ತೋರಣಗಲ್‍ನಲ್ಲಿ ಬಹಿರಂಗ ಸಭೆ

ಸಂಪುಟ: 
10
ಸಂಚಿಕೆ: 
45
Sunday, 30 October 2016

ಬಳ್ಳಾರಿ ಜಿಲ್ಲೆ ಸಂಡೂರು ತಾಲ್ಲೂಕಿನ ಇಪ್ಸಿಲಾನ್ ಕಾರ್ಬೈಡ್ ಪ್ರೈವೇಟ್ ಲಿಮಿಟೆಡ್ ಕಂಪನಿ (ಇಸಿಪಿಎಲ್) ವತಿಯಿಂದ ತಾಲ್ಲೂಕಿನ ಸುಲ್ತಾನಪುರ ಬಳಿಯಲ್ಲಿ ಕೋಲ್ಟಾರ್ ಕಾರ್ಖಾನೆ ವಿರೋಧಿ ಚಳುವಳಿಗಾರರ ಬಂಧನ ಖಂಡಿಸಿ ಸಿಪಿಐ(ಎಂ) ಪಕ್ಷದ ವತಿಯಿಂದ ಅಕ್ಟೋಬರ್ 24, ಸೋಮವಾರದಂದು ಬೃಹತ್ ಬಹಿರಂಗ ಸಭೆ ಮತ್ತು ರ್ಯಾಲಿಯನ್ನು ನಡೆಸಲಾಯಿತು.

ಕಾರ್ಖಾನೆ ಸ್ಥಾಪನೆ ವಿರುದ್ಧ, ಜಿಂದಾಲ್ ಕಂಪನಿಯ ಲಾಭಿ, ಅವ್ಯವಹಾರ, ಜನತೆಯ ಹೋರಾಟ ಹಾಗೂ ಹೋರಾಟಗಾರರ ಮೇಲಿನ ದೌರ್ಜನ್ಯಗಳ ಬಗ್ಗೆ ಮಾಜಿ ಶಾಸಕರು ಹಾಗೂ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಜಿ.ವಿ.ಶ್ರೀರಾಮರೆಡ್ಡಿ, ಸಿಐಟಿಯು ರಾಜ್ಯ ಉಪಾಧ್ಯಕ್ಷರಾದ ವಿ.ಜೆ.ಕೆ.ನಾಯರ್, ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಯು.ಬಸವರಾಜು, ಜಿಲ್ಲಾ ಕಾರ್ಯದರ್ಶಿ ಆರ್.ಎಸ್.ಬಸವರಾಜುರವರು ಮಾತನಾಡಿದರು.

ಸಿಐಟಿಯು ತಾಲ್ಲೂಕು ಘಟಕದ ಅಧ್ಯಕ್ಷ ಜೆ.ಎಂ.ಚೆನ್ನಬಸಯ್ಯ, ಎಂ.ಜಂಬಯ್ಯ, ಭಾಸ್ಕರ್‍ರೆಡ್ಡಿ, ನಾಗರತ್ನಮ್ಮ, ವಿ.ಶಿವಶಂಕರ್, ಎ.ಸ್ವಾಮಿ, ಬಿ.ಮಹೇಶ್, ಶರಣಪ್ಪ ಕೋಟಗಿನಹಾಳ್, ಜಂಬಯ್ಯ ಸೇರಿದಂತೆ ಹಲವಾರು ಮುಖಂಡರು ಭಾಗವಹಿಸಿದ್ದರು. ಎಂ.ತಾತಪ್ಪ ಸ್ವಾಗತಿಸಿದರು. ಕೋನಪ್ಪ ಕಾರ್ಯಕ್ರಮ ನಿರೂಪಿಸಿದರು. ಜೆ.ಸತ್ಯಬಾಬು ವಂದನಾರ್ಪಣೆ ಮಾಡಿದರು.