ಸಾಗುವಳಿದಾರರ ಸಮಾವೇಶ

ಸಂಪುಟ: 
10
ಸಂಚಿಕೆ: 
45
Sunday, 30 October 2016

ಭೂಗಳ್ಳರಿಗೆ ಸುಲಭವಾಗಿ ಭೂಮಿಯನ್ನು ನೀಡುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸರ್ಕಾರ, ಬಡ ರೈತರಿಗೆ ಭೂಮಿ ನೀಡಲು ವಿಫಲವಾಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷರಾದ ಮಾರುತಿ ಮಾನ್ಪಡೆರವರು ಆರೋಪಿಸಿದರು. ಶಿವಮೊಗ್ಗ ನಗರದ ಎನ್.ಇ.ಎಸ್. ಸಭಾಂಗಣದಲ್ಲಿ ಅಕ್ಟೋಬರ್ 26ರಂದು ಕಂದಾಯ ಭೂಮಿ ಹಾಗೂ ಅರಣ್ಯ ಭೂಮಿ ಸಾಗುವಳಿದಾರರಿಗೆ ಭೂ ಮಂಜೂರಾತಿ ಮಾಡಬೇಕೆಂದು ಕೆ.ಪಿ.ಆರ್.ಎಸ್ ವತಿಯಿಂದ ಹಮ್ಮಿಕೊಂಡಿದ್ದ ಜಿಲ್ಲಾ ಸಮಾವೇಶದಲ್ಲಿ ಅವರು ಮಾತನಾಡಿದರು.

ಸಾಗುವಳಿದಾರರು ಹೋರಾಟಕ್ಕೆ ಮುಂದಾಗಬೇಕೆಂದು, ನವೆಂಬರ್ 18ರಂದು ರಾಜ್ಯಾದ್ಯಂತ ಹಮ್ಮಿಕೊಂಡಿರುವ ಜೈಲ್ ಭರೋ ಕಾರ್ಯಕ್ರಮದಲ್ಲಿ ಭಾಗವಹಿಸಲು ಕರೆ ನೀಡಿದರು. ಅಲ್ಲದೆ ತಾಲ್ಲೂಕಿನಾದ್ಯಂತ ಜನರ ನಡುವೆ ಮತಪ್ರದರ್ಶನದ ಮೂಲಕ ಪ್ರಚಾರ ನಡೆಸಬೇಕೆಂದು ತೀರ್ಮಾನಿಸಿದರು.