ಸತತ ನಾಲ್ಕು ದಿನಗಳ ಹೋರಾಟ ನಡೆಸಿದ ಬಿಬಿಎಂಪಿ ಕಂಪ್ಯೂಟರ್ ಆಪರೇಟರ್ಸ್

Thursday, 27 October 2016

ಬಿಬಿಎಂಪಿ ಕಂಪ್ಯೂಟರ್ ಆಪರೇಟರ್ಸ್ ಯೂನಿಯನ್ ವತಿಯಿಂದ 4ನೇ ದಿನದ ಧರಣಿಯು ಅಕ್ಟೋಬರ್ 27, 2016ರಂದು ನಡೆಸಲಾಯಿತು. ಧರಣಿ ಮುಂದುವರಿಸಲಾಯ್ತು, ಸಂಜೆಯ ಹೊತ್ತಿಗೆ ಸಹಾಯಕ ಕಾರ್ಮಿಕ ಆಯುಕ್ತರು ಆಪರೇಟರ್ಸು ಗುತ್ತಿಗೆದಾರರನ್ನು ಮತ್ತು ಪ್ರಧಾನ ಮಾಲೀಕರನ್ನು ಕರೆಸಿ ಸಭೆ ನಡೆಸಿದರು. ಜಿಲ್ಲಾ ಕಾರ್ಮಿಕ ಆಯುಕ್ತರಾದ ಶ್ರೀಪಾದುರವರು, ನೌಕರರ ಯೂನಿಯನ್ ಕಾನೂನು ಸಲಹೆಗಾರರಾದ ಕಾಂ.ಉಮೇಶ್ ರವರು ಮತ್ತು ಯೂನಿಯನ್ ಕಾರ್ಯಕಾರಿ ಸಮಿತಿಯ ಸದಷ್ಯರ ಎಲ್ಲ ರ ಸಮ್ಮುಖದಲ್ಲಿ ಸಭೆ ನಡೆಡಿದೆ.

ಗುತ್ತಿಗೆದಾರರು ಆಪರೇಟರ್ ಗಳಿಗೆ ಮೇ 2016 ರ ವೇತನ ಇಂದೇ ಎಲ್ಲ ಬಿಬಿಎಂಪಿ ವಲಯಗಳಿಗೆ ಹಾಕಿರುತ್ತೇವೆ ಎಂದು ತಿಳಿಸಿದರು. ಜೂನ್ 2016 ರ ವೇತನವನ್ನು 28.10.16 ರಿಂದ 7 ಕೆಲಸದ ದಿನಗಳ ಒಳಗೆ ಪಾವತಿಸಲು ಗುತ್ತಿಗೆ ದಾರರು ಒಪ್ಪಿರುತ್ತಾರೆ. (7 ಸೆ. 2016) ಒಳಗೆ

ಬಿಬಿಎಂಪಿ ರವರು ಗುತ್ತಿಗೆ ದಾರರಿಗೆ ಜೂನ್ 2016 ರ ವೇತನ ಜಮೆಯನ್ನು ನವೆಂಬರ್ 15, 2016ರ ಒಳಗೆ ನೀಡುವುದೆಂದು ಬಿಬಿಎಂಪಿ ರವರು ತಿಳಿಸಿರುತ್ತಾರೆ. ಬಿಲ್ ನೀಡಿದ ನಂತರ ಏಪ್ರಿಲ್, ಮೆ, ಜೂನ್ ಜುಲೈ, ವೇತನ ನೀಡುವುದೆಂದು ಬಿಬಿಎಂಪಿ ರವರು ಒಪ್ಪಿರುತ್ತಾರೆ.

ನಂತರ ಗುತ್ತಿಗೆದಾರರು ಅಕ್ಟೊಬರ 2016 ರ ವೇತನವನ್ನು ನವೆಂಬರ್ 26 ರೊಳಗೆ ಕಾರ್ಮಿಕರಿಗೆ ಪಾವತಿಸಬೇಕು. ಈ ಬಗ್ಗೆ ಗುತ್ತಿಗೆದಾರರು ಒಪ್ಪಿರುತ್ತಾರೆ.

ಮುಂದುವರೆದು ಪ್ರತಿ ತಿಂಗಳ ವೇತನವನ್ನು 10ನೇ ತಾರಿಕಿನ ಒಳಗೆ ಪಾವತಿಸಬೇಕೆಂದು ಸೂಚಿಸಿದರು. ಗುತ್ತಿಗೆ ದಾರರು ಸಕಾಲದಲ್ಲಿ ಹಾಜರಾತಿ ಮತ್ತು ಬಿಲ್ ಗಳನ್ನು ನೀಡಬೇಕೆಂದು ಸೂಚಿಸಿದರು.

ಗುತ್ತಿಗೆದಾರರದ ಆರ್. ಎಂ. ಎಸ್. ಟೆಕ್ನಾಲಜಿಸು ರವರು ನೌಕರರಿಗೆ ಸೆಪ್ಟ 0ಬರ್ 2016 ರ ವೇತನ ದಿ. 8.11.2016 ರೊಲಗೆ ಪಾವತಿಸಬಹುದಾಗಿ ಒಪ್ಪಿರುತ್ತಾರೆ. ಅಕ್ಟೊಬರ್ ಮಾಹೇಯ ವೇತನವನ್ನು ದಿ. 19.11.2016 ರೊಳಗೆ ಪಾವತಿಸಬೇಕು. ಮುಂದಿನ ದಿನಗಳಲ್ಲಿ ಪ್ರತಿ ತಿಂಗಳ ಮಾಹೆಯ 10ನೇ ತಾರೀಖು ನೊಳಗೆ ಪಾವತಿಸಲು ಒಪ್ಪಿರುತ್ತಾರೆ.

ದಾಸರಹಳ್ಳಿ ಆರ್. ಆರ್. ನಗರ ನೌಕರಿಗೆ ಗುತ್ತಿಗೆದಾರರಿಗೆ ವೇತನ ನೀಡಲು ಸೂಚಿಸಿರುತ್ತಾರೆ. ನ.26 ರೊಳಗೆ ಅಕ್ಟೊಬರ 2016ರ ವೇತನ ಪಾವತಿಸಲು ಸೂಚಿಸಿದೆ. ಗುತ್ತಿಗೆದಾರರು ಒಪ್ಪಿರುತ್ತಾರೆ. 

ಆರ್.ಮ್.ಎಸ್. ಗುತ್ತಿಗೆ ದಾರ ರಲ್ಲಿ ಕೆಲಸ ನಿರ್ವಹಿಸುತ್ತಿರುವ ಐಟಿ ನೌಕರರಿಗೆ ವೇತನ ಕಡಿಮೆ ಮಾಡಿರುವ ಬಗ್ಗೆ ಪರಿಶೀಲಿಸಲು ಕ್ರಮ ಜರುಗಿಸಲು ಬಿಬಿಎಂಪಿ ರವರಿಗೆ ನೀಡಿದೆ. ವೇತನ ಹೆಚ್ಚಳಕ್ಕಾಗಿ ಗುತ್ತಿಗೆದಾರರಿಗೆ ಸಲಹೆ ನೀಡಿದರು.

ಮುಂದಿನ ಸಭೆಯನ್ನು ನವೆಂಬರ್ 21, 2016ರ ಮಧ್ಯಾಹ್ನ 3.30 ಗಂಟೆಗೆ ಕರೆಯಲಾಗಿದೆ.

 

 

-   ಪಳನಿ ಸ್ವಾಮಿ ಜಿ.ಕೆ