ಹೆಚ್.ಸಿ.ಚನ್ನಪ್ಪ ಭವನಕ್ಕೆ ಅಡಿಗಲ್ಲು

Tuesday, 25 October 2016

ಕಾಮ್ರೆಡ್ ಹೆಚ್.ಸಿ.ಚನ್ನಪ್ಪ ಭವನ ಅಡಿಗಲ್ಲು ಸಮಾರಂಭ ತುಮಕೂರಿನಲ್ಲಿ ನಡೆಯಿತು. ಜನ ಚಳುವಳಿಯ ಕೇಂದ್ರವನ್ನಾಗಿ ಇದನ್ನು ಬಳಸಿಕೊಳ್ಳಲು ಕಾರ್ಮಿಕರು ಉದಾರ ಸಹಾಯ ಹಸ್ತದಿಂದ ದುಡಿಯುವ ಜನತೆಗಾಗಿ ಆರ್ಪಿಸಲಾಗುತ್ತದೆ. ಅಕ್ಟೋಬರ್ 25, 2016ರ ಮಂಗಳವಾರದಂದು ತುಮಕೂರಿನ ಗಾಂಧಿನಗರದಲ್ಲಿ ವಿದ್ಯೋದಯ ಕಾನೂನು ಕಾಲೇಜು ಹತ್ತಿರ ನಡೆದ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಗಳನ್ನು ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷರಾದ ಬಿ.ಉಮೇಶ್ ರವರು ನುಡಿದರು.

ನಿವೃತ್ತ ನ್ಯಾಯಾಧೀಶರಾದ ಟಿ.ಜಿ.ಮರಿಯಪ್ಪ ,ಸ್ವಾತಂತ್ರ್ಯ ಹೋರಾಟಗಾರ ಟಿ.ಆರ್. ರೇವಣ್ಣ, ವಿಜ್ಞಾನ ಲೆಖಕ. ಡಾ. ಎಚ್.ಎಸ್. ನಿರಂಜನಾರಾಧ್ಯ, ಹಿರಿಯ ವಕೀಲ ಬಿ.ಡಿ.ರಾಮಯ್ಯ, ರಾಜೆಂದ್ರ ನಾಯಕ್, ಪ್ರೊ. ಜಿ.ಎಂ.ಶ್ರೀನಿವಾಸಯ್ಯ, ಹಿರಿಯ ಕಾಮರ್ಿಕ ಮುಕಂಡ ಕೋದಂಡರಾಮು, ನಿವೃತ್ತ ಅಭಿಯಂತರರಾದ ಪುಟ್ಟಯ್ಯ, ಪ್ರೊ.ಕೆ.ದೊರೈರಾಜ್, ಈ ಬಸವರಾಜು, ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ, ರಾಜ್ಯ ಕಾರ್ಯದರ್ಶಿ ಕೆ.ಎನ್.ಉಮೇಶ್, ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಜಿ.ಎನ್.ನಾಗರಾಜ್, ಮತ್ತುಈ ಸಮಾರಂಭದಲ್ಲಿ ಭವನದ ನಿಮರ್ಾಣಕ್ಕೆ ಶುಭಹಾರೈಸಿ , ಸಾಹಿತಿ ಡಾ. ಓ. ನಾಗರಾಜು, ಹೆಚ್.ಸಿ. ಕೇಶವಮೂರ್ತಿ, ಎ.ಲೋಕೇಶ್, ಸಿ.ವೆಂಕಟೇಶ್, ಗುಲ್ಜಾರ್ಭಾನು ಸೇರಿದಂತೆ ವಿವಿಧ ಸಂಘಟನೆಯ ಮುಖಡರು ಮಾತನಾಡಿದರು.

ಅಧ್ಯಕ್ಷತೆಯನ್ನು ಸೈಯದ್ಮುಜೀಬ್ ವಹಿಸಿದ್ದರು ಎನ್.ಕೆ.ಸುಬ್ರಮಣ್ಯ ಸ್ವಾಗತಿಸಿ, ನೌಷಾದ್ಸೆಹಗನ್ ವಂದಿಸಿದರು. ಇತರ ಮುಖಂಡರು ಹಾಜರಿದ್ದರು.