ಸೆಲೆಯಾಗಿಯೇ ಇರುತ್ತದೆ. ಅಕ್ಟೋಬರ್ ಕ್ರಾಂತಿಗೆ ಜಗತ್ತನ್ನು ಬದಲಿಸಲು ಸಾಧ್ಯವಾಗಿದ್ದರೆ, ಭಾರತದ ಕ್ರಾಂತಿಗೂ ಸಾಧ್ಯವಿದೆ. ಈ ಸಾಧ್ಯತೆಯನ್ನು ವಾಸ್ತವಗೊಳಿಸಲು ನಮ್ಮನ್ನು ಸಜ್ಜುಗೊಳಿಸಿಕೊಳ್ಳಬೇಕಾಗಿದೆ.

ಈ ವರ್ಷ ನವೆಂಬರ್ 7 ರಂದು ನಾವು ಅಕ್ಟೋಬರ್ ಕ್ರಾಂತಿಯ ವಿಜಯದ 100ನೇ ವರ್ಷಕ್ಕೆ ಕಾಲಿಟ್ಟಿದ್ದೇವೆ. ಈ ಘಟನೆ 20ನೇ ಶತಮಾನದಲ್ಲಿ ವಿಶ್ವ ಇತಿಹಾಸ ಹಿಡಿದ ದಾರಿಯ ಮೇಲೆ ಆಳವಾದ ಪ್ರಭಾವವನ್ನು ಬೀರಿದೆ, ಮಾನವ ನಾಗರಿಕತೆಯ ಮುನ್ನಡೆಯ ದಿಕ್ಪಥದಲ್ಲಿ ಗುಣಾತ್ಮಕ ಪಲ್ಲಟ ತಂದಿದೆ. ಈ ಯುಗ ಪರಿವರ್ತಕ ಘಟನೆ ಮಾಕ್ರ್ಸ್‍ವಾದದ ಸೃಜನಾತ್ಮಕ ವಿಜ್ಞಾನವನ್ನು ಮತ್ತು ಮಾನವ ನಾಗರಿಕತೆ ಮಾನವ ಶೋಷಣೆಯಿಂದ ಮುಕ್ತವಾದ ಒಂದು ಸಮಾಜ ವ್ಯವಸ್ಥೆಯತ್ತ ಅನಿವಾರ್ಯವಾಗಿಯೇ ಸಾಗುತ್ತದೆ ಎಂಬ ಅದರ ದೃಢ ಪ್ರತಿಪಾದನೆಯನ್ನು ಘಂಟಾಘೋಷವಾಗಿ ಎತ್ತಿ ಹಿಡಿದಿದೆ. ಅದರ ಚಿರಂತನ ಪ್ರಸ್ತುತತೆ ಇರುವುದು ಇಲ್ಲಿಯೇ.

ಕಾರ್ಲ್‍ಮಾಕ್ರ್ಸ್ ನಿಧನರಾದ ಕೂಡಲೇ 1883ರಲ್ಲಿ ಪ್ರೇಡರಿಕ್ ಏಂಗೆಲ್ಸ್ ರವರು ಕಮ್ಯೂನಿಸ್ಟ್ ಪ್ರಣಾಳಿಕೆಯ ಜರ್ಮನ್ ಆವೃತ್ತಿಗೆ ಬರೆದ ಒಂದು ಮನಕಲಕುವ ಮುನ್ನುಡಿಯಲ್ಲಿ “ಪ್ರಣಾಳಿಕೆಯಲ್ಲೆಲ್ಲ ಹರಿದಾಡುವ ಮೂಲ ಚಿಂತನೆ-ಆರ್ಥಿಕ ಉತ್ಪಾದನೆ ಮತ್ತು ಅದರಿಂದ ಮೂಡಿ ಬರುವ ಸಮಾಜದ ರಚನೆ ಪ್ರತಿಯೊಂದು ಚಾರಿತ್ರಿಕ ಕಾಲಘಟ್ಟದಲ್ಲೂ ಆ ಯುಗದ ರಾಜಕೀಯ ಮತ್ತು ಬೌದ್ಧಿಕ ಚರಿತ್ರೆ ಯ ಅಡಿಪಾಯವಾಗುತ್ತದೆ; ಅದರಿಂದಾಗಿ (ಆದಿಕಾಲದ ಸಾಮುದಾಯಿಕ ಭೂಒಡೆತನ ವಿಸರ್ಜನೆಗೊಂಡಂದಿನಿಂದ) ಎಲ್ಲ ಚರಿತ್ರೆ ವರ್ಗ ಹೋರಾಟಗಳ, ಶೋಷಿತರು ಮತ್ತು ಶೋಷಕರ ನಡುವಿನ, ಸಾಮಾಜಿಕ ಬೆಳವಣಿಗೆಯ ವಿವಿಧ ಹಂತಗಳಲ್ಲಿ ಪ್ರಾಬಲ್ಯಕ್ಕೆ ಒಳಗಾದವರು ಮತ್ತು ಪ್ರಾಬಲ್ಯ ನಡೆಸುವವರ ನಡುವಿನ ಹೋರಾಟಗಳ ಒಂದು ಚರಿತ್ರೆಯಾಗಿದೆ, ಈ ಹೋರಾಟ ಈಗ ಶೋಷಿತ ಮತ್ತು ದಮನಿತ ವರ್ಗ (ಶ್ರಮಜೀವಿ ವರ್ಗ) ಶೋಷಕ ಮತ್ತು ದಮನ ಮಾಡುವ ವರ್ಗದಿಂದ(ಬಂಡವಾಳಶಾಹಿಯಿಂದ) ತನ್ನ ವಿಮೋಚನೆ ಮಾಡಿಕೊಳ್ಳಬೇಕಾದರೆ ಅದು ಇಡೀ ಸಮಾಜವನ್ನು ಶೋಷಣೆ, ದಮನ  ಮತ್ತು ವರ್ಗ ಹೋರಾಟಗಳಿಂದ ಶಾಶ್ವತವಾಗಿ ಮುಕ್ತಗೊಳಿಸದೆ ಸಾಧ್ಯವಿಲ್ಲ ಎಂಬ ಹಂತ ತಲುಪಿದೆ. ಈ ಮೂಲ ಚಿಂತನೆ ಸಂಪೂರ್ಣವಾಗಿ ಕೇವಲ ಮಾಕ್ರ್ಸ್‍ರವರಿಗೇ ಸೇರಿದ್ದು” ಎಂದಿದ್ದರು.

ಇದನ್ನೇ ಅಕ್ಟೋಬರ್ ಕ್ರಾಂತಿ ಸಾಧಿಸಿದ್ದು. ಅಂದರೆ ‘ಇಡೀ ಸಮಾಜವನ್ನು ಶೋಷಣೆಯಿಂದ ಮುಕ್ತಗೊಳಿಸುವುದು”. ಸಹಜವಾಗಿ ಅಂತರ್ರಾಷ್ಟ್ರೀಯ ಪ್ರತಿಗಾಮಿಗಳು ಮಾಕ್ರ್ಸ್‍ವಾದದ ಮೇಲೆ ಎರಗಿದವು, ಅದರ ತೀರ್ಮಾನಗಳು ಈಡೇರದ ಕನಸೆಂದು ಹೀಗಳೆದರು. ರಷ್ಯಾ ಕ್ರಾಂತಿ ಮತ್ತು ನಂತರ ಸೋವಿಯತ್ ಒಕ್ಕೂಟದ ಸ್ಥಾಪನೆ ಮಾಕ್ರ್ಸ್‍ವಾದ ವೈಜ್ಞಾನಿಕ ಸತ್ಯವನ್ನು ಆಧರಿಸಿರುವ ಒಂದು ಸೃಜನಾತ್ಮಕ ವಿಜ್ಞಾನ ಎಂಬುದನ್ನು ಒತ್ತು ನೀಡಿ ಸ್ಥಿರೀಕರಿಸಿದೆ.

ಅಕ್ಟೋಬರ್ ಕ್ರಾಂತಿಯು ಪ್ರಾಮುಖ್ಯತೆ ಇರುವುದೇ ಇಲ್ಲಿ. ಶೋಷಣೆಯಿಲ್ಲದ ಸಾಮಾಜಿಕ ವ್ಯವಸ್ಥೆಯ ಸ್ಥಾಪನೆಯ ಗುರಿ ಈಡೇರಿಸಬಹುದಾದ್ದು ಎಂಬುದು ಮಾನವ ಸೃಜನಾತ್ಮಕತೆಯ ಇದುವರೆಗೆ ಕಾಣದ ಆಯಾಮಗಳನ್ನು ತೆರೆಯುತ್ತದೆ ಕೂಡ. ಸಮಾಜವಾದದ ದಾಪುಗಾಲಿನ ಮುನ್ನಡೆ, ಒಂದೊಮ್ಮೆ ಹಿಂದುಳಿದ ಆರ್ಥಿಕ ವ್ಯವಸ್ಥೆಯನ್ನು ಒಂದು ಬಲಿಷ್ಟವಾದ ಆರ್ಥಿಕ ಮತ್ತು ಮಿಲಿಟರಿ ಕೊತ್ತಳವಾಗಿಸಿ ಸಾಮ್ರಾಜ್ಯಶಾಹಿಯ ಎದುರು ಸೆಟೆದು ನಿಲ್ಲುವಂತೆ ಮಾಡಿದ್ದು ಸಮಾಜವಾದಿ ಪದ್ಧತಿಯ ಶ್ರೇಷ್ಟತೆಯನ್ನು ಸಾರಿದೆ. ಸೋವಿಯತ್ ಒಕ್ಕೂಟದಲ್ಲಿ ಸಮಾಜವಾದವನ್ನು ಕಟ್ಟಿದ ಬಗೆ ಮಾನವ ಪ್ರಯತ್ನದ ಒಂದು ಬೃಹತ್ ಗಾಥೆ. 

ಸಾಧನೆಗಳು

20ನೇ ಶತಮಾನದ ಚರಿತ್ರೆಯನ್ನು ಪ್ರಧಾನವಾಗಿ ಅಕ್ಟೋಬರ್ ಕ್ರಾಂತಿಯನ್ನು ಅನುಸರಿಸಿ ನಡೆದ ಸಮಾಜವಾದದ ಸ್ಥಾಪನೆ ನಿರ್ಧರಿಸಿದೆ. ಸೋವಿಯತ್ ಒಕ್ಕೂಟ ಫ್ಯಾಸಿಸ್ಟ್ ಶಕ್ತಿಗಳನ್ನು ಸೋಲಿಸುವಲ್ಲಿ ವಹಿಸಿದ ನಿರ್ಣಾಯಕ ಪಾತ್ರ’ ಮತ್ತು ತನ್ಮೂಲಕ ಪೂರ್ವ ಯೂರೋಪಿನಲ್ಲಿ ಸಮಾಜವಾದಿ ರಾಷ್ಟ್ರಗಳು ಮೂಡಿ ಬಂದದ್ದು ಪ್ರಪಂಚದ ಬೆಳವಣಿಗಳ ಮೇಲೆ ಗಾಢ ಪರಿಣಾಮವನ್ನೇ ಬೀರಿದೆ. ಎರಡನೇ ಮಹಾಯುದ್ಧದಲ್ಲಿ ಫ್ಯಾಸಿಸಂ ಮೇಲಿನ ವಿಜಯಕ್ಕೆ ಪ್ರಧಾನ ಕಾರಣ ಸೋವಿಯತ್ ಕೆಂಪು ಸೈನ್ಯ ವಹಿಸಿದ ನಿರ್ಣಾಯಕ ಪಾತ್ರ. ಇದು ವಸಾಹತುಶಾಹಿ ಶೋಷಣೆಯಿಂದ ದೇಶಗಳ ವಿಮೋಚನೆ ಮಾಡಿ ವಸಾಹತುಶಾಹಿಯ ಅಂತ್ಯದ ಪ್ರಕ್ರಿಯೆಗೆ ಪ್ರೇರಣೆ ಒದಗಿಸಿತು. ಚೀನಾ ಕ್ರಾಂತಿಯ ಚಾರಿತ್ರಿಕ ವಿಜಯ, ವಿಯೆಟ್ನಾಮೀ ಜನತೆಯ ಧೀರ ಹೋರಾಟ, ಕೊರಿಯಾದ ಜನತೆಯ ಹೋರಾಟ ಮತ್ತು ಕ್ಯೂಬಾ ಕ್ರಾಂತಿಯ ವಿಜಯ ಪ್ರಪಂಚದ ಬೆಳೆವಣಿಗೆಗಳ ಮೇಲೆ ಮಹತ್ತರ ಪಾತ್ರ ಬೀರಿವೆ.

ಸಮಾಜವಾದಿ ರಾಷ್ಟ್ರಗಳ ಸಾಧನೆಗಳು- ನಿರುದ್ಯೋಗದ ನಿರ್ಮೂಲನೆ, ಶಿಕ್ಷಣ, ಆರೋಗ್ಯ, ವಸತಿ ಮುಂತಾದ ರಂಗಗಳಲ್ಲಿ ಸಾಮಾಜಿಕ ಭದ್ರತೆಯ ವಿಶಾಲ ಜಾಲ ವ್ಯವಸ್ಥೆ-ಜಗತ್ತಿನಾದ್ಯಂತ ಎಲ್ಲಾ ದುಡಿಯುವ ಜನಗಳಿಗೂ ತಮ್ಮ ಹೋರಾಟಗಳಲ್ಲಿ ಆತ್ಮವಿಶ್ವಾಸ ಮತ್ತು ಸ್ಪೂರ್ತಿ ನೀಡಿವೆ.

ಸಮಾಜವಾದದ ಸವಾಲನ್ನು ಜಾಗತಿಕ ಬಂಡವಾಳಶಾಹಿ ಭಾಗಶಃ ಕಲ್ಯಾಣ ಕ್ರಮಗಳನ್ನು ಕೈಗೊಳ್ಳುವ ಮೂಲಕ ಮತ್ತು ಹಿಂದೆಂದೂ ದುಡಿಯುವ ಜನಗಳಿಗೆ ನೀಡಿರದಿದ್ದ ಹಕ್ಕುಗಳನ್ನು ನೀಡುವ ಮೂಲಕ ಎದುರಿಸಿತು. ಎರಡನೇಯ ಮಹಾಯುದ್ಧದ ನಂತರ ಬಂಡವಾಳಶಾಹಿ ರಾಷ್ಟ್ರಗಳಲ್ಲಿ ಇಡೀ ಕಲ್ಯಾಣ ಪ್ರಭುತ್ವದ ಪರಿಕಲ್ಪನೆ ಬಂದದ್ದು ಮತ್ತು ಸಾಮಾಜಿಕ ಭದ್ರತಾ ಜಾಲ ನಿರ್ಮಿಸಿದ್ದು ಸೋವಿಯತ್ ಒಕ್ಕೂಟದಲ್ಲಿ ಸಮಾಜವಾದದ ಸಾಧನೆಗಳಿಂದ ಸ್ಫೂರ್ತಿಗೊಂಡ ದುಡಿಯುವ ಜನಗಳ ಹೋರಾಟಗಳ ಒಂದು ಫಲಿತಾಂಶವಾಗಿಯೇ. ಇಂದು ಮಾನವ ನಾಗರಿಕತೆಯ ಅವಿಭಾಜ್ಯ ಅಂಶವೆಂದು ಪರಿಗಣಿಸಿರುವ ಪ್ರಜಾಪ್ರಭುತ್ವ ಹಕ್ಕುಗಳು ಮತ್ತು ನಾಗರೀಕ ಸ್ವಾತಂತ್ರ್ಯಗಳು ಸಾಮಾಜಿಕ ಪರಿವರ್ತನೆಗಾಗಿ ಜನಗಳ ಹೋರಾಟದ ಫಲವೇ ಹೊರತು ಬೂಜ್ರ್ವಾ ವರ್ಗ ಆಳ್ವಿಕೆಯ ದಾನವೇನಲ್ಲ.

ಈ ಕ್ರಾಂತಿಕಾರಿ ಪರಿವರ್ತನೆಗಳು ಮಾನವ ನಾಗರಿಕತೆಯಲ್ಲಿ ಗುಣಾತ್ಮಕ ನೆಗೆತಗಳನ್ನು ತಂದವು ಮತ್ತು ಆಧುನಿಕ ನಾಗರೀಕತೆಯ ಮೇಲೂ ಅಚ್ಚಳಿಯದ ಗುರುತು ಮೂಡಿಸಿವೆ. ಇದರ ಪ್ರತಿಫಲನ ಸಂಸ್ಕøತಿ, ವಿಜ್ಞಾನ, ಸೌಂದರ್ಯಶಾಸ್ತ್ರ ಮುಂತಾಗಿ ಎಲ್ಲ ರಂಗಗಳಲ್ಲೂ ಕಾಣ ಬಂದವು. ಐಸೆನ್‍ಸ್ಟೈನ್ ಸಿನಿಮಾಶಾಸ್ತ್ರದ ವ್ಯಾಕರಣದಲ್ಲಿ ಕ್ರಾಂತಿ ತಂದರೆ, ಸ್ಪೂಟ್ನಿಕ್ ಆಧುನಿಕ ವಿಜ್ಞಾನದ ಎಲ್ಲೆಗಳನ್ನು ಬಾಹ್ಯಾಕಾಶಕ್ಕೂ ವಿಸ್ತರಿಸಿತು.

ಸೋಲುಗಳು

ಇಂತಹ ಮಹತ್ತರ ಮುನ್ನಡೆಗಳು ಸಂಭವಿಸಿದರೂ, ಮತ್ತು 20ನೇ ಶತಮಾನದಲ್ಲಿ ಮಾನವ ನಾಗರಿಕತೆಯ ಮುನ್ನಡೆಯ ಮೇಲೆ ಅಚ್ಚಳಿಯದ ಪ್ರಭಾವಗಳನ್ನು ಬೀರಿದರೂ ಬಲಿಷ್ಟ ಸೋವಿಯೆತ್ ಒಕ್ಕೂಟ ವಿಘಟನೆ ಹೊಂದಿ ಅಲ್ಲಿ ಸಮಾಜವಾದ ಅಳಿಯುವಂತಾಯಿತು. ಇದಕ್ಕೆ ಕಾರಣಗಳನ್ನು ಸಿಪಿಐ(ಎಂ) ತನ್ನ 14ನೇ ಮಹಾಧಿವೇಶನದ ಸೈದ್ಧಾಂತಿಕ ನಿರ್ಣಯದಲ್ಲಿ ವಿಶ್ಲೇಷಿಸಿದೆ.

ಸಮಾಜವಾದದ ಸ್ಥಾಪನೆಯ ನಂತರ ಭವಿಷ್ಯ ಎಂಬುದು ಒಂದು ಸರಳರೇಖೆ, ಹಿಂತಿರುಗದ ನೇರ ಹಾದಿ ಎಂದು ತಪ್ಪಾಗಿ ಭಾವಿಸಲಾಗಿತ್ತು. 2ನೇ ಮಹಾಯುದ್ಧದ ನಂತರ ಪ್ರಪಂಚದ ಮೂರನೇ ಒಂದು ಜಗತ್ತು ಸಮಾಜವಾದದ ಅಡಿಯಲ್ಲಿ ಬಂದರೂ, ಬಹುತೇಕ ಈ ದೇಶಗಳು ಬಂಡವಾಳಶಾಹಿ ಅಭಿವೃದ್ಧಿಯ ದೃಷ್ಠಿಯಲ್ಲಿ ಹಿಂದುಳಿದಿದ್ದವು. ಮೂರನೇ ಎರಡು ಭಾಗ ಮುಂದುವರೆದ ಬಂಡವಾಳಶಾಹಿಯ ನೇತೃತ್ವದಲ್ಲಿಯೇ ಇದ್ದುವೆಂದರೆ ಅದರ ಅರ್ಥ ತಾನು ಕಳೆದುಕೊಂಡ ಜಗತ್ತಿನ ಮೇಲಿನ ಹತೋಟಿಯನ್ನು ಮತ್ತೆ ಪಡೆಯಲಿಕ್ಕೆ ನಿರಂತರವಾಗಿ ಪ್ರಯತ್ನಿಸುತ್ತಿದ್ದ ವಿಶ್ವ ಬಂಡವಾಳಶಾಹಿಯಿಂದ ವಿಶ್ವ ಸಮಾಜವಾದ ಇನ್ನೂ ಸುತ್ತುವರೆಯಲ್ಪಟ್ಟಿತ್ತು ಎಂದೇ ಆಗಿತ್ತು.

ಸಮಾಜವಾದ ಬಂಡವಾಳಶಾಹಿಯನ್ನು ಕಿ ತ್ತೊಗೆದರೂ ಅದೊಂದು ವರ್ಗಶೋಷಣೆ ಆ ಧಾರಿತ ಬಂಡವಾಳಶಾಹಿಯಿಂದ ಸಮತಾವಾದದ ವರ್ಗವಿಹೀನ ಸಮಾಜದತ್ತ ಚಲನೆಯಲ್ಲಿ ಸಂಕ್ರಮಣದ ಘಟ್ಟ ಮಾತ್ರ. ಆದ್ದರಿಂದ ಸಮಾಜವಾದದತ್ತ ಸಂಕ್ರಮಣದ ಈ ಅವಧಿ ತೀವ್ರಗೊಂಡ ವರ್ಗ ಹೋರಾಟಗಳ ರಂಗಭೂಮಿ- ಒಂದೆಡೆಯಲ್ಲಿ ಬಂಡವಾಳಶಾಹಿ ಸಮಾಜವಾದವನ್ನು ಕಿತ್ತೊಗೆಯುವ ಪ್ರಯತ್ನ ಮಾಡುತ್ತಿದ್ದರೆ, ಸಮಾಜವಾದ ತನ್ನನ್ನು ಕ್ರೋಢೀಕರಿಸಿಕೊಂಡು ಜಾಗತಿಕವಾಗಿ ಬಂಡವಾಳದ ಆಳ್ವಿಕೆಯ ಮೇಲೆ ಹೆಚ್ಚೆಚ್ಚು ಪ್ರಹಾರ ನಡೆಸುವ ಪ್ರಯತ್ನ ನಡೆಸುತ್ತದೆ. ಆದ್ದರಿಂದ ಈ ಸಂಕ್ರಮಣ ಕಾಲಘಟ್ಟದಲ್ಲಿ ವರ್ಗಶಕ್ತಿಗಳ ಬಲಾಬಲ ಸಮಾಜವಾದೀ ಕ್ರೋಡೀಕರಣದ ಯಶಸ್ಸುಗಳನ್ನು ಅವಲಂಬಿಸಿ ವ್ಯತ್ಯಸ್ಥಗೊಳ್ಳಬಹುದು.

ವರ್ಗಶಕ್ತಿಗಳ ಬಲಾಬಲಗಳ ಅಂದಾಜುಗಳಲ್ಲಿ ತಪ್ಪುಗಳಿದ್ದರೆ, ಅದು ಸಹಜವಾಗಿಯೇ ಸಮಾಜವಾದದತ್ತ ಮುನ್ನಡೆಯ ಸ್ವರೂಪವನ್ನು ಬಾಧಿಸಬಹುದು. ಫ್ಯಾಸಿಸಂ ಪತನ ಮತ್ತು ಮೇಲೆ ಹೇಳಿದ ಇತರ ಸಮಾಜವಾದಿ ಕ್ರಾಂತಿಗಳಿಂದಾಗಿ ಉಂಟಾದ  ತಪ್ಪು ಅಂದಾಜಿನಿಂದ ಸಮಾಜವಾದದ ಶಕ್ತಿಯನ್ನು ಉತ್ಪ್ರೇಕ್ಷಿಸಿ, ಬಂಡವಾಳಶಾಹಿಯ ಶಕ್ತಿಯನ್ನು, ಸಾಮಥ್ರ್ಯವನ್ನು ನಿರ್ಲಕ್ಷಿಸುವ ತಪ್ಪು ಪ್ರವೃತ್ತಿ ಕಾಣ ಬಂತು. ಮುಂದುವರೆದ ಬಂಡವಾಳಶಾಹಿ ದೇಶಗಳೊಂದಿಗೆ ಮೂರನೇ ಎರಡು ಜಗತ್ತಿನಲ್ಲಿ ಬಂಡವಾಳಶಾಹಿ ಉಳಿದುಕೊಂಡಿದೆ ಎಂದರೆ ಉತ್ಪಾದನಾ ಶಕ್ತಿಗಳ ಮೇಲೆ ಅವರ ನಿಯಂತ್ರಣ ಇನ್ನೂ ಉಳಿದಿದೆ ಎಂದೇ ಅರ್ಥ. ಬದಲಾದ ಜಾಗತಿಕ ವ್ಯವಸ್ಥೆಗೆ ತನ್ನನ್ನು ಹೊಂದಿಸಿಕೊಂಡು ಬಂಡವಾಳಶಾಹಿ ತನ್ನನ್ನು ಹೆಚ್ಚು ಹೆಚ್ಚಾಗಿ ಕ್ರೋಡೀಕರಿಸಿಕೊಂಡಿತ್ತು, ಇನ್ನೊಂದೆಡೆಯಲ್ಲಿ ಸಮಾಜವಾದದ ವಿರುದ್ಧ ಒಂದು ಅವಿರತ ಮಿಲಿಟರಿ, ರಾಜಕೀಯ ಮತ್ತು ಆರ್ಥಿಕ ದಾಳಿಯನ್ನು ನಡೆಸುತ್ತ ಸಮಾಜವಾದದ ವಿರುದ್ಧ ಪ್ರಚಾರವನ್ನು ಮುಂದುವರೆಸಿತು. ಈ ಎರಡನೇ ಮಹಾಯುದ್ಧದ ನಂತರದ ಅವಧಿಯನ್ನು ಸಾಮಾನ್ಯವಾಗಿ ಜಾಗತಿಕ ಎರಡು ಧ್ರುವಗಳ ಶೀತಲ ಯುದ್ಧ ಎಂದು ಹೇಳಲಾಗುತ್ತದೆ.

ಸೋವಿಯತ್ ಒಕ್ಕೂಟ ಮತ್ತು ಜಾಗತಿಕ ಸಮಾಜವಾದ ಸಾಮ್ರಾಜ್ಯಶಾಹಿಯ ಸವಾಲನ್ನು ಎದುರಿಸಿದರೂ ಅದರ ಆಂತರಿಕ ಶಕ್ತಿ ಕೆಲವು ತಪ್ಪುಗಳಿಂದ ಮತ್ತು ಸೋವಿಯತ್ ಒಕ್ಕೂಟದಲ್ಲಿ ಸಮಾಜವಾದಿ ನಿರ್ಮಾಣದ ಪ್ರಕ್ರಿಯೆಯಲ್ಲಿನ ನ್ಯೂನ್ಯತೆಗಳಿಂದಾಗಿ ದುರ್ಬಲಗೊಂಡಿತು. ಹಿಂದಿರುಗಿ ನೋಡಿದಾಗ ಮೂಲತಃ ನಾಲ್ಕು ರಂಗಗಳಲ್ಲಿ ಪ್ರಮುಖ ನ್ಯೂನ್ಯತೆಗಳನ್ನು ಕಾಣಬಹುದು. ಸಮಾಜವಾದ ಹಿಂದೆ ಯಾರೂ ಸಾಗದ ಮಾನವ ಮುನ್ನಡೆಯ ಹಾದಿಯಲ್ಲಿ ಸಾಗಬೇಕಾಗಿತ್ತು ಎಂಬುದನ್ನು ಇಲ್ಲಿ ಒತ್ತಿ ಹೇಳಬೇಕಾಗುತ್ತದೆ. ಸಮಾಜವಾದಿ ರಚನೆಯ ನೀಲನಕ್ಷೆಗಳಿರಲಿಲ್ಲ, ಅಥವ ನಿರ್ದಿಷ್ಟ ಸೂತ್ರಗಳು ಇರಲಿಲ್ಲ. 

ಈ ನ್ಯೂನತೆಗಳು, ಸಿಪಿಐ(ಎಂ) 14ನೇ ಮಹಾಧಿವೇಶನದಲ್ಲಿ ವಿಶ್ಲೇಷಿಸಿದಂತೆ, ಸಮಾಜವಾದಿ ಪ್ರಭುತ್ವದ ವರ್ಗ ಚಾರಿತ್ರ್ಯ, ಸಮಾಜವಾದಿ ಪ್ರಜಾಪ್ರಭುತ್ವದ ಸ್ಥಾಪನೆ, ಮತ್ತು ಸಮಾಜವಾದದ ಅಡಿಯಲ್ಲಿ ಜನತೆಯ ಸೈದ್ಧಾಂತಿಕ ಸಾಮಾಜಿಕ ಪ್ರಜ್ಞೆಯನ್ನು ಬೆಳೆಸುವಲ್ಲಿನ ಉಪೇಕ್ಷೆ-ಈ ಅಂಶಗಳಲ್ಲಿ ಕಂಡು ಬಂದವು. (ಒಂದು ವಿವರವಾದ ವಿಶ್ಲೇಷಣೆ 14ನೇ ಮಹಾಧಿವೇಶನದ ನಿರ್ಣಯದಲ್ಲಿ ಇದೆ).

ಆದ್ದರಿಂದ ಸಮಾಜವಾದಕ್ಕೆ ಈ ಸೋಲುಗಳು ಉಂಟಾಗಿರುವುದು ಮಾಕ್ರ್ಸ್‍ವಾದ-ಲೆನಿನ್‍ವಾದದ ಕ್ರಾಂತಿಕಾರಿ ತತ್ವಗಳಲ್ಲಿನ ಯಾವುದೇ ಅಸಮರ್ಪಕತೆಯಿಂದ ಅಲ್ಲ ಎಂಬ ತೀರ್ಮಾನಕ್ಕೆ ಖಂಡಿತವಾಗಿ ಬರಬಹುದು. ಬದಲಾಗಿ, ಅವು ಉಂಟಾಗಿರುವುದು ಪ್ರಥಮತಃ ಮಾಕ್ರ್ಸ್‍ವಾದ-ಲೆನಿನ್‍ವಾದದ ವೈಜ್ಞಾನಿಕ ಮತ್ತು ಕ್ರಾಂತಿಕಾರಿ ಚಿಂತನೆಯಿಂದ ದೂರ ಸರಿದ  ಕಾರಣದಿಂದಾಗಿಯೇ. ಆದ್ದರಿಂದ ಈ ಸೋಲುಗಳು ಮಾಕ್ರ್ಸ್‍ವಾದ-ಲೆನಿನ್‍ವಾದದ ಅಥವಾ ಸಮಾಜವಾದಿ ಆದರ್ಶದ ನಿರಾಕರಣೆ ಅಲ್ಲ.

ಪ್ರಸಕ್ತ ಬಂಡವಾಳಶಾಹಿ ಬಿಕ್ಕಟ್ಟು ಮತ್ತು ಸಮಾಜವಾದಿ ಪರ್ಯಾಯ

ಸಮಾಜವಾದಿ ಆದರ್ಶ ಇನ್ನೂ ಇಂದಿನ ಜಾಗತಿಕ ಬಂಡವಾಳಶಾಹಿ ಬಿಕ್ಕಟ್ಟಿನ ಪರಿಸ್ಥಿತಿಗಳಲ್ಲಿ ಮನುಕುಲ ತನ್ನನ್ನು ಶೋಷಣೆಯಿಂದ ವಿಮೋಚಿಸಿಕೊಳ್ಳುವ ಏಕೈಕ ವಿಧಾನವಾಗಿಯೇ ಉಳಿದಿದೆ. 2008ರಲ್ಲಿ ಜಾಗತಿಕ ಹಣಕಾಸು ಕುಸಿತ ಕಂಡಂದಿನಿಂದ ಜಾಗತಿಕ ಬಂಡವಾಳಶಾಹಿ ಒಂದು ಬಿಕ್ಕಟ್ಟಿನಿಂದ ಇನ್ನೊಂದು ಬಿಕ್ಕಟ್ಟಿನ ಆಳಕ್ಕೆ ಬೀಳುತ್ತಲೇ ಇದೆ. ಬಿಕ್ಕಟ್ಟನ್ನು ಮೀರಿ ನಿಲ್ಲುವ ಅದರ ಪ್ರತಿಯೊಂದು ನಡೆಯೂ ಮತ್ತೊಂದು ಇನ್ನಷ್ಟು ಆಳವಾದ ಬಿಕ್ಕಟ್ಟಿನ ಬೀಜವನ್ನು ಹಾಕುತ್ತಿದೆ.  ತೀವ್ರಗೊಂಡ ಬಂಡವಾಳಶಾಹಿ ಶೋಷಣೆಯ ಮೂಲಕ ಜನಗಳ ಮೇಲೆ ಹಿಂದೆಂದೂ ಕಾಣದ ಆರ್ಥಿಕ ಹೊರೆಗಳ ಹೇರಿಕೆ, ಅದರಿಂದಾಗಿ ಹೆಚ್ಚುತ್ತಿರುವ ಆರ್ಥಿಕ ಅಸಮಾನತೆಗಳ ಕಂದರ ಮತ್ತು ಜಗತ್ತಿನ ಜನಸಂಖ್ಯೆಯ ಬಹುಪಾಲು ವಿಭಾಗಗಳು ದಾರಿದ್ರ್ಯದ ಕೂಪಕ್ಕೆ ತಳ್ಳಲ್ಪಡುತ್ತಿರುವುದನ್ನು ನೋಡಿದರೆ ಬಂಡವಾಳಶಾಹಿಯ ಸುಲಿಗೆಕೋರ ಪ್ರವೃತ್ತಿ ಹೆಚ್ಚು ನಗ್ನವಾದ ಸ್ವರೂಪ ಪಡೆಯುತ್ತಿದೆ ಎಂಬುದು ಹೆಚ್ಚೆಚ್ಚು ಸ್ಪಷ್ಟವಾಗುತ್ತಿದೆ. ಬಂಡವಾಳಶಾಹಿಯ ಒಳಗೆ ಎಷ್ಟೇ ಸುಧಾರಣೆಗಳನ್ನು ತಂದರೂ ಮನುಕುಲವನ್ನು ಇಂತಹ ಶೋಷಣೆಯ ಕಪಿಮುಷ್ಟಿಯಿಂದ ವಿಮೋಚಿಸಲು ಸಾಧ್ಯವಾಗದು. ಸಮಾಜವಾದದ ರಾಜಕೀಯ ಪರ್ಯಾಯ ಮಾತ್ರವೇ ಈ ಉದ್ದೇಶವನ್ನು ಈಡೇರಿಸಬಲ್ಲದು. ಅಂತಿಮವಾಗಿ ಶೋಷಣೆಯಿಂದ ಮಾನವ ವಿಮೋಚನೆಯಾಗಬೇಕಾದರೆ ಬಂಡವಾಳದ ಆಳ್ವಿಕೆಯ ಮೇಲೆ ಸಮಾಜವಾದದ ಈ ರಾಜಕೀಯ ಪರ್ಯಾಯದ ಪ್ರಹಾರವನ್ನು ತೀವ್ರಗೊಳಿಸಲೇ ಬೇಕಾಗಿದೆ.

ಬಿಕ್ಕಟ್ಟು ಎಷ್ಟೇ ತೀವ್ರವಾಗಿರಲಿ, ಬಂಡವಾಳಶಾಹಿ ಎಂದೂ ತಂತಾನೇ ಕುಸಿಯುವುದಿಲ್ಲ. ಬಂಡವಾಳಶಾಹಿಗೆ ಸವಾಲು ಹಾಕಲು ಒಂದು ರಾಜಕೀಯ ಪರ್ಯಾಯ ಬೆಳೆಯದಿದ್ದರೆ, ಅದು ಮಾನವ ಶೋಷಣೆಯನ್ನು ತೀವ್ರಗೊಳಿಸುವ ಮೂಲಕವೇ ಬದುಕುಳಿಯುತ್ತದೆ. ಆದ್ದರಿಂದ ಸಮಾಜವಾದಿ ರಾಜಕೀಯ ಪರ್ಯಾಯದ ಶಕ್ತಿ ವ್ಯಾಪಕವಾಗಿ ವೃದ್ಧಿಯಾಗಬೇಕು. ಬಂಡವಾಳಶಾಹಿ ಕೊಳ್ಳೆಯ ಪ್ರಸಕ್ತ ಸುಲಿಗೆಕೋರ ಅಭಿವ್ಯಕ್ತಿ ಮತ್ತು ಅದರೊಂದಿಗೆ ಬರುವ ಸಾಮ್ರಾಜ್ಯಶಾಹಿ ಯಜಮಾನಿಕೆಯ ಆಕ್ರಮಣಕೋರತನದ ವಿರುದ್ಧ ಜಗತ್ತಿನ ಎಲ್ಲೆಡೆಗಳಲ್ಲಿ ಹೋರಾಟಗಳು ಬೆಳೆಯುತ್ತಿದ್ದರೂ, ಅವು ಇನ್ನೂ ರಕ್ಷಣಾತ್ಮಕವಾಗಿಯೇ ಉಳಿದಿವೆ. ರಕ್ಷಣಾತ್ಮಕ ಎಂದರೆ ಜನತೆ ತಮ್ಮ ಈಗಿರುವ ಪ್ರಜಾಪ್ರಭುತ್ವ ಹಕ್ಕುಗಳ ಮತ್ತು ಮತ್ತು ದೈನಂದಿನ ಬದುಕಿನ ರಕ್ಷಣೆಗಾಗಿಯೇ ಹೋರಾಟದಲ್ಲಿ ತೊಡಗಬೇಕಾಗಿದೆ. ಇಂತಹ ಹೋರಾಟಗಳು ಶೇಖರಗೊಂಡು ಬಂಡವಾಳದ ಆಳ್ವಿಕೆಯ ವಿರುದ್ಧ ವರ್ಗ ಪ್ರಹಾರ ಮಾಡುವ ಮಟ್ಟಗಳನ್ನು ತಲುಪಬೇಕಾಗಿದೆ. ಇದಕ್ಕೆ, ನಾವು 20ನೇ ಮಹಾಧಿವೇಶನದ ಸೈದ್ಧಾಂತಿಕ ನಿರ್ಣಯದಲ್ಲಿ ವಿಶ್ಲೇಷಿಸಿದಂತೆ, ಲೆನಿನ್‍ವಾದಿ ಕರ್ತೃ ಅಂಶ ಬಲಗೊಳ್ಳಬೇಕು, ಅಂದರೆ ಜನರ ಹೋರಾಟಗಳು ಮತ್ತು ಚಳುವಳಿಗಳನ್ನು ಒಟ್ಟುಗೂಡಿಸಿ ಆಯಾಯ ದೇಶದಲ್ಲಿ ಬಂಡವಾಳದ ವಿರುದ್ಧ ಇಂತಹ ಒಂದು ನಿರ್ಣಾಯಕ ಪ್ರಹಾರ ಮಾಡಬಲ್ಲ ಕ್ರಾಂತಿಕಾರಿ ಪಕ್ಷದ ಸಾಮಥ್ರ್ಯ ಬಲಗೊಳ್ಳಬೇಕು.

ಸಿಪಿಐ(ಎಂ) ಇಂದು ಈ ಕಾರ್ಯದಲ್ಲಿಯೇ ತೊಡಗಿದೆ. ನಮ್ಮ 21ನೇ ಮಹಾಧಿವೇಶನ ಮತ್ತು ಸಂಘಟನಾ ಪ್ಲೀನಂ ಭಾರತದ ಪರಿಸ್ಥಿತಿಗಳಲ್ಲಿ ಈ ಕರ್ತೃ ಅಂಶವನ್ನು ಬಲಪಡಿಸುವ ಈ ಉದ್ದೇಶ ಸಾಧನೆಯ ಮೇಲೆ ಗಮನ ಕೇಂದ್ರೀಕರಿಸಿವೆ.

ಭಾರತೀಯ ಪರಿಸ್ಥಿತಿಗಳಲ್ಲಿ ಸಮಾಜವಾದ

ಭಾರತದಲ್ಲಿ ಸಮಾಜವಾದ ಎಂದರೇನು ಎಂಬುದನ್ನು ಭಾರತೀಯ ಕ್ರಾಂತಿಯ ಪ್ರಜಾಸತ್ತಾತ್ಮಕ ಘಟ್ಟವನ್ನು, ಅಂದರೆ ಜನತಾ ಪ್ರಜಾಪ್ರಭುತ್ವ ಕ್ರಾಂತಿಯನ್ನು ಪೂರ್ಣಗೊಳಿಸಿದ ಮೇಲೆಯೇ ಮೂರ್ತಗೊಳಿಸಲು ಸಾಧ್ಯ.

ಆದರೂ, ಸಮಾಜವಾದದ ಅಡಿಯಲ್ಲಿ ಎಲ್ಲ ಮಾನವ ಜೀವಿಗಳ ಸಾಮಥ್ರ್ಯವನ್ನು ಪೂರ್ಣವಾಗಿ ಈಡೇರಿಸಲು ಯಾವುದು ಆಧಾರವಾಗ ಬಲ್ಲದು ಎಂಬುದನ್ನು ನಾವು ನಿರೀಕ್ಷಿಸಲು ಸಾಧ್ಯವಿದೆ. ಆದ್ದರಿಂದ, ಭಾರತದಲ್ಲಿ ಸಮಾಜವಾದ ಎಂದರೆ ಏನರ್ಥ?

ಅದರ ಅರ್ಥ ಎಲ್ಲ ಜನತೆಗೆ ಆಹಾರ ಭದ್ರತೆ, ಪೂರ್ಣ ಉದ್ಯೋಗ, ಶಿಕ್ಷಣ, ಆರೋಗ್ಯ ಮತ್ತು ವಸತಿಯ ಸಾರ್ವತ್ರಿಕ ಲಭ್ಯತೆ. ಅದರ ಅರ್ಥ ಕಾರ್ಮಿಕರು, ರೈತರು ಮತ್ತು ಇದುವರೆಗೆ ಅಂಚಿಗೆ ತಲ್ಲಲ್ಪಟ್ಟ ಜನವಿಭಾಗಗಳ ಬದುಕಿನ ಪರಿಸ್ಥಿತಿಗಳನ್ನು ವ್ಯಾಪಕ ರೀತಿಯಲ್ಲಿ ಉತ್ತಮ ಪಡಿಸಿ ಜನತೆಯ ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕ ಸಬಲೀಕರಣ. 

ಅದರ ಅರ್ಥ ಎಲ್ಲಕ್ಕೂ ಮೊದಲು, ಎಲ್ಲಕ್ಕಿಂತ ಮುಖ್ಯವಾಗಿ, ಜನತಾ ಶಕ್ತಿಯ ಪಾರಮ್ಯ. ಅಂದರೆ ಪ್ರಜಾಪ್ರಭುತ್ವ, ಪ್ರಜಾಸತ್ತಾತ್ಮಕ ಹಕ್ಕುಗಳು ಮತ್ತು ನಾಗರಿಕ ಸ್ವಾತಂತ್ರ್ಯಗಳು ಸಮಾಜವಾದಿ ನ್ಯಾಯಿಕ, ರಾಜಕೀಯ ಮತ್ತು ಸಾಮಾಜಿಕ ವ್ಯವಸ್ಥೆಯ ಅವಿಭಾಜ್ಯ ಅಂಶಗಳಾಗಿರುತ್ತವೆ. ಬಂಡವಾಳಶಾಹಿ ಪ್ರಜಾಪ್ರಭುತ್ವದಲ್ಲಿ ಭ್ರಾಮಕವಾದ ಔಪಚಾರಿಕ ಹಕ್ಕುಗಳು ಇರಬಹುದು, ಆದರೆ ಬಹುಪಾಲು ಜನತೆಗೆ ಆ ಹಕ್ಕುಗಳನ್ನು ಚಲಾಯಿಸುವ ಸಾಮಥ್ರ್ಯವನ್ನು ನಿರಾಕರಿಸಲಾಗಿದೆ. ಸಮಾಜವಾದದ ಅಡಿಯಲ್ಲಿ ಪ್ರಜಾಪ್ರಭುತ್ವ ಎಂಬುದು ಎಲ್ಲ ಜನತೆಯ ಆರ್ಥಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಸಬಲೀಕರಣದ ಮೇಲೆ ನಿಂತಿರುತ್ತದೆ. ಇದು ಮಾನವ ಬದುಕಿನ ಗುಣಮಟ್ಟವನ್ನು ಸತತವಾಗಿ ಆಳಗೊಳಿಸಲು ಮತ್ತು ಬೆಳೆಸಲಿಕ್ಕೆ ಮೂಲಭೂತ ಮತ್ತು ಅನಿವಾರ್ಯ ಆವಶ್ಯಕತೆ. ಈ ಬುನಾದಿಯ ಮೇಲೆಯೇ ಸಮಾಜವಾದಿ ಪಜಾಪ್ರಭುತ್ವ ಅರಳಲು ಸಾಧ್ಯ. ಸಮಾಜವಾದದ ಅಡಿಯಲ್ಲಿ ಭಿನ್ನಮತದ, ಅಭಿವ್ಯಕ್ತಿ ಸ್ವಾತಂತ್ರ್ಯದ ಮತ್ತು ಅಭಿಪ್ರಾಯಗಳ ಬಹುಳತೆಯ ಹಕ್ಕು ಶ್ರಮಜೀವಿಗಳ ಪ್ರಭುತ್ವದ ಅಡಿಯಲ್ಲಿ ಸಮಾಜವಾದವನ್ನು ಬಲಪಡಿಸುವ ಗುರಿಯೊಂದಿಗೆ ಸಮೃದ್ಧಗೊಳ್ಳುತ್ತದೆ.

ಇದರ ಅರ್ಥ ಸಮಾಜವಾದಿ ಆರ್ಥಿಕ ರಚನಾ ಕಾರ್ಯ ಸಮಾಜೀಕೃತ ಉತ್ಪಾದನಾ ಸಾಧನಗಳು ಮತ್ತು ಕೇಂದ್ರೀಯ ಯೋಜನಾ ವ್ಯವಸ್ಥೆಯ ಮೇಲೆ ಆಧಾರಿತವಾಗಿರುತ್ತದೆ. ಸರಕುಗಳ ಉತ್ಪಾದನೆ ಇರುವ ವರೆಗೆ ಮಾರುಕಟ್ಟೆ ಇದ್ದೇ ಇರುತ್ತದೆ. ಆದರೆ, ಮಾರುಕಟ್ಟೆ ಶಕ್ತಿಗಳು ಕೇಂದ್ರೀಯ ಯೋಜನಾ ವ್ಯವಸ್ಥೆಯ ಮಾರ್ಗದರ್ಶನದ ಅಡಿಯಲ್ಲಿ ಸಮಾವೇಶಿತವಾಗಿರುತ್ತವೆ. ವಿವಿಧ ಸ್ವರೂಪಗಳ ಆಸ್ತಿಗಳು ಒಟ್ಟಿಗೇ ಇರುತ್ತವಾದರೂ, ಉತ್ಪಾದನಾ ಸಾಧನಗಳ ಸಾಮಾಜಿಕ ಒಡೆತನದ ಸ್ವರೂಪವೇ ನಿರ್ಣಾಯಕವಾಗಿರುತ್ತದೆ. ಇದು ಕೇವಲ ಪ್ರಭುತ್ವದ ಒಡೆತನದ ಸಾರ್ವಜನಿಕ ವಲಯದ ಸ್ವರೂಪದಲ್ಲಷ್ಟೇ ಇರಬೇಕೆಂದೇನಿಲ್ಲ. ಸಾರ್ವಜನಿಕ ವಲಯ ಒಂದು ಮಹತ್ವದ ಪಾತ್ರ ವಹಿಸುತ್ತದಾದರೂ, ಸಾಮೂಹಿಕ ಮತ್ತು ಸಹಕಾರಿ ಒಡೆತನದಂತಹ ಸ್ವರೂಪಗಳು ಮತ್ತು ಆರ್ಥಿಕ ಜೀವನರೇಖೆಯನ್ನು ನಿಯಂತ್ರಿಸುವ ಆರ್ಥಿಕ ಧೋರಣೆಗಳ ಮೇಲೆ ಪ್ರಭುತ್ವದ ಹತೋಟಿ ಅನಿವಾರ್ಯವಾಗಿ ಜತೆಜತೆಯಾಗಿಯೇ ಇರುತ್ತವೆ. (20ನೇ ಮಹಾಧಿವೇಶನದ ‘ಕೆಲವು ಸೈದ್ಧಾಂತಿಕ ಪ್ರಶ್ನೆಗಳ ಮೇಲಿನ ನಿರ್ಣಯ’) 

ಜಗತ್ತನ್ನು ಬದಲಿಸಬಹುದು

“ತತ್ವಜ್ಞಾನಿಗಳು ಜಗತ್ತನ್ನು ವಿವಿಧ ರೀತಿಗಳಲ್ಲಿ ವ್ಯಾಖ್ಯಿಸಿದ್ದಾರಷ್ಟೇ. ಆದರೆ ಮುಖ್ಯ ಅಂಶವೆಂದರೆ ಅದನ್ನು ಬದಲಿಸುವುದು” ಎಂಬುದು ಕಾರ್ಲ್ ಮಾಕ್ರ್ಸ್‍ರವರ ಒಂದು ಪ್ರಖ್ಯಾತ ನುಡಿ. ಅಕ್ಟೋಬರ್ ಕ್ರಾಂತಿ ಜಗತ್ತನ್ನು ಬದಲಿಸಲು ಸಾಧ್ಯವಿದೆ ಎಂದು ತೋರಿಸಿ ಕೊಟ್ಟಿದೆ. ಇದು ಆದರ ಚಿರಂತನ ಪ್ರಸ್ತುತತೆಯಾಗಿ ಉಳಿಯುತ್ತದೆ. ಸೋಲುಗಳೇನೇ ಇದ್ದರೂ ಅಕ್ಟೋಬರ್ ಕ್ರಾಂತಿ ಮತ್ತು ಅದರ ಕೊಡುಗೆಗಳು ಮಾನವ ನಾಗರಿಕತೆಯ ಮುನ್ನಡೆಯ ದಿಕ್ಪಥವನ್ನು ಮುಂದೆಯೂ ರೂಪಿಸುತ್ತ್ತವೆ. ಮಾನವೇತಿಹಾಸದ ಈ ಯುಗಾಂತರಕಾರೀ ಘಟನೆ ನಮ್ಮೆಲ್ಲರಿಗೆ ನಮ್ಮ ಕ್ರಾಂತಿಕಾರಿ ಹೋರಾಟಗಳಲ್ಲಿ ಸ್ಫ್ಫೂರ್ತಿಯ ಸೆಲೆಯಾಗಿಯೇ ಇರುತ್ತದೆ. ಅಕ್ಟೋಬರ್ ಕ್ರಾಂತಿಗೆ ಜಗತ್ತನ್ನು ಬದಲಿಸಲು ಸಾಧ್ಯವಾಗಿದ್ದರೆ, ಭಾರತದ ಕ್ರಾಂತಿಗೂ ಸಾಧ್ಯವಿದೆ. ಈ ಸಾಧ್ಯತೆಯನ್ನು ವಾಸ್ತವಗೊಳಿಸಲು ನಮ್ಮನ್ನು ಸಜ್ಜುಗೊಳಿಸಿಕೊಳ್ಳಬೇಕಾಗಿದೆ.

ಸಮಾಜವಾದಿ ರಾಷ್ಟ್ರಗಳ ಸಾಧನೆಗಳು- ನಿರುದ್ಯೋಗದ ನಿರ್ಮೂಲನೆ, ಶಿಕ್ಷಣ, ಆರೋಗ್ಯ, ವಸತಿ ಮುಂತಾದ ರಂಗಗಳಲ್ಲಿ ಸಾಮಾಜಿಕ ಭದ್ರತೆಯ ವಿಶಾಲ ಜಾಲ ವ್ಯವಸ್ಥೆ-ಜಗತ್ತಿನಾದ್ಯಂತ ಎಲ್ಲಾ ದುಡಿಯುವ ಜನಗಳಿಗೂ ತಮ್ಮ ಹೋರಾಟಗಳಲ್ಲಿ ಆತ್ಮವಿಶ್ವಾಸ ಮತ್ತು ಸ್ಪೂರ್ತಿ ನೀಡಿವೆ. ಈ ಕ್ರಾಂತಿಕಾರಿ ಪರಿವರ್ತನೆಗಳು ಮಾನವ ನಾಗರಿಕತೆಯಲ್ಲಿ ಗುಣಾತ್ಮಕ ನೆಗೆತಗಳನ್ನು  ತಂದವು ಮತ್ತು ಆಧುನಿಕ ನಾಗರೀಕತೆಯ ಮೇಲೂ ಅಚ್ಚಳಿಯದ ಗುರುತು ಮೂಡಿಸಿವೆ. ಇದರ ಪ್ರತಿಫಲನ ಸಂಸ್ಕøತಿ, ವಿಜ್ಞಾನ, ಸೌಂದರ್ಯಶಾಸ್ತ್ರ ಮುಂತಾಗಿ ಎಲ್ಲ ರಂಗಗಳಲ್ಲೂ ಕಾಣ ಬಂದವು.

ಸೋವಿಯತ್ ಒಕ್ಕೂಟ ಮತ್ತು ಜಾಗತಿಕ ಸಮಾಜವಾದ ಸಾಮ್ರಾಜ್ಯಶಾಹಿಯ ಸವಾಲನ್ನು ಎದುರಿಸಿದರೂ ಅದರ ಆಂತರಿಕ ಶಕ್ತಿ ಕೆಲವು ತಪ್ಪುಗಳಿಂದ ಮತ್ತು ಸೋವಿಯತ್ ಒಕ್ಕೂಟದಲ್ಲಿ ಸಮಾಜವಾದಿ ನಿರ್ಮಾಣದ ಪ್ರಕ್ರಿಯೆಯಲ್ಲಿನ ನ್ಯೂನ್ಯತೆಗಳಿಂದಾಗಿ ದುರ್ಬಲಗೊಂಡಿತು. ಹಿಂದಿರುಗಿ ನೋಡಿದಾಗ ಮೂಲತಃ ನಾಲ್ಕು ರಂಗಗಳಲ್ಲಿ ಪ್ರಮುಖ ನ್ಯೂನ್ಯತೆಗಳನ್ನು ಕಾಣಬಹುದು. ಸಮಾಜವಾದ ಹಿಂದೆ ಯಾರೂ ಸಾಗದ ಮಾನವ ಮುನ್ನಡೆಯ ಹಾದಿಯಲ್ಲಿ ಸಾಗಬೇಕಾಗಿತ್ತು ಎಂಬುದನ್ನು ಇಲ್ಲಿ ಒತ್ತಿ ಹೇಳಬೇಕಾಗುತ್ತದೆ. ಸಮಾಜವಾದಿ ರಚನೆಯ ನೀಲನಕ್ಷೆಗಳಿರಲಿಲ್ಲ, ಅಥವ ನಿರ್ದಿಷ್ಟ ಸೂತ್ರಗಳು ಇರಲಿಲ್ಲ.

ಸಮಾಜವಾದಕ್ಕೆ ಈ ಸೋಲುಗಳು ಉಂಟಾಗಿರುವುದು ಮಾಕ್ರ್ಸ್‍ವಾದ-ಲೆನಿನ್‍ವಾದದ ಕ್ರಾಂತಿಕಾರಿ ತತ್ವಗಳಲ್ಲಿನ ಯಾವುದೇ ಅಸಮರ್ಪಕತೆಯಿಂದ ಅಲ್ಲ ಎಂಬ ತೀರ್ಮಾನಕ್ಕೆ ಖಂಡಿತವಾಗಿ ಬರಬಹುದು. ಬದಲಾಗಿ, ಅವು ಉಂಟಾಗಿರುವುದು ಪ್ರಥಮತಃ ಮಾಕ್ರ್ಸ್‍ವಾದ-ಲೆನಿನ್‍ವಾದದ ವೈಜ್ಞಾನಿಕ ಮತ್ತು ಕ್ರಾಂತಿಕಾರಿ ಚಿಂತನೆಯಿಂದ ದೂರ ಸರಿದ ಕಾರಣದಿಂದಾಗಿಯೇ. ಆದ್ದರಿಂದ ಈ ಸೋಲುಗಳು ಮಾಕ್ರ್ಸ್‍ವಾದ-ಲೆನಿನ್‍ವಾದದ ಅಥವಾ ಸಮಾಜವಾದಿ ಆದರ್ಶದ ನಿರಾಕರಣೆ ಅಲ್ಲ.

ಸಮಾಜವಾದಿ ಆದರ್ಶ ಇನ್ನೂ ಇಂದಿನ ಜಾಗತಿಕ ಬಂಡವಾಳಶಾಹಿ ಬಿಕ್ಕಟ್ಟಿನ ಪರಿಸ್ಥಿತಿಗಳಲ್ಲಿ ಮನುಕುಲ ತನ್ನನ್ನು ಶೋಷಣೆಯಿಂದ ವಿಮೋಚಿಸಿಕೊಳ್ಳುವ ಏಕೈಕ ವಿಧಾನವಾಗಿಯೇ ಉಳಿದಿದೆ. ಬಂಡವಾಳಶಾಹಿಯ ಸುಲಿಗೆಕೋರ ಪ್ರವೃತ್ತಿ ಹೆಚ್ಚು  ನಗ್ನವಾದ ಸ್ವರೂಪ ಪಡೆಯುತ್ತಿದೆ ಎಂಬುದು ಹೆಚ್ಚೆಚ್ಚು ಸ್ಪಷ್ಟವಾಗುತ್ತಿದೆ. ಬಂಡವಾಳಶಾಹಿಯ ಒಳಗೆ ಎಷ್ಟೇ ಸುಧಾರಣೆಗಳನ್ನು ತಂದರೂ ಮನುಕುಲವನ್ನು ಇಂತಹ ಶೋಷಣೆಯ ಕಪಿಮುಷ್ಟಿಯಿಂದ ವಿಮೋಚಿಸಲು ಸಾಧ್ಯವಾಗದು. ಸಮಾಜವಾದದ ರಾಜಕೀಯ ಪರ್ಯಾಯ ಮಾತ್ರವೇ ಈ ಉದ್ದೇಶವನ್ನು ಈಡೇರಿಸಬಲ್ಲದು. ಅಂತಿಮವಾಗಿ ಶೋಷಣೆಯಿಂದ ಮಾನವ ವಿಮೋಚನೆಯಾಗಬೇಕಾದರೆ ಬಂಡವಾಳದ ಆಳ್ವಿಕೆಯ ಮೇಲೆ ಸಮಾಜವಾದದ ಈ ರಾಜಕೀಯ ಪರ್ಯಾಯದ ಪ್ರಹಾರವನ್ನು ತೀವ್ರಗೊಳಿಸಲೇ ಬೇಕಾಗಿದೆ.

ಭಾರತದಲ್ಲಿ ಸಮಾಜವಾದ ಎಂದರೆ ಏನರ್ಥ? ಅದರ ಅರ್ಥ ಎಲ್ಲ ಜನತೆಗೆ ಆಹಾರ ಭದ್ರತೆ, ಪೂರ್ಣ ಉದ್ಯೋಗ, ಶಿಕ್ಷಣ, ಆರೋಗ್ಯ ಮತ್ತು ವಸತಿಯ ಸಾರ್ವತ್ರಿಕ ಲಭ್ಯತೆ. ಅದರ ಅರ್ಥ ಕಾರ್ಮಿಕರು, ರೈತರು ಮತ್ತು ಇದುವರೆಗೆ ಅಂಚಿಗೆ ತಲ್ಲಲ್ಪಟ್ಟ ಜನವಿಭಾಗಗಳ ಬದುಕಿನ ಪರಿಸ್ಥಿತಿಗಳನ್ನು ವ್ಯಾಪಕ ರೀತಿಯಲ್ಲಿ ಉತ್ತಮ ಪಡಿಸಿ ಜನತೆಯ ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕ ಸಬಲೀಕರಣ